1. ಸುದ್ದಿಗಳು

Amul Milk Price Hike : ಅಮೂಲ್‌ ಹಾಲಿನ ದರದಲ್ಲಿ ಮತ್ತೆ 3 ರೂಪಾಯಿ ಹೆಚ್ಚಳ!

Kalmesh T
Kalmesh T
Amul milk price Hike: Amul milk price hiked again by 3 rupees!

Amul Milk Price Hike: ಇತ್ತೀಚಿಗಷ್ಟೇ ಹಲವು ಹಾಲಿನ ಕಂಪನಿಗಳು ತಮ್ಮ ಹಾಲಿನ ದರಗಳನ್ನ ಏರಿಕೆ ಮಾಡಿದ್ಯಾದವು. ಅದರ ಬೆನ್ನಲ್ಲೇ ಇದೀಗ ಮತ್ತೆ ಅಮೂಲ್‌ ತನ್ನ ಹಾಲಿನ ದರವನ್ನು ಹೆಚ್ಚಿಸಿದೆ. ಇಲ್ಲಿದೆ ಇತ್ತೀಚಿನ ದರಗಳ ವಿವರ..

ಪಿಂಚಣಿದಾರರೇ ಗಮನಿಸಿ : ಫೆಬ್ರವರಿ 20ರೊಳಗೆ ಈ ಕೆಲಸ ಮಾಡುವಂತೆ ಸರ್ಕಾರದ ಸೂಚನೆ!

Amul Milk Price Hike: ಅಮೂಲ್‌ ಪ್ರತಿ ಲೀಟರ್ ಹಾಲಿನ ಬೆಲೆ 3 ರೂಪಾಯಿಯಷ್ಟು ಹೆಚ್ಚಳ ಮಾಡಿದೆ. ಅಮೂಲ್ ಹಾಲಿನ ದರವನ್ನು ಒಂದು ಲೀಟರ್‌ಗೆ 3 ರೂಪಾಯಿವರೆಗೆ ಹೆಚ್ಚಿಸಲಾಗಿದೆ.

ಈ ಹೆಚ್ಚಳದ ನಂತರ ಒಂದು ಲೀಟರ್ ಅಮುಲ್ ಗೋಲ್ಡ್ (Amul Gold) ಬೆಲೆ 63 ರೂಪಾಯಿಯಿಂದ  66 ರೂಪಾಯಿಗೆ ಏರಿಕೆಯಾಗಲಿದೆ.

14 ಲಕ್ಷ ರೈತರಿಗೆ 1900 ಕೋಟಿ ಬೆಳೆಹಾನಿ ಪರಿಹಾರ: ಸಿಎಂ ಬೊಮ್ಮಾಯಿ

1 ಲೀಟರ್ ಅಮುಲ್ ತಾಜಾ ಹಾಲಿನ ಬೆಲೆ ₹54 ರೂಪಾಯಿ ಆಗಿತ್ತು. ಇನ್ಮುಂದೆ ಅಮುಲ್ ಹಸುವಿನ ಹಾಲಿಗೆ 56 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಅಂತೆಯೇ ಅಮುಲ್ ಎ2 ಎಮ್ಮೆಯ ಹಾಲಿನ ದರ ಲೀಟರ್‌ಗೆ 70 ರೂಪಾಯಿಗೆ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಈ ವರ್ಷ ಮೊದಲ ಬಾರಿಗೆ ಅಮುಲ್ ಹಾಲಿನ ದರವನ್ನು ಹೆಚ್ಚಿಸಲಾಗಿದೆ.

ಪಡಿತರದಾರರಿಗೆ ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್‌! ಏನದು ಗೊತ್ತೆ?

ಹಿಂದೆ ಅಮುಲ್ 2022ರಲ್ಲಿ ಹಾಲಿನ ದರವನ್ನು 3 ಬಾರಿ ಹೆಚ್ಚಳ ಮಾಡಿತ್ತು. ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ದರ ಹೆಚ್ಚಳ ಮಾಡಿತ್ತು.

ಈ ಹಿಂದೆ ಸಾಮಾನ್ಯವಾಗಿ ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆಯಾಗುತ್ತಿತ್ತು, ಆದರೆ ಈ ಬಾರಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.

Published On: 03 February 2023, 05:03 PM English Summary: Amul milk price Hike: Amul milk price hiked again by 3 rupees!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.