1. ಸುದ್ದಿಗಳು

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ 21ಕ್ಕೆ

Maltesh
Maltesh
8th convocation of Shimoga Agriculture and Horticulture University at 21

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭವನ್ನು, ಜು.21 ರ ಸಂಜೆ 4 ಗಂಟೆಗೆ ವಿಶ್ವವಿದ್ಯಾಲಯ ಮುಖ್ಯ ಆವರಣ, ಇರುವಕ್ಕಿ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ ತಿಳಿಸಿದರು.

ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ಥಾವರ್‌  ಚಂದ್ ಗೆಹ್ಲೋಟ್ ಇವರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ಸುಗ್ಗಿ ಸಂಭ್ರಮ ಜರುಗಲಿದ್ದು, ಪದವೀಧರರಿಗೆ ಪದವಿ ಪ್ರಧಾನ ಮಾಡುವರು.

ಕೃಷಿ ಸಚಿವರು ಹಾಗೂ ವಿವಿ ಸಹ-ಕುಲಾದಿಪತಿಗಳಾದ ಎನ್.ಚಲುವರಾಯಸ್ವಾಮಿ ಗೌರವ ಉಪಸ್ಥಿತಿ ಇರಲಿದೆ. 

ಪದ್ಮವಿಭೂಷಣ ಪ್ರಶಸ್ತಿ ವಿಜೇತರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರು 8ನೇ ಘಟಿಕೋತ್ಸವ ಭಾಷಣ ಮಾಡುವರು ಎಂದು ಇಂದು ನವುಲೆಯ ಕೃಷಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

37 ಚಿನ್ನದ ಪದಕ ಪ್ರದಾನ : 8ನೇ ಘಟಿಕೋತ್ಸವದಲ್ಲಿ 409 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ, 101 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 23 ವಿದ್ಯಾರ್ಥಿಗಳು ಪಿ.ಹೆಚ್‍ಡಿ, ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ 08 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಇವರಿಗೆ ಒಟ್ಟು 15 ಚಿನ್ನದ ಪದಕಗಳನ್ನು ನೀಡಲಾಗುವುದು. 14 ಎಂ.ಎಸ್ಸಿ ವಿದ್ಯಾರ್ಥಿಗಳು, 07 ಪಿಹೆಚ್‍ಡಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಒಟ್ಟು 37 ಚಿನ್ನದ ಪದಗಳನ್ನು ನೀಡಲಾಗುವುದು.

ವಿಶ್ವವಿದ್ಯಾಲಯ ಈ ವರ್ಷ ಹಲವಾರು ವಿಶಿಷ್ಟ ಸಾಧನೆಗಳಿಗೆ ಸಾಕ್ಷಿಯಾಗಿದ್ದು, ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಯೋಜನೆಯಡಿ ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲೇ ಮೊದಲ ಬಾರಿಗೆ ಐ.ಓ.ಟಿ ಸ್ಮಾರ್ಟ್ ಕೃಷಿ, ತೋಟಗಾರಿಕೆ, ಅರಣ್ಯ ವಿಷಯಗಳನ್ನು ಪ್ರಾಯೋಗಿಕ ಕಲಿಕೆ ಪ್ರಾರಂಭಿಸಿದ್ದು 20 ವಿದ್ಯಾರ್ಥಿಗಳ ಮೊದಲ ತಂಡ ಇದನ್ನು ಪೂರ್ಣಗೊಳಿಸಿದೆ. ಕೃಷಿಯಲ್ಲಿ ಗಣಕ, ಡ್ರೋನ್ ಹಾಗೂ ರೋಬೋಟ್ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ ಮೊದಲ ಬಾರಿಗೆ ಪೆÇ್ರೀಗ್ರಾಮಿಂಗ್ ಫಾರ್ ಕೃಷಿ, ತೋಟಗಾರಿಕೆ, ಅರಣ್ಯ ಎಂಬ ವಿಷಯವನ್ನು ಅಳವಡಿಸಲಾಗಿದೆ.

ಹೊಸ ಭತ್ತದ ತಳಿ: ವಿಶ್ವವಿದ್ಯಾಲಯವು ಈ ವರ್ಷ 3 ಭತ್ತದ ತಳಿಗಳನ್ನು ಬಿಡುಗಡೆ ಮಾಡಿದೆ. ವಲಯ 7ಕ್ಕೆ ಸೂಕ್ತವಾದ ಅಧಿಕ ಇಳುವರಿ ಕೊಡುವ ಸಹ್ಯಾದ್ರಿ, ಸಿರಿ, ಗುಡ್ಡಗಾಡು ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಜಲಮುಕ್ತಿ ಹಾಗೂ ಕರಾವಳಿ ಭಾಗದ ಮಜಲು ಹಾಗೂ ಬೆಟ್ಟು ಗದ್ದೆಗಳಲ್ಲಿ ಮುಂಗಾರಿನಲ್ಲಿ ಬೆಳೆಯಬಹುದಾದ ಸಹ್ಯಾದ್ರಿ, ಸಪ್ತಮಿ ತಳಿಗಳು ಆ ಭಾಗದ ರೈತರಿಗೆ ಆಶಾಕಿರಣಗಳಾಗಿವೆ.

ತಳಿ ಅಭಿವೃದ್ಧಿ, ಬೆಳೆ ಉತ್ಪಾದನೆ, ಸಸ್ಯಸಂರಕ್ಷಣೆ, ಯಾಂತ್ರೀಕೃತ ಬೇಸಾಯ, ಮೌಲ್ಯವರ್ಧನೆ ಮತ್ತು ತೋಟಗಾರಿಕೆ ಬೆಳೆಗಳಲ್ಲಿ 13 ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಮತ್ತು 15 ತಾಂತ್ರಿಕತೆಗಳನ್ನು ರೈತರ ಹೊಲದಲ್ಲಿ ಕ್ಷೇತ್ರ ಪ್ರಯೋಗ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಪ್ರಸಕ್ತ ವರ್ಷದಲ್ಲಿ 44 ಯೋಜನೆಗಳಿಗೆ ಇತರ ಧನಸಹಾಯ, ಸಂಸ್ಥೆಯಿಂದ ಸುಮಾರು ರೂ. 1.19 ಕೋಟಿ ಅನುದಾನ ಬಂದಿರುತ್ತದೆ. ಆರ್‍ಕೆವಿವೈ ಅಡಿ 21 ಸಂಶೋಧನಾ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ಸರರ್ಕಾರದ ಕಪೆಕ್ ನಿಂದ ವಿಶ್ವವಿದ್ಯಾಲಯಕ್ಕೆ 'ಒಂದು ಜಿಲ್ಲೆ ಒಂದು ಉತ್ಪನ್ನ' ದಡಿಯಲ್ಲಿ ಶಿವಮೊಗ್ಗಕ್ಕೆ ಅನಾನಸ್, ಮೂಡಿಗೆರೆಗೆ ಸಾಂಬಾರು ಪದಾರ್ಥಗಳು ಮತ್ತು ಹಿರಿಯೂರಿಗೆ ನೆಲಗಡಲೆ ಬೆಳೆಗಳ ಸಂಶೋಧನೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ರೂ.5.68 ಕೋಟಿ ನೀಡಲಾಗಿದೆ. ನೈಸರ್ಗಿಕ ಕೃಷಿ ಯೋಜನೆಯನ್ನು ಅಭಿವೃದ್ಧಿಗೊಳಿಸಲು ರೂ.252 ಕೋಟಿ ಅನುದಾನ ದೊರೆತಿದೆ.ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವೈಜ್ಞಾನಿಕ -ಸಂಪನ್ಮೂಲ ಮತ್ತು ಜಲ ಸಂಪನ್ಮೂಲ ಸಮೀಕ್ಷೆಗಾಗಿ ಹಾಗೂ ಅವುಗಳ ಪುನಶ್ವೇತನಕ್ಕಾಗಿ ರೂ.3.68 ಕೋಟಿ ಅನುದಾನವು ವಿಶ್ವವಿದ್ಯಾಲಯಕ್ಕೆ ದೊರಕಿರುತ್ತದೆ.

ಇನ್ನು ವಿವಿ 8 ನೇ  ಘಟಿಕೋತ್ಸವ ಸಮಾರಂಭದಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು, ವಿಶ್ರಾಂತ ಕುಲಪತಿಗಳು, ಡೀನ್‍ಗಳು ಮತ್ತು ನಿರ್ದೇಶಕರು, ವಿಶ್ರಾಂತ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಆಹ್ವಾನಿತ ಗಣ್ಯರು, ಗೌರವಾನ್ವಿತ ಪದಕ ದಾನಿಗಳು, ವಿದ್ಯಾರ್ಥಿಗಳು ಅವರ ತಂದೆ, ತಾಯಿ ಶೋಷಕರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವರಾದ  ಡಾ.ಕೆ.ಸಿ.ಶಶಿಧರ, ವಿಸ್ತರಣಾ ನಿರ್ದೇಶಕ ಕೆ.ಟಿ.ಗುರುಮೂರ್ತಿ, ಸಂಶೋಧನಾ ನಿರ್ದೇಶಕ ಹೇಮ್ಲಾನಾಯ್ಕ್, ಸ್ನಾತಕೋತ್ತರ ಡೀನ್ ದಿನೇಶ್ ಕುಮಾರ್, ಬೀಜ ಅಧಿಕಾರಿ ಎಸ್.ವಿ ಪಾಟಿಲ್ ಹಾಜರಿದ್ದರು.

Published On: 18 July 2023, 02:51 PM English Summary: 8th convocation of Shimoga Agriculture and Horticulture University at 21

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.