1. ಸುದ್ದಿಗಳು

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ತಗುಲಿ 43 ಆನೆಗಳ ಸಾವು!

Hitesh
Hitesh
43 elephants died due to electric shock in the last five years in the state!

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ತಗುಲಿ 43 ಆನೆಗಳು ಸಾವನ್ನಪ್ಪಿವೆ.

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ತಗುಲಿ 43 ಆನೆಗಳು ಸಾವನ್ನಪ್ಪಿವೆ. ಹೌದು ಈ ವಿಷಯವನ್ನು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನ್‌ ಕುಮಾರ್ ಚೌಬೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 43 ಆನೆಗಳು ಮೃತಪಟ್ಟಿವೆ. ಅಲ್ಲದೇ ರೈಲು ಡಿಕ್ಕಿಯಿಂದಾಗಿ ಐದು  ಆನೆಗಳು ಮೃತಪಟ್ಟಿವೆ.

ವಿಷಪ್ರಾಶನದಿಂದಲೂ ಒಂದು ಆನೆ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. 

ಆನೆ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ಕೇಂದ್ರ ಸರ್ಕಾರವು ನೀಡುತ್ತಿದೆ. ಅಲ್ಲದೇ ಆನೆಗಳು ಹಾಗೂ ಅವುಗಳ ವಾಸಸ್ಥಾನ ಸಂರಕ್ಷಣೆಗೂ ಕೇಂದ್ರ ಸರ್ಕಾರವು ಮುಂದಾಗಿದೆ. ವಿದ್ಯುತ್‌ ತಗುಲಿ ಆನೆಗಳು ಮೃತಪಡುವುದನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳು ಹಾಗೂ ವಿದ್ಯುತ್ ಪ್ರಸರಣಾ ನಿಗಮಗಳಿಗೆ ಆಗ್ಗಾಗೇ ನಿರ್ದೇಶನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.  

Cylinder ಬಳಕೆದಾರರಿಗೆ ಸಿಹಿಸುದ್ದಿ: ಮುಂದಿನ ತಿಂಗಳಿಂದ ಕೇವಲ 500ಕ್ಕೆ ಸಿಗಲಿದೆ ಸಿಲಿಂಡರ್‌ !

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು,  ಮಾನವ–ಪ್ರಾಣಿ ಸಂಘರ್ಷ ತಡೆಗಟ್ಟಲು ಕರ್ನಾಟಕ ಸರ್ಕಾರ ತಜ್ಞರ ನೇತೃತ್ವದ ಕಾರ್ಯಪಡೆ ರಚಿಸಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಮಾನವ–ಪ್ರಾಣಿ ಸಂಷರ್ಘ ತಡೆಯುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಈ ವರ್ಷದ ಜೂನ್‌ನಲ್ಲಿ ಸೂಚಿಸಲಾಗಿತ್ತು. 

ಆನೆ ಮತ್ತು ಮಾನವ ಸಂಘರ್ಷ ತಡೆಗಟ್ಟಲು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸುವಂತೆಯೂ ಸೂಚನೆ ನೀಡಲಾಗಿದೆ.

43 elephants died due to electric shock in the last five years in the state!

ಆನೆಗಳು ಸಾಗುವ ಹಾದಿಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ವೈಜ್ಞಾನಿಕ ಅಧ್ಯಯನ ನಡೆಸಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವಂತೆಯೂ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಲಿಖಿತ ರೂಪದ ಉತ್ತರದಲ್ಲಿ ನೀಡಿದ್ದಾರೆ.  

ಕೃಷಿ ಸಚಿವಾಲಯದಿಂದ ಸಂಸತ್ತಿನಲ್ಲಿ ರಾಗಿ ಆಹಾರ ಉತ್ಸವ: ಕರ್ನಾಟಕದ ಪ್ರಮುಖ ಆಹಾರ ಅನಾವರಣ!

43 elephants died due to electric shock in the last five years in the state!

ವಿದ್ಯುತ್‌ ತಗುಲಿ ಮೃತಪಟ್ಟಿರುವ ಆನೆಗಳ ಸಾವು ವಿವರ ವರ್ಷವಾರು

2017–18;10

2018–19;9

2019–20;8

2020–21;9

2021–22;7‌  
ಒಟ್ಟು: 43  

Published On: 20 December 2022, 11:57 AM English Summary: 43 elephants died due to electric shock in the last five years in the state!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.