ಸಾಕಷ್ಟು ದಿನಗಳಿಂದ ಸರ್ಕಾರಿ ನೌಕರರು ಕಾಯುತ್ತಿದ್ದ ವಿಷಯದ ಕುರಿತು ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಇಲ್ಲಿದೆ ಈ ಕುರಿತಾದ ವಿವರ
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿಯೊಂದು ದೊರೆತಿದೆ. ತುಟ್ಟಿಭತ್ಯೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 01.01.2023 ರಿಂದ ಜಾರಿಯಾಗುವಂತೆ ತುಟ್ಟಿಭತ್ಯೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟದ ಅನುಮೋದನೆ.
01.01.2023 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯ ಹೆಚ್ಚುವರಿ ಕಂತಿನ ಬಿಡುಗಡೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಬೆಲೆ ಏರಿಕೆಯನ್ನು ಸರಿದೂಗಿಸಲು ಈ ಹೆಚ್ಚುವರಿ ಕಂತು ನೀಡಲಾಗುತ್ತಿದ್ದು, ಈಗಿರುವ ಮೂಲ ವೇತನ/ಪಿಂಚಣಿಯ ಶೇ.38 ಕ್ಕೆ ಶೇ. 4 ಹೆಚ್ಚಳ ಮಾಡಲಾಗಿದೆ.
ತುಟ್ಟಿಭತ್ಯೆ ಹೆಚ್ಚಳದಿಂದ ಬೊಕ್ಕಸದ ಮೇಲೆ ವಾರ್ಷಿಕ 2,815.60 ಕೋಟಿ ರೂ, ಅಧಿಕ ವೆಚ್ಚ ತಗಲುತ್ತದೆ. ಇದರಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿದೆ.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ 2022ರ ಜುಲೈ 1ರಿಂದ ಬರಬೇಕಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಶೇ. 4 ರಷ್ಟು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2022ರ ಜುಲೈ 1ರಿಂದ ಅನ್ವಯವಾಗುವಂತೆ ಅನುಕ್ರಮವಾಗಿ ಹೆಚ್ಚಿನ ಪ್ರಮಾಣದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರಕ್ಕೆ ಅರ್ಹರಾಗಿರುತ್ತಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ಈ ಹೆಚ್ಚಳದಿಂದಾಗಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ವಾರ್ಷಿಕ 6,591.36 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಮತ್ತು 2022-23ರ ಹಣಕಾಸು ವರ್ಷದಲ್ಲಿ 4,394.24 ಕೋಟಿ ರೂ.ಗಳು (ಅಂದರೆ 2022ರ ಜುಲೈನಿಂದ 2023ರ ಫೆಬ್ರವರಿ ವರೆಗೆ 8 ತಿಂಗಳ ಅವಧಿಗೆ).
ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರದ ಈ ಹೆಚ್ಚಳದಿಂದಾಗಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ವಾರ್ಷಿಕ 6,261.20 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಮತ್ತು 2022-23ರ ಹಣಕಾಸು ವರ್ಷದಲ್ಲಿ4,174.12 ಕೋಟಿ ರೂ.ಗಳು (ಅಂದರೆ 2022ರ ಜುಲೈನಿಂದ 2023ರ ಫೆಬ್ರವರಿ ವರೆಗೆ 8 ತಿಂಗಳ ಅವಧಿಗೆ).
ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಎರಡರ ಕಾರಣದಿಂದಾಗಿ ಬೊಕ್ಕಸಕ್ಕೆ ನೀಡುವ ಸಂಯೋಜಿತ ಭತ್ಯೆಯು ವಾರ್ಷಿಕ 12,852.56 ಕೋಟಿ ರೂ.ಗಳಾಗಿರುತ್ತದೆ.
ಮತ್ತು 2022-23ರ ಹಣಕಾಸು ವರ್ಷದಲ್ಲಿ8,568.36 ಕೋಟಿ ರೂ.ಗಳು (ಅಂದರೆ 2022ರ ಜುಲೈನಿಂದ 2023ರ ಫೆಬ್ರವರಿ ವರೆಗೆ 8 ತಿಂಗಳ ಅವಧಿಗೆ).
Share your comments