1. ಸುದ್ದಿಗಳು

ಉತ್ತಮ ಮುಂಗಾರು- ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ನಿರೀಕ್ಷೆ

ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೃಷಿ ಚಟುವಟಿಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕೃಷಿ ವಲಯ ಬಿಟ್ಟು ಎಲ್ಲಾ ವಲಯಗಳಲ್ಲಿ ಕೊರೋನಾ ಸೋಂಕು ತಡೆಯಲು ವಿಧಿಸಿದ ಲಾಕ್ಡೌನ್ ದಿಂದಾಗಿ ಪರಿಣಾಮ ಬೀರಿದೆ. ಕೃಷಿವಲಯ ಒಂದೇ ಆಶಾದಾಯಕವಾಗಿದೆ. ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುವ ನಿರೀಕ್ಷೆ ಮಾಡಲಾಗಿದೆ.

ದೇಶಾದ್ಯಂತ ಪ್ರಸಕ್ತ ವರ್ಷ ಮುಂಗಾರು ಉತ್ತಮವಾಗಿ ಸುರಿಯುತ್ತಿದ್ದು, ಆಹಾರ ಧಾನ್ಯಗಳ ಬಿತ್ತನೆ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆಯಾಗಿದೆ. ಇದರಿಂದ ಆಹಾರ ಧಾನ್ಯಗಳ ಉತ್ಪಾದನೆಯು ಕಳೆದ ವರ್ಷದ ದಾಖಲೆ ಮಟ್ಟವನ್ನೂ ಮೀರಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೊಮರ್‌ ಹೇಳಿದ್ದಾರೆ.

ಜೂನ್‌ 1ರಿಂದ ಬಿತ್ತನೆ ಆರಂಭ ವಾಗಿದ್ದು, ಇಲ್ಲಿಯವರೆಗೆ 10.82 ಕೋಟಿ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ನಡೆದಿದೆ. 2020–21ನೇ ಬೆಳೆ ವರ್ಷದಲ್ಲಿ ಉತ್ಪಾದನೆಯು 29.83 ಕೋಟಿ ಟನ್‌ಗಳ ಗುರಿಯನ್ನೂ ದಾಟುವ ವಿಶ್ವಾಸವಿದೆ 2019–20ನೇ ಬೆಳೆ ವರ್ಷದಲ್ಲಿ 29.56 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿತ್ತು ಎಂದಿದ್ದಾರೆ.

Published On: 30 August 2020, 10:09 AM English Summary: Ample monsoon rains push India's summer crop plantings to record

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.