1. ಸುದ್ದಿಗಳು

ನಾಗರಹಾವನ್ನು ಕಚ್ಚಿಕೊಂದ ಎಂಟು ವರ್ಷದ ಬಾಲಕ!

Hitesh
Hitesh
An eight-year-old boy bitted to cobra!

ತನಗೆ ಕಚ್ಚಿದ ನಾಯಿಗೆ ಮತ್ತೆ ಕಚ್ಚಿವ ವ್ಯಕ್ತಿಯ ಬಗ್ಗೆ ಕೇಳಿರುತ್ತೀರಿ, ಇಲ್ಲೊಬ್ಬ ಹುಡುಗ ಹಾವನ್ನು ಕಚ್ಚಿ ಸಾಯಿಸಿದ್ದಾನೆ. ಹೌದು ಇಂತಹದೊಂದು ಅಚ್ಚರಿ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ…

ಇದನ್ನೂ ಓದಿರಿ ರಾಜ್ಯದಲ್ಲಿ “ಬಿಯರ್‌” ಕುಡಿಯುವವರ ಸಂಖ್ಯೆ ಹೆಚ್ಚಳ: ಹೊಸ ಮದ್ಯ ಪ್ರಿಯರ ಸೇರ್ಪಡೆ!?

ಛತ್ತೀಸ್​ಗಢದ (Chhattisgarh) ಜಶ್‌ಪುರ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕ ದೀಪಕ್‌ ಅವರ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.  

ಬಾಲಕ ಆಟವಾಡುವಾಗ ನಾಗರಹಾವು (Cobra) ಬಾಲಕನ ಕಾಲಿಗೆ ಸುತ್ತಿಕೊಂಡಿದ್ದು, ಬಿಡಿಸಿಕೊಳ್ಳಲು ಹೋದಾಗ ಕಾಲಿಗೆ ಸುತ್ತಿಕೊಂಡಿದ್ದ ನಾಗರಹಾವನ್ನು ಬಿಡಿಸುವ ಭರದಲ್ಲಿದ್ದ ಯುವಕನಿಗೇ ತಿಳಿಯದೆ ಹಾವು ಆತನ ಕೈಗೆ ಸುತ್ತಿಕೊಂಡಿದೆ.

ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇದರಿಂದ ಆತಂಕಗೊಂಡ ಬಾಲಕ ನಾಗರಹಾವಿಗೆ ಬಲವಾಗಿ ಕಚ್ಚಿದ್ದಾನೆ!. ಬಾಲಕ ಹಾವಿಗೆ ಕಚ್ಚುತ್ತಿದ್ದಂತೆಯೇ ಹಾವಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ನಾಗರಹಾವೇ ಸಾವನ್ನಪ್ಪಿದೆ.

 ಬಾಲಕ ಹಾವನ್ನು ಕೈಯಿಂದ ಬಿಡಿಸಿಕೊಳ್ಳುವ ಅವಸರದಲ್ಲಿ ಎರೆಡು ಬಾರಿ ಹಾವಿಗೆ ಬಲವಾಗಿ ಕಚ್ಚಿದ್ದಾನೆ! ಹೀಗಾಗಿ, ಕೈಗೆ ಸುತ್ತಿಕೊಂಡಿದ್ದ ಹಾವು ನೆಲಕ್ಕೆ ಬಿದ್ದಿದೆ.

ಬಾಲಕನ ಕಿರುಚಾಟವನ್ನು ಕೇಳಿ ಆತನ ಮನೆಯವರು ಹಾಗೂ ಸುತ್ತಮುತ್ತಲಿನ ಜನರು ಜಮಾಯಿಸಿದ್ದಾರೆ. ಈ ವೇಳೆಗಾಗಲೇ ಹಾವು ನೆಲಕ್ಕೆ ಬಿದ್ದಿದ್ದು, ಸಾವನ್ನಪ್ಪಿದೆ.

ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!

ಹಾವು ಮೊದಲು ನನ್ನ ಕಾಲಿಗೆ ಸುತ್ತಿಕೊಂಡಿದ್ದು, ಬಿಡಿಸಿಕೊಳ್ಳಲು ಹೋಗುವಷ್ಟರಲ್ಲಿ ಕೈಗೆಸುತ್ತಿಕೊಂಡು ಕಚ್ಚಿತು. ಭಯ, ಕೋಪದಿಂದ ನಾನು ಎರಡು ಬಾರಿ ಹಾವಿಗೆ ಕಚ್ಚಿದೆ.

ಹಾವಿನಿಂದ ಬಿಡಿಸಿಕೊಳ್ಳು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ನನ್ನನ್ನು ಬಿಡಲೇ ಇಲ್ಲ.

ಕೊನೆಗೆ ಹಾವಿಗೆ ಎರಡು ಬಾರಿ ಕಚ್ಚಿದೆ ಎಂದು ಬಾಲಕ ದೀಪಕ್ ಹೇಳಿರುವುದಾಗಿ ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.  

ನಾಗರಹಾವು ಕಚ್ಚಿದೆ, ಬಾಲಕ ಎರಡು ಬಾರಿ ಮತ್ತೆ ಹಾವಿಗೆ ಕಚ್ಚಿದೆ. ಆದರೆ, ಬಾಲಕನಿಗೆ ಎನೂ ಆಗದಿರುವುದು ಅಚ್ಚರಿ ಮೂಡಿಸಿದೆ.  

Delhi Air Pollution ನಮ್ಮನ್ನಷ್ಟೇ ದೂರಬೇಡಿ, ಪರಿಹಾರ ಹುಡುಕಿ: ಕ್ರೇಜಿವಾಲ್‌!

An eight-year-old boy bitted to cobra!

ತನಗೆ ಹಾವು ಕಚ್ಚಿದ ಎಂದು ದೀಪಕ್‌ ಪೋಷಕರಿಗೆ ತಿಳಿಸುತ್ತಿದ್ದಂತೆಯೇ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಬಾಲಕನಿಗೆ ಔಷಧಿ ನೀಡಲಾಗಿದೆ. ಆ ಹಾವು ಬಾಲಕನ ದೇಹದಲ್ಲಿ ವಿಷವನ್ನು ಬಿಟ್ಟಿರಲಿಲ್ಲ. ಅದು ಹಾಗೇ ಕಚ್ಚಿತ್ತು. ಹೀಗಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಒಂದು ದಿನದ ಮಟ್ಟಿಗೆ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.

ಬಾಲಕ ಈಗ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.   

Pm kisan, ಕಿಸಾನ್ ಪಿಂಚಣಿ ಯೋಜನೆ: 200 ರೂಪಾಯಿ ಹೂಡಿಕೆ ಮಾಡಿ 3 ಸಾವಿರ ಪಿಂಚಣಿ ಗಳಿಸಬಹುದು!

Published On: 06 November 2022, 12:16 PM English Summary: An eight-year-old boy bitted to cobra!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.