1. ಸುದ್ದಿಗಳು

Modi Government: ನರೇಂದ್ರ ಮೋದಿ ಪ್ರಚಾರಕ್ಕೆ 3000 ಸಾವಿರ ಕೋಟಿ; ಕಾಂಗ್ರೆಸ್‌ ಹೇಳಿದ್ದೇನು ?

Hitesh
Hitesh
3000 thousand crores for Narendra Modi campaign; What did the Congress say?

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕೆ ಬರೋಬ್ಬರಿ 3064 ಕೋಟಿ ರೂಪಾಯಿ ವೆಚ್ಚವಾಗಿದ್ದು, ಇದಕ್ಕೆ ಕಾಂಗ್ರೆಸ್‌ ಟೀಕಾ ಪ್ರಹಾರವನ್ನೇ ನಡೆಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಚಾರಕ್ಕಾಗಿ

2018–19ನೇ ಸಾಲಿನಿಂದ 2023ರ ಜುಲೈ 13ಕ್ಕೆ ಅನ್ವಯಿಸಿ ₹3,064 ಕೋಟಿ ವ್ಯಯಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಚೆಗೆ ರಾಜ್ಯಸಭೆಗೆ ತಿಳಿಸಿದೆ.

ನರೇಂದ್ರ ಮೋದಿ narendra modi ಅಂದ್ರೆ ಪ್ರಚಾರ, ಪ್ರಚಾರ ಅಂದ್ರೆ ಜನರ ದುಡ್ಡು ಎಂದು ಇದೀಗ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

2018 ರಿಂದ 2023ರ ವರೆಗೆ ಮೋದಿಯವರ narendra modi ಫೋಟೋ ತೋರಿಸಲು ಖರ್ಚು ಮಾಡಿದ್ದು ಬರೋಬ್ಬರಿ ₹3,064 ಕೋಟಿ!

ಇದು ಬಿಜೆಪಿಯ ಹಣವೂ ಅಲ್ಲ, ಮೋದಿಯವರ ಸ್ವಂತ ಹಣವೂ ಅಲ್ಲ.

ಸಾರ್ವಜನಿಕರು ಸರ್ಕಾರಕ್ಕೆ ಕಟ್ಟಿದ ತೆರಿಗೆ ಹಣ, ಅಂದರೆ ಇದು ಜನರ ದುಡ್ಡು. ಈ ಹಣವನ್ನು ಸರ್ಕಾರಿ ಕಾರ್ಯಕ್ರಮಗಳ ಪ್ರಚಾರದ ಹೆಸರಲ್ಲಿ

ತಮ್ಮ ಪ್ರಚಾರ ಮಾಡುವುದಕ್ಕಾಗಿ ವೆಚ್ಚ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ. 

ಜನರ ತೆರಿಗೆ ಹಣ ಎಂದರೆ ನರೇಂದ್ರ ಮೋದಿ  narendra modi ಅವರಿಗೆ ಲಾಟರಿಯ ಹಣ ಇದ್ದಂತೆ.

ಅದನ್ನ ತಮ್ಮ ಐಷಾರಾಮಿ ಬದುಕಿಗಾಗಿ, ಪ್ರಚಾರಕ್ಕಾಗಿ ಎಷ್ಟು ಬೇಕಾದರೂ, ಹೇಗೆ ಬೇಕಾದರೂ ಬಳಸಿಕೊಳ್ಳಬಹುದು,

ಇಂತಹವೊಂದು ಅಘೋಷಿತ ಒಪ್ಪಿಗೆಯನ್ನು ತಮ್ಮಷ್ಟಕ್ಕೆ ತಾವೇ ಕೊಟ್ಟುಕೊಂಡಿದ್ದಾರೆ.

ಜನರ ಬೆವರಿನ ಹಣವನ್ನು ಜನರ ಸಂಕಷ್ಟಗಳ ಪರಿಹಾರಕ್ಕಾಗಿ, ದೇಶದ ಅಭಿವೃದ್ಧಿ ಕೆಲಸಗಳಿಗಾಗಿ

ತನ್ನ ಪ್ರಚಾರಕ್ಕೆ ಬಳಸುವ ಮೋದಿ ಅವರನ್ನು ಪ್ರಧಾನಮಂತ್ರಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ?

ಇಷ್ಟು ಹಣವನ್ನು ಖರ್ಚು ಮಾಡಿ ಕೊನೆಗೆ ಜನರಿಗೆ ಕೊಟ್ಟಿದ್ದೇನು? ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನೇ? ಉದ್ಯೋಗಗಳನ್ನೇ?

ರೈತರ ಆದಾಯ ದುಪ್ಪಟ್ಟು ಮಾಡುವುದಕ್ಕಾಗಿಯೇ? ಬಡ ಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಜನಪರ ಕಾರ್ಯಕ್ರಮಗಳನ್ನು ಕೊಟ್ಟರೇ?

ಮಹಿಳೆಯರ ಸುರಕ್ಷತೆಗೆ ಮೀಸಲಿಟ್ಟರೇ? ಯೋಜಿತವಲ್ಲದ ಕೊರೊನ ಲಾಕ್ ಡೌನ್ ನಿರ್ವಹಣೆಗೆ ಬಳಸಿದರೇ? ಜನರ ಆರೋಗ್ಯ ರಕ್ಷಣೆಗೆ ವೆಚ್ಚ ಮಾಡಿದರೇ?

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಖರ್ಚು ಮಾಡಿದರೇ? ಒಟ್ಟಾರೆ ನರೇಂದ್ರ ಮೋದಿಯವರು ಖರ್ಚು ಮಾಡಿದ ತೆರಿಗೆ ಹಣದ ಲಾಭ

ಜನರಿಗೆ ಯಾವ ರೂಪದಲ್ಲಿ ಹೇಗೆ ಸಿಕ್ಕಿತು ಎಂಬ ಒಂದೇ ಒಂದು ಉದಾಹರಣೆಯನ್ನಾದರೂ ಕೊಡಬಲ್ಲರೇ?

ಯಾವುದೇ ಸಾಧನೆ, ಯೋಜನೆ ಇಲ್ಲದೆ ಕೇವಲ ಪ್ರಚಾರವನ್ನೇ ನಂಬಿರುವ ಬಿಜೆಪಿಯ ಕೇಂದ್ರ ಸರ್ಕಾರ ಈ ಬಾರಿ ಜನರಿಂದ ತಿರಸ್ಕಾರಕ್ಕೆ ಒಳಗಾಗುವುದು ನಿಶ್ಚಿತ ಎಂದು ಹೇಳಿದೆ.  

ಸರ್ಕಾರಿ ಕಾರ್ಯಕ್ರಮದಲ್ಲಿ ಸೋನಿಯಾಗಾಂಧಿ ಚಿತ್ರ ಬಿಜೆಪಿ ಕಿಡಿ

ಇನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಅವರ ಚಿತ್ರವನ್ನು ಬಳಸಿರುವುದಕ್ಕೆ ಬಿಜೆಪಿ ಸಹ ಕಿಡಿ ಕಾರಿದೆ.

ಇಡೀ ದೇಶವೇ ನಕಲಿ ಗಾಂಧಿ ಕುಟುಂಬದ ಸ್ವತ್ತು ಎಂದು ಕಾಂಗ್ರೆಸ್ ಭಾವಿಸಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದು,

ಹೈಕಮಾಂಡನ್ನು ಮೆಚ್ಚಿಸಲು ಸಿದ್ದರಾಮಯ್ಯರವರ ಸರ್ಕಾರ ಕರ್ನಾಟಕಕ್ಕೆ ಯಾವ ಸಂಬಂಧವೂ ಇಲ್ಲದ ಸೋನಿಯಾ ಗಾಂಧಿಯವರ ಫೋಟೋವನ್ನು

ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಬಳಕೆ ಮಾಡಿ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿದ್ದೂ ಅಲ್ಲದೆ ಸಂವಿಧಾನವನ್ನೇ ಕಡೆಗಣಿಸಿದೆ ಎಂದು ಹೇಳಿದೆ.  

Published On: 24 July 2023, 04:56 PM English Summary: 3000 thousand crores for Narendra Modi campaign; What did the Congress say?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.