ಸೋಮವಾರ ಚಿನ್ನದ (Todays Gold Rate ) ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯು ಇಳಿಕೆಯಾಗಿತ್ತು. ಇದು ಚಿನ್ನದ ಪ್ರಿಯರಲ್ಲಿ ಸಂತಸ ಮೂಡಿಸಿತ್ತು.
ಇದೀಗ ಸೋಮವಾರ ಚಿನ್ನದ (Todays Gold Rate )ಬೆಲೆ ಏರಿಕೆ ಆಗಿದ್ದು, ಚಿನ್ನ ಖರೀದಿಸುವವರ ಆಸೆಗೆ ತಣ್ಣೀರು ಏರಿಚಿದೆ.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯು ಬರೋಬ್ಬರಿ 440 ರೂಪಾಯಿ ಜಿಗಿತ ಕಂಡಿದೆ.
ಇನ್ನು ಹತ್ತು ಗ್ರಾಂ ಬೆಲೆ ಬಾಳುವ ಚಿನ್ನದ ದರವೂ ಬರೋಬ್ಬರಿ 57,980 ರೂಪಾಯಿಗೆ ತಲುಪಿದೆ. ಇನ್ನು ಬೆಳ್ಳಿಯ ಬೆಲೆಯಲ್ಲಿ
ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ.
ಹೀಗಾಗಿ, ಒಂದು ಕಿಲೋಗ್ರಾಂ ಬೆಲೆಬಾಳುವ ಬೆಳ್ಳಿಯ ದರವು 72,100 ರೂಪಾಯಿ ಆಗಿದೆ. (Todays Gold Rate )
22ಕ್ಯಾರೆಟ್ ಚಿನ್ನದ ಬೆಲೆ 400 ರೂಪಾಯಿ ಏರಿಕೆಯಾಗುವ ಮೂಲಕ 53,150 ರೂಪಾಯಿಗೆ ತಲುಪಿದೆ.
ಮುಂಬೈ, ಕೋಲ್ಕತ್ತಾ ಹಾಗೂ ಹೈದರಾಬಾದ್‌ನಲ್ಲಿ ಚಿನ್ನದ ಬೆಲೆಯು ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 57,980 ರೂಪಾಯಿ ಆಗಿದೆ.
ಇನ್ನುಳಿದ ಮಹಾನಗರಗಳಲ್ಲೇಷ್ಟಿದೆ ?
ದೆಹಲಿ, ಬೆಂಗಳೂರು ಹಾಗೂ ಚೆನ್ನೈನಲ್ಲಿ 10ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಅನುಕ್ರಮವಾಗಿ 58,130 ರೂಪಾಯಿ,
57,980 ರೂಪಾಯಿ ಮತ್ತು 58,580 ರೂಪಾಯಿ ಆಗಿದೆ.
ಮುಂಬೈನಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Todays Gold Rate )
ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ 53,150 ರೂಪಾಯಿ ಆಗಿದೆ.
ದೆಹಲಿ, ಬೆಂಗಳೂರು ಮತ್ತು ಚೆನ್ನೈನಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ ರೂ 53,300, ರೂ 53,150 ಮತ್ತು ರೂ 53,700 ತಲುಪಿದೆ.
ದಿಢೀರ್ ಬೆಲೆ ಏರಿಕೆಗೆ ಕಾರಣವೇನು
ವಾರಾಂತ್ಯದಲ್ಲಿ ಇಸ್ರೇಲ್ ಹಾಗೂ ಹಮಾಸ್ ಪಡೆಗಳ ನಡುವಿನ ಘರ್ಷಣೆಯ ಕಾರಣದಿಂದಾಗಿ ಚಿನ್ನದ ಬೆಲೆ ಹೆಚ್ಚಳವಾಗಿದೆ ಎಂದು ವಿಶ್ಲೇಷಿಸಲಾಗಿದೆ.
Share your comments