1. ಸುದ್ದಿಗಳು

ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗೆ ಲೇಖಕರಿಂದ ಅರ್ಜಿ ಆಹ್ವಾನ

university

ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯ 2019ನೇ ಸಾಲಿನ 'ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ'ಗಾಗಿ ಲೇಖಕರಿಂದ ಅರ್ಜಿ ಆಹ್ವಾನಿಸಿದೆ.

ಪ್ರಶಸ್ತಿಯು10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.  ಆಸಕ್ತ ಲೇಖಕರು 2019ರ ಜನವರಿಯಿಂದ ಡಿಸೆಂಬರ್ ತಿಂಗಳ ಒಳಗೆ ಪ್ರಕಟವಾಗಿರುವ ಕನ್ನಡದ ಕೃಷಿ ಪುಸ್ತಕಗಳ ತಲಾ ಮೂರು ಪ್ರತಿಯನ್ನು ಕಳುಹಿಸಬೇಕು.

ಪುಸ್ತಕವು ಸ್ವಂತ ರಚನೆಯಾಗಿರಬೇಕು. ಅನುವಾದಿತ ಕೃತಿಯಾಗಿರಬಾರದು. ಇತರ ಲೇಖಕರ ಬರಹಗಳ ಸಂಪಾದಿತ ಕೃತಿಯಾಗಿರಬಾರದು. ಪುಸ್ತಕವು ಮೊದಲ ಪ್ರಕಟಣೆ/ಆವೃತ್ತಿಯಾಗಿರಬೇಕು. ಮರುಮುದ್ರಿತ/ಪರಿಷ್ಕರಿಸಿ ಮರುಮುದ್ರಿಸಿದ ಪುಸ್ತಕವಾಗಿರಬಾರದು.  ಕನಿಷ್ಠ 1/8 ಕ್ರೌನ್ ಅಳತೆಯ (ತಾಂತ್ರಿಕ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 50 ಪುಟಗಳಷ್ಟಿರ ಇರಬೇಕು. ಜುಲೈ 31 ರೊಳಗೆ ಲೇಖಕರು ಪುಸ್ತಕ ಕಳುಹಿಸಿಕೊಡಬೇಕು.

 ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560 065.

ಪುಸ್ತಕ ಪ್ರಶಸ್ತಿ ಅರ್ಜಿ ನಮೂನೆಯನ್ನುhttps://uasbangalore.edu.in/ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-23330239ಕ್ಕೆ ಸಂಪರ್ಕಿಸಬಹುದು.

Published On: 10 July 2020, 02:03 PM English Summary: application for agriculture book award

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.