1. ಸುದ್ದಿಗಳು

ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಕನಿಷ್ಠ 25 ಲಕ್ಷ ರು. ವಿಶೇಷ ಜೀವ ವಿಮಾ ಸೌಲಭ್ಯ ಘೋಷಿಸಿ

ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದ್ದು, 

ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಸುದ್ದಿ ಮಾಡುವ ಧಾವಂತದಲ್ಲಿ 

ಕೆಲವು ಸಹ ಮೈಮರೆತು ಕೆಲಸ ಮಾಡುತ್ತಾರೆ. ದಿನನಿತ್ಯಸೋಂಕಿನ ಸುದ್ದಿ 

ಪ್ರಕಟಿಸಲು ಮಾಧ್ಯಮದವರ ಪಾತ್ರವೂ ಮುಖ್ಯವಾಗಿದ್ದರಿಂದ ಅವರಿಗೆ ವಿಶೇಷ ಜೀವ 

ವಿಮಾ ಸೌಲಭ್ಯ ಘೋಷಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು

ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು,

 ಮಾರಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ತಮ್ಮ 

ಜೀವ ಅಪಾಯದಲ್ಲಿದ್ದರೂ ಲೆಕ್ಕಿಸದೇ ಜನರಿಗೆ ಕೊರೋನಾ ವಿರುದ್ಧ ಜಾಗೃತಿ ಮೂಡಿಸುತ್ತಾರೆ.

ಕೆಲವು ಸಲ ಕೊರೋನಾ ಪೀಡಿತರ ಪ್ರದೇಶಕ್ಕೆ ಹೋಗುವಂತಾಗುತ್ತದೆ.

ಇನ್ನೂ ಕೆಲವು ಸಲ ಆಸ್ಪತ್ರೆಗೂ ಭೇಟಿ ನೀಡುತ್ತಾರೆ.  ಕೊರೋನಾ ನಿಯಂತ್ರಣ ಮಾಡಬೇಕೆಂದು ಜಾಗೃತಿ ಮೂಡಿಸುತ್ತಿರುವ  

ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಕನಿಷ್ಠ 25  ಲಕ್ಷ 

ರೂಪಾಯಿಗಳ ವಿಶೇಷ ಜೀವ ವಿಮಾ ಸೌಲಭ್ಯವನ್ನು ರಾಜ್ಯ ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದ್ಧಾರೆ.

ಮುಂಬೈನಲ್ಲಿ ಹಲವು ಪತ್ರಕರ್ತರಿಗೆ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ 

ಬೆಂಗಳೂರಿನ ಪತ್ರಕರ್ತರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. 

ಈ ಮಧ್ಯೆ ಕನ್ನಡದ ಖಾಸಗಿ ವಾಹಿನಿ ಪತ್ರಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. 

ಸರ್ಕಾರ ಪತ್ರಕರ್ತರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೂಡಲೇ 

ವಿಶೇಷ ಜೀವ ವಿಮೆ ಸೌಲಭ್ಯ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

Published On: 28 April 2020, 06:57 PM English Summary: 25 lakhs for journalists in print and visual media. Announce Special Life Insurance

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.