ನವೆಂಬರ್ ನಿಂದ ಗಣನೀಯವಾಗಿ ಏರಿಕೆಯಾಗಿದ್ದ ಚಿನ್ನದ ದರ ಫೆಬ್ರವರಿಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ಫೆಬ್ರವರಿ ಕೊನೆಯ ವಾರದಿಂದ ಚಿನ್ನದ ದರ ಮತ್ತೆ ಏರಿಕೆಯಾಗುತ್ತಿದೆ. ಕಳೆದ 10 ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಗೊತ್ತೇ ಇದೆ. 10 ದಿನಗಳ ನಂತರ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಪ್ರಸ್ತುತ, ಶುದ್ಧ ಚಿನ್ನದ ಬೆಲೆ 56,000 ರೂ.ಗಿಂತ ಹೆಚ್ಚಿದ್ದು, ಆಭರಣಗಳಿಗೆ ಬಳಸುವ ಚಿನ್ನವು 52,000 ರೂ..
ಬಂಗಾರ ಪ್ರಿಯರಿಗೆ ಶುಭಸುದ್ದಿ: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿನ್ನೆ ದೊಡ್ಡ ಇಳಿಕೆ ಕಂಡು ಬಂದಿದೆ. ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 844 ರೂ.ಗೆ ಇಳಿಕೆಯಾಗಿದ್ದು, ಬೆಳ್ಳಿಯ ಬೆಲೆ ಕೆಜಿಗೆ 2383 ರೂ. ಇಳಿಕೆ ಕಂಡಿದೆ. ಇದರ ನಂತರ ಚಿನ್ನವು 10 ಗ್ರಾಂಗೆ 56000 ರೂ.ಗೆ ಕುಸಿದಿದೆ ಮತ್ತು ಬೆಳ್ಳಿ ಕೆಜಿಗೆ 62000 ರೂ.ಗಿಂತ ಕಡಿಮೆ ಆಗಿದೆ.
ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ ಬಿತ್ತು ಬರೋಬ್ಬರಿ 7 ಲಕ್ಷ ರೂ ದಂಡ!
ಬುಧವಾರ ಬಂಗಾರದ ಜತೆಗೆ ಬೆಳ್ಳಿಯ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಬುಧವಾರದಂದು ಬೆಳ್ಳಿ 2383 ರೂ.ಗಳ ದೊಡ್ಡ ಕುಸಿತದೊಂದಿಗೆ ಕೆಜಿಗೆ 61883 ರೂ.ಗೆ ಕೊನೆಗೊಂಡಿತು. ಸೋಮವಾರದಂದು ಬೆಳ್ಳಿಯ ದರವು 127 ರೂ.ಗಳ ಏರಿಕೆ ಕಂಡು 64,266 ರೂ. ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. ಪ್ರಸ್ತುತ, ಒಂದು ಔನ್ಸ್ ಚಿನ್ನದ ಬೆಲೆ ಸುಮಾರು $1,816.10 ವಹಿವಾಟು ನಡೆಸುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಔನ್ಸ್ ಬೆಳ್ಳಿಯು $ 21.00 ಕ್ಕಿಂತ ಕಡಿಮೆಯಾಗಿದೆ ಮತ್ತು ಪ್ರಸ್ತುತ $ 20.11 ರ ಸಮೀಪದಲ್ಲಿ ವ್ಯಾಪಾರ ಮಾಡುತ್ತಿದೆ
Googlepay ಮೂಲಕ ಚಿನ್ನ ಖರೀದಿ ಹೇಗೆ ?
ಗೂಗಲ್ ಪೇನ ಮೂಲಕ ಚಿನ್ನ ಖರೀದಿಸುವುದು ಇದೀಗ ಸುಲಭವಾಗಿದೆ. ವಿಧಾನಗಳ ವಿವರ ಇಲ್ಲಿದೆ.
ಮೊದಲನೇ ಹಂತ: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ
ಎರಡನೇ ಹಂತ: ಆದ್ಯತೆಯ ನಿಮ್ಮ ಪಾವತಿ ವಿಧಾನ ಆಯ್ಕೆಮಾಡಿ ಮತ್ತು ಪಾವತಿ ಮಾಡಿರಿ
ಗುಡ್‌ನ್ಯೂಸ್: ಯಶಸ್ವಿನಿ ಯೋಜನೆಯ ನೋಂದಣಿ ದಿನಾಂಕ ವಿಸ್ತರಣೆ
ನಾಲ್ಕನೇ ಹಂತ: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ಅದರಲ್ಲಿ ನಿಖರವಾಗಿ ನಮೂದಿಸಿ
ಐದನೇ ಹಂತ: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)
ಇನ್ನು ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ.
ಈ ರೀತಿ ಖರೀದಿಯಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಬಳಕೆದಾರರು ಖರೀದಿಸಬೇಕಾದ ಕನಿಷ್ಠ ಚಿನ್ನದ ಮೊತ್ತವು 1 ಗ್ರಾಂ ಖರೀದಿಸಬೇಕಾಗಿದೆ.
Share your comments