1. ಸುದ್ದಿಗಳು

ರೈತರ ಪಾಲಿನ ಸಂಜೀವಿನಿ ಯಶಸ್ವಿನಿ ಯೋಜನೆಗೆ 300 ಕೋಟಿ ಮೀಸಲು-ಸಿಎಂ ಬೊಮ್ಮಾಯಿ

Maltesh
Maltesh
300 crore reserve for Yashavini Yojana- CM Bommai

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದ ರೈತರ ಪಾಲಿನ ಸಂಜೀವಿನಿಯಾಗಿದ್ದ ಯಶಸ್ವಿನಿ ಯೋಜನೆಯನ್ನು ಮರುಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆರಂಭಿಕ ಹಂತದಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ₹300 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಈ ಹಿಂದೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು 2003 ರಲ್ಲಿ ಪ್ರಾರಂಭಿಸಿದ್ದು, 2003-04 ರಿಂದ 2017-18ರವರೆಗೆ ಜಾರಿಯಲ್ಲಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು, ದಿನಾಂಕ: 31-05-2018 ರಿಂದ ಈ ಯೋಜನೆಯು ಸ್ಥಗಿತಗೊಂಡಿದ್ದು, ದಿನಾಂಕ:01-06-2018 ರಿಂದ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿರುತ್ತದೆ.

ಇದನ್ನೂ ಓದಿರಿ: 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್‌ ಗಿಫ್ಟ್‌!

ರಾಜ್ಯದಲ್ಲೆಡ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರುಜಾರಿಗೊಳಿಸಲು ತೀರ್ಮಾನಿಸಿ ರೂ.300/- ಕೋಟಿಗಳ ಅವಕಾಶ ಕಲ್ಪಿಸಿ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಿದ.

ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ಒಂದು ವಿಶೇಷ ಯೋಜನೆಯಾಗಿದ್ದು, ಇದರಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ ಮಿತಿ ರೂ.5.00 ಲಕ್ಷಕ್ಕೆ ನಿಗಧಿಪಡಿಸಿದ. ರಾಜ್ಯದ ಯಾವುದೇ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡುತ್ತದೆ.

ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು, ಕಣ್ಣಿನ ಖಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳು ಹಾಗೂ ಈ ಯೋಜನೆಯಡಿ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ  ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿವಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ  ಒದಗಿಸಲಾಗುವುದು.

ಪ್ರಾರಂಭಿಕವಾಗಿ ಈ ಹಿಂದಿನ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿದ ನಟ್‌ವರ್ಕ್ A ಅಸ್ಪತ್ರೆಗಳನ್ನೇ ಸದ್ಯಕ್ಕೆ ಮುಂದುವರಿಸಲಾಗಿದೆ. ನಂತರ ಹೊಸ ಮಾರ್ಗಸೂಚಿಗಳಂತೆ, ಟ್ರಸ್ಟ್‌ನಲ್ಲಿ ತೀರ್ಮಾನಿಸಿ ನೆಟ್‌ವರ್ಕ್ ಆಸ್ಪತ್ರೆಗಳನ್ನು ಅಂತಿಮಗೊಳಿಸಲಾಗುವುದು.

ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು ಗೊತ್ತೆ?

ಪ್ರಾರಂಭಿಕವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಮಗ ಅಳವಡಿಸಿಕೊಂಡಿರುವ 1650 ಖಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಗೆ ಆಳವಡಿಸಿಕೊಳ್ಳಲಾಗುವುದು. ಮುಂದೆ ಯಶಸ್ವಿನಿ ಟ್ರಸ್ಟ್‌ನಲ್ಲಿ ಚರ್ಚಿಸಿ ಅಗತ್ಯತೆ ಕಂಡು ಬಂದಲ್ಲಿ ಚಿಕಿತ್ಸೆಗಳು ಮತ್ತು ದರಗಳ ಪರಿಷ್ಕರಣೆಗೆ ಕ್ರಮವಿಡಲಾಗುವುದು.

ಯಶಸ್ವಿನಿ ಸದಸ್ಯರು ಜನರಲ್ ವಾರ್ಡ್‌ನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ. ಯಶಸ್ವಿನಿ ಯೋಜನೆಯಡಿ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವಚ್, ಶಸ್ತ್ರಚಿಕಿತ್ಸೆಯ ವೆಚ್ಚ, ಆಪರೇಶನ್ ಥಿಯೇಟರ್ ಬಾಡಿಗೆ, ಅರವಳಿಕೆ ತಜ್ಞರ ಫೀ, ಸರ್ಜನ್ ಫೀ, ಕನ್ಸಲ್‌ಟೆಂಟ್ ಫೀ, ಬೆಡ್ ಚಾರ್ಜ್, ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್

2 ರೂ.200/-ಗಳ (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ನೆಟ್‌ವರ್ಕ್

ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸದಸ್ಯರಿಗೆ ವಿಧಿಸತಕ್ಕದಲ್ಲ. ಈ ಪೈಕಿ

ರೂ.100/-ಗಳನ್ನು ಯಶಸ್ವಿನಿ ಟ್ರಸ್ಟ್‌ನ ವತಿಯಿಂದ ಪಾವತಿಸಲಾಗುವುದು.

ಸದಸ್ಯರು ಯಶಸ್ವಿನಿ ಕಾರ್ಡ್ ಪಡೆದ ಹದಿನೈದು(15) ದಿನಗಳ ನಂತರ ಯಶಸ್ವಿನಿ ಕಾರ್ಡುದಾರರು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ.

Published On: 13 October 2022, 10:54 AM English Summary: 300 crore reserve for Yashavini Yojana- CM Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.