1. ಸುದ್ದಿಗಳು

Kuno National Park ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ ಏಳು ಚೀತಾ!

Hitesh
Hitesh
Again Seven Cheetahs to Kuno National Park!

ಇಂದಿನ ಸಂಕ್ಷಿಪ್ತ ಹಾಗೂ ಸಣ್ಣ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ. 

Kuno National Park ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ ಏಳು ಚೀತಾ!

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಸರಣಿ ಚೀತಾಗಳು ಸಾವನ್ನಪ್ಪಿರುವುದು ಹಾಗೂ ವಿವಾದದ

ಹೊರತಾಗಿಯೂ ಕುನೋ ಅರಣ್ಯಕ್ಕೆ ಮತ್ತೆ 7 ನಮೀಬಿಯನ್ ಚೀತಾಗಳ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಪ್ರಾರಂಭವಾಗಿದೆ.

ಈಚೆಗೆ ರಚಿಸಲಾದ 11 ಸದಸ್ಯರನ್ನು ಒಳಗೊಂಡ ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಯು ಕುನೋದಲ್ಲಿ ಗುರುವಾರವಷ್ಟೇ ಸಭೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2022ರಲ್ಲಿ ಮಧ್ಯಪ್ರದೇಶದ ಕುನೊದಲ್ಲಿ ಕ್ವಾರಂಟೈನ್ ಆವರಣಕ್ಕೆ ನಮೀಬಿಯಾದಿಂದ ತರಲಾಗಿದ್ದ

ಎಂಟು ಚೀತಾಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದರು.

ಅಲ್ಲದೇ ಎರಡನೇ ಹಂತದಲ್ಲಿ  ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ 12 ಚೀತಾಗಳನ್ನು ಫೆಬ್ರವರಿ 18 ರಂದು ಕುನೊಗೆ ಬಿಡಲಾಗಿತ್ತು.

ಆದರೆ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮೂರು ಚೀತಾಗಳು ಅನಾರೋಗ್ಯದಿಂದ ಸಾವನ್ನಪ್ಪಿವೆ.   
-----------------------  

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ 

ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ.

ಜೂನ್‌1 ಮತ್ತು ಜೂನ್‌ 2ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು,

ಚಾಮರಾಜನಗರ ಹಾಗೂ ಕೋಲಾರದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಕರಾವಳಿ ಹಾಗೂ ದಕ್ಷಿಣ ಒಳನಾಡಿನ 4

ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು,

ಗಾಳಿಯ ವೇಗವು ಗಂಟೆಗೆ 40ರಿಂದ 50 ಕಿ.ಮೀ ಇರುವ ಸಾಧ್ಯತೆ ಇದೆ. ಉಳಿದಂತೆ ಗರಿಷ್ಠ ಉಷ್ಣಾಂಶವು

ಕರಾವಳಿಯ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ ಹಾಗೂ ಒಳನಾಡಿನ

ಒಂದೆರಡು ಕಡೆಗಳಲ್ಲಿ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.
---------------------- 

ಕೃಷಿ ಇಲಾಖೆಯಲ್ಲಿ ಹುದ್ದೆ ಖಾಲಿ; ವಿವರಕ್ಕೆ ಸೂಚನೆ

3. ಕೃಷಿ ಇಲಾಖೆಯಲ್ಲಿ ಇರುವ 8,292 ಹುದ್ದೆಗಳಲ್ಲಿ ಶೇ.58ರಷ್ಟು ಅಂದರೆ 5195   ಹುದ್ದೆಗಳು ಇನ್ನೂ ಖಾಲಿ

ಇರುವ ಬಗ್ಗೆ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಅವರು ಈ ಕುರಿತು ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಕೃಷಿ ಇಲಾಖೆಯಲ್ಲಿ ಶೇ.58ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ

ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆಯ

ಮೇರೆಗೆ ಭರ್ತಿ ಮಾಡಲು ನಿರ್ದೇಶನ ನೀಡಿದ್ದಾರೆ.
---------------------- 

Image Source: KunoNationalPrk (twitter)  

Published On: 01 June 2023, 12:46 PM English Summary: Again Seven Cheetahs to Kuno National Park!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.