1. ಸುದ್ದಿಗಳು

ನಟ ಸೋನು ಸೂದ್‌ಗೆ ಉತ್ತರ ರೈಲ್ವೆಯಿಂದ ಕ್ಲಾಸ್‌!

Hitesh
Hitesh
Actor Sonu Sood gets a class from Northern Railway!

ನಟ ಸೋನು ಸೂದ್‌ ಅವರು ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಾವಿರಾರು ಜನರಿಗೆ ನೆರವು ನೀಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ATM ಹಣ ನಿರಾಕರಿಸಿದ HDFC ಬ್ಯಾಂಕ್‌ಗೆ 2. 24 ಲಕ್ಷ ಭಾರೀ ದಂಡ!

ಇದೀಗ ಅವರು ಮಾಡಿದ ಒಂದು ವಿಡಿಯೊ ಉತ್ತರ ರೈಲ್ವೆ ಇಲಾಖೆಯ ಅಧಿಕಾರಿಗಳ ಅಸಮಾಧನಕ್ಕೆ ಕಾರಣವಾಗಿದೆ. ಹೌದು, ಸೋನು ಸೂದ್‌ ಅವರು ರೈಲಿನಲ್ಲಿ ಪ್ರಯಾಣಿಸುವಾಗ ಅವರು ಮಾಡಿರುವ ವಿಡಿಯೊ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯು ಬುದ್ಧಿವಾದ ಹೇಳಿದೆ.

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ 

ಸೋನು ಸೂದ್‌ ಅವರು ಡಿಸೆಂಬರ್ 13 ರಂದು ದೆಹಲಿಯ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವಾಗ ರೈಲಿನ ಫುಟ್‌ ಬೋರ್ಡ್‌ ಬಳಿ ನಿಂತುಕೊಂಡಿದ್ದರು. ಕೆಲ ನಿಮಿಷ ಅಪಾಯಕಾರಿ ಎನ್ನುವಂತೆ ಕುಳಿತುಕೊಂಡಿದ್ದರು. ಈ ವಿಡಿಯೊ ಟ್ವಿಟರ್‌ನಲ್ಲಿ ಹರಿದಾಡಿತ್ತು. ಈ ಕುರಿತು ಇದೀಗ ಚರ್ಚೆ ಪ್ರಾರಂಭವಾಗಿದೆ.  

ಉತ್ತರ ರೈಲ್ವೆ ವಲಯ ಈ ವಿಡಿಯೊ ಹಂಚಿಕೊಂಡು ಸೂನು ಅವರಿಗೆ ಬುದ್ಧಿವಾದ ಹೇಳಿದೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ!

ಈ ಸಂಬಂಧ ಉತ್ತರ ರೈಲ್ವೆಯು ಟ್ವೀಟ್‌ ಮಾಡಿದ್ದು, ಪ್ರೀತಿಯ ಸೋನು ಸೂದ್   ಲಕ್ಷಾಂತರ ಜನರಿಗೆ ನೀವು ಮಾದರಿಯಾಗಿದ್ದೀರಿ. ರೈಲು ಓಡುವಾಗ ಮೆಟ್ಟಿಲುಗಳ ಬಳಿ ನಿಂತು ಪ್ರಯಾಣಿಸುವುದು ಅಪಾಯಕಾರಿ, ಈ ರೀತಿಯ ವಿಡಿಯೊ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ. ದಯವಿಟ್ಟು ಇದನ್ನು ಮಾಡಬೇಡಿ. ಸುಗಮ  ಹಾಗೂ ಸುರಕ್ಷಿತ ಪ್ರಯಾಣವನ್ನು ಆನಂದಿಸಿ ಎಂದು ಹೇಳಿದೆ.  

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ   

Published On: 05 January 2023, 03:55 PM English Summary: Actor Sonu Sood gets a class from Northern Railway!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.