ಉತ್ತರ ಭಾರತದ ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ವಿಶೇಷವಾಗಿ ಬಿಹಾರ ರಾಜ್ಯದಲ್ಲಿ ಎರಡು ದಿನಗಳ ಅವಧಿಯಲ್ಲಿ (ಬುಧವಾರ-ಗುರುವಾರ) ಸಿಡಿಲು ಬಡಿದು 83 ಮಂದಿ ಮೃತಪಟ್ಟು, 30 ಜನರು ಗಾಯಗೊಂಡಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಗರಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ನವಾಡಾ ಮತ್ತು ಮಧುಬನಿ ತಲಾ 8, ಸಿಮಾನ್ ಮತ್ತು ಭಗಲಪುರ ತಲಾ 6, ಪೂರ್ವ ಚಂಪಾರಣ್, ದರ್ಭಾಂಗ ಹಾಗೂ ಬಂಕಾ ತಲಾ 5, ಖಗಾರಿಯಾ ಮತ್ತು ಔರಂಗಬಾದ್ ಜಿಲ್ಲೆಗಳಲ್ಲಿ ತಲಾ 3 ಸೇರಿ ಒಟ್ಟು 23 ಜಿಲ್ಲೆಗಳಲ್ಲಿ 83 ಜನ ಸಿಡಿಲಿನಿಂದ ಸಾವನ್ನಪ್ಪಿದ್ದಾರೆ.
ಪ್ರಧಾನಿ ಸಾಂತ್ವನ:
ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಬಿಹಾರದಲ್ಲಿ 83 ಕ್ಕೂ ಹೆಚ್ಚು ಮೃತಪಟ್ಟಿರುವುದು ಬೇಸರ ತರಿಸಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲಗಾಂಧಿ ಸಂತಾಪ:
ಬಿಹಾರದಲ್ಲಿ ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಂಡ 83 ಜನರ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲಗಾಂಧಿ ಸಂತಾಪ ವ್ಯಕತಪಡಿಸಿದ್ದಾರೆ. ಬಿಹಾರದಲ್ಲಿ ಸಿಡಿಲಿನಿಂದಾಗಿ 83 ಜನ ಮೃತಪಟ್ಟಿರುವ ಸುದ್ದಿಕೇಳಿ ಆಘಾತವಾಗಿದೆ. ಮೃತಪಟ್ಟವರ ಕುಟುಂದವರಿಗೆ ನಷ್ಟ ಭರಿಸುವ ಶಕ್ತಿ ಭಘವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಸಂತ್ರಸ್ತರಿಗೆ ನೆರವಾಗುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.
4 ಲಕ್ಷ ಪರಿಹಾರ:
ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ ಕುಮಾರ ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
Share your comments