1. ಸುದ್ದಿಗಳು

ಕೃವಿವಿ ಬೆಂಗಳೂರಿನಲ್ಲಿ ಎರಡು ವರ್ಷಗಳ ಡಿಪ್ಲೊಮಾ (ಕೃಷಿ) ಮತ್ತು ಡಿಪ್ಲೊಮಾ(ರೇಷ್ಮೆ ಕೃಷಿ) ಕೊರ್ಸ್ ಗೆ ಅರ್ಜಿ ಆಹ್ವಾನ

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು 2021-22ನೇ ಸಾಲಿನ ಎರಡು ವರ್ಷಗಳ ಡಿಪ್ಲೊಮಾ ಕೊರ್ಸ್ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಡಿಪ್ಲೊಮಾ (ಕೃಷಿ) ಕೃಷಿ ಮಹಾವಿದ್ಯಾಲಯ, ವಿ.ಸಿ. ಫಾರಂ, ಮಂಡ್ಯದಲ್ಲಿ ಮತ್ತು  ಡಿಪ್ಲೊಮಾ (ರೇಷ್ಮೆ ಕೃಷಿ), ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿರುತ್ತವೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಟ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿ (ಪ.ಜಾ./ಪ.ಪಂ./ಪ್ರವರ್ಗ-I ರವರುಗಳಿಗೆ ಕನಿಷ್ಠ ಶೇ.40 ಅಂಕಗಳು). ಏಪ್ರಿಲ್, 2021 ರಂದು 19 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.

ರೈತರ ಹಾಗು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.  ಅಭ್ಯರ್ಥಿಗಳು (ಸಾಮಾನ್ಯ ವರ್ಗ-ರೂ.500/- ಮತ್ತು ಪ.ಜಾ./ಪ.ಪಂ./ಪ್ರವರ್ಗ-1 ರೂ.250/-) ರಾಷ್ಟೀಕೃತ ಬ್ಯಾಂಕುಗಳಲ್ಲಿ ಡಿ.ಡಿ.ಯನ್ನು ಹಣಕಾಸು ನಿಯಂತ್ರಣಾಧಿಕಾರಿಗಳು, ಕೃವಿವಿ, ಬೆಂಗಳೂರು–560 065 ರವರ ಹೆಸರಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-560 065 ರವರಿಗೆ ದಿನಾಂಕ:22-09-2021ರ ಒಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬೇಕು.

 ಅರ್ಜಿ ಮತ್ತು ಮಾಹಿತಿ ಪುಸ್ತಕವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವೆಬ್‌ಸೈಟ್ ತಿwww.uasbangalore.edu.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯನ್ನು ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್ ಸೈಟ್ ಮುಖಾಂತರ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080-23330149ಕ್ಕೆ ಸಂಪರ್ಕಿಸಬಹುದು.

ಜಿ.ಟಿ.ಟಿ.ಸಿ.: ಡಿಪ್ಲೋಮಾ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕಲಬುರಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ.) ದಲ್ಲಿ 2021-22ನೇ ಸಾಲಿಗೆ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೆಕಿಂಗ್ ಹಾಗೂ ಡಿಪ್ಲೋಮಾ ಇನ್ ಪ್ರಿಶಿಷನ್ ಮ್ಯಾನುಪ್ಯಾಕ್ಚರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿ.ಟಿ.ಟಿ.ಸಿ. ಪ್ರಾಂಶುಪಾಲರಾದ ಜೈರಾಜ. ಟಿ.ನರಗುಂದ ಅವರು ತಿಳಿಸಿದ್ದಾರೆ.

ಈ ಕೋರ್ಸ್ಗಳ ತರಬೇತಿಯ ಅವಧಿಯು 3 ವರ್ಷ ಇದ್ದು, ಕಲಬುರಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ಐ.ಟಿ.ಐ. ಪಾಸಾದ ವಿಧ್ಯಾರ್ಥಿಗಳು ನೇರವಾಗಿ 2ನೇ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.   ಅರ್ಜಿ ಸಲ್ಲಿಸಲು ಇದೇ ಆಗಸ್ಟ್ 28 ಕೊನೆಯ ದಿನವಾಗಿದೆ. ಆಗಸ್ಟ್ 31 ರಂದು ಕೌನ್ಸಿಲಿಂಗ್ ನಡೆಯಲಿದೆ.

 ಅರ್ಹ ವಿದ್ಯಾರ್ಥಿಗಳು  ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಂತ್ರಾಸ್‌ವಾಡಿಯಲ್ಲಿನ  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೇಂದ್ರ (ಜಿ.ಟಿ.ಟಿ.ಸಿ.) ವನ್ನು ಹಾಗೂ ಮೊಬೈಲ್ ಸಂಖ್ಯೆ 8722822497, 8970451432 ಹಾಗೂ ಕಚೇರಿ ದೂರವಾಣಿ 08472-295163 ಗಳಿಗೆ ಸಂಪರ್ಕಿಸಲು ಕೋರಲಾಗಿದೆ. 

Published On: 25 August 2021, 09:07 AM English Summary: Application Invitation for Diploma course in Agriculture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.