1. ಸುದ್ದಿಗಳು

ಶಾವಿಗೆ, ಪಾಸ್ತಾ ಮತ್ತು ಪೀನಟ್ ಬಟರ್ ಅನ್ನು ಪರಿಚಯಿಸಿದೆ

KJ Staff
KJ Staff
24 Mantra Organic

ಬೆಂಗಳೂರು, ಜುಲೈ6,2021: ದೇಶದ ಸಾವಯವ ಮುಂಚೂಣಿಯ ಆಹಾರ ಬ್ರ್ಯಾಂಡ್  24 ಮಂತ್ರ ಆರ್ಗ್ಯಾನಿಕ್   ಇಂದು ಪಾಸ್ತಾದಂತಹ ಇಟಾಲಿಯನ್ ಆಹಾರವನ್ನು ಸೇವಿಸುವರಿಗಾಗಿ ಸಾವಯವ ಪಾಸ್ತಾ,  ಶಾವಿಗೆ ಉಪ್ಪಿಟ್ಟು, ಶಾವಿಗೆ ಪಾಯಸ ಸೇವಿಸುವರಿಗೆ ಸಾವಯವ ಗೋಧಿ ಶಾವಿಗೆ ಮತ್ತು ನಿಮ್ಮ ದಿನ ನಿತ್ಯದ ಸೇವನೆ ಗಾಗಿ ಆರೋಗ್ಯಕರ ಉತ್ತಮ ಪ್ರೋಟಿನ್ ಗಳುಳ್ಳ ಸಾವಯವ  ಪೀನಟ್ ಬಟರ್ ಹೀಗೆ ಸಾವಯವ  ಆಹಾರೋತ್ಪನ್ನವನ್ನು  ಮಾರುಕಟ್ಟೆಗೆ   ಪರಿಚಯಿಸಿದೆ.   ಇವುಗಳು ಸಂಪೂರ್ಣವಾಗಿ ಸಾವಯವ ಆಗಿದ್ದು, ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳಿಂದ ಮುಕ್ತವಾದ, 24 ಮಂತ್ರದ  ಹೊಸ ಶ್ರೇಣಿಯ ಉತ್ಪನ್ನಗಳಾಗಿವೆ,  ಇವುಗಳು ಸಂಪೂರ್ಣ ಶುದ್ಧತೆ ಮತ್ತು ಸುರಕ್ಷತೆಯ ಭರವಸೆ ನೀಡುತ್ತವೆ. ಇದರಿಂದಾಗಿ ನಿಮ್ಮ  ಊಟವನ್ನು ರುಚಿ, ಆರೋಗ್ಯ ಮತ್ತು ವೈವಿಧ್ಯತೆಯ ಸಂಯೋಜನೆ ಯಿಂದ ಪೂರೈಸಬಹುದು

ಪ್ರಸ್ತುತ, ನಮ್ಮ ಜೀವನ ಸುರಕ್ಷಿತ, ಶುದ್ಧ ಮತ್ತು ಆರೋಗ್ಯಕರ ಆಹಾರದ ಮೇಲೆ ಗಮನ ಕೇಂದ್ರಿಕರಿಸುವ ಸಮಯವಾಗಿದೆ.  ಕೋವಿಡ್-19 ಸಾಂಕ್ರಾಮಿಕ ಸಾವಯವ ಪಾಸ್ತಾ, ಶಾವಿಗೆ  ಮತ್ತು ಪೀನಟ್ ಬಟರ್ ನಿಮ್ಮ ಅಡುಗೆ ಮನೆಯ ಕಪಾಟುಗಳಲ್ಲಿ ಸಂಗ್ರಹಿಸಲು ಸರಿಯಾದ ಯೋಗ್ಯ ಉತ್ಪನ್ನವಾಗಿದೆ. 24 ಮಂತ್ರ ಆರ್ಗ್ಯಾನಿಕ್ ನ ಪಾಸ್ತಾ  ಎರಡು ರೂಪಾಂತರಗಳಲ್ಲಿ ಲಭ್ಯವಿದೆ – ಮ್ಯಾಕರೋನಿ ( ಕೊಳವೆ ಆಕಾರ ) ಮತ್ತು ಫುಸಿಲ್ಲಿ( ಸುರಳಿ ಆಕಾರ)  ಮತ್ತು ವರ್ಮಿಸೆಲಿ/ ಶಾವಿಗೆಯಲ್ಲಿ  ಹುರಿದ ಮತ್ತು ಸಾದಾ ರೂಪಾಂತರದಲ್ಲಿ ಲಭ್ಯವಿದೆ. ಎರಡೂ ಉತ್ಪನ್ನಗಳು 400 ಗ್ರಾಂ ಪ್ಯಾಕ್ ಗಾತ್ರಗಳಲ್ಲಿ ಲಭ್ಯವಿದ್ದರೂ,ಶಾವಿಗೆ/ ವರ್ಮಿಸೆಲ್ಲಿ ಯ ಬೆಲೆ ₹ 60 ಮತ್ತು ಪಾಸ್ತಾ ₹ 80 ಆಗಿದೆ. ಇವುಗಳು ಶುದ್ಧ ಸಾವಯವ  ಗೋಧಿಯಿಂದ ಮಾಡಲಾದ  24 ಮಂತ್ರ ಆರ್ಗ್ಯಾನಿಕ್ ನ ಉತ್ಪನ್ನವಾಗಿದೆ. ಇದು ಹೆಚ್ಚಿನ ನಾರಿನಂಶ ಮತ್ತು ಪೋಷಕಾಂಶಗಳನ್ನು ಹೊಂದಿದ್ದು, ಇದು ಯಾವುದೇ ವಯಸ್ಸಿನ ಜನರಿಗೆ ಸೂಕ್ತವಾಗಿದೆ. ಈ ಉತ್ಪನ್ನಗಳಿಗೆ ಬಳಸಿದ ಎಲ್ಲಾ ಪದಾರ್ಥಗಳು ಅತ್ಯುತ್ತಮ ಗುಣಮಟ್ಟವನ್ನು ಒಳಗೊಂಡಿವೆ, ಅವುಗಳನ್ನು ಭಾರತದಾದ್ಯಂತ ಇರುವ 24 ಮಂತ್ರ ದ  60,000 ರೈತಾಪಿ ವರ್ಗಗಳ  ಜಾಲದಿಂದ ಪಡೆಯಲಾಗಿದೆ.     

ಮತ್ತೊಂದೆಡೆ, ಪೀನಟ್ ಬಟರ್ ಕೊಬ್ಬಿನ  ಸಾಮಾನ್ಯ ಬೆಣ್ಣೆ ಮತ್ತು ಮಾರ್ಗರಿನ್ ಅಂಶಕ್ಕೆ ಹೋಲಿಸಿದರೆ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ.   . ಪೀನಟ್ ಬಟರ್ ನ್ನು ಒಣ ಹುರಿದ ಕಡಲೆಕಾಯಿಯನ್ನು ಪುಡಿ ಮಾಡುವ ಮೂಲಕ ಕಡಲೆಕಾಯಿ /ಪೀನಟ್ ಬಟರ್ ತಯಾರಿಸಲಾಗುತ್ತದೆ, ಇದು ಕೊಬ್ಬಿನ ಉತ್ತಮ ಮೂಲ ಮತ್ತು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಒದಗಿಸುತ್ತದೆ. ಕಡಲೆಕಾಯಿಯ ಪ್ರೋಟೀನ್ ಅಗತ್ಯ ಅಮಿ ಲೈಸಿನ್, ಥ್ರೋನೈನ್ನಂತಹ ಆಮ್ಲಗಳನ್ನು ಹೊಂದಿರುತ್ತದೆ. 24 ಮಂತ್ರ ಆರ್ಗ್ಯಾನಿಕ್ ( ಸಾವಯವ)  ಪೀನಟ್ ಬಟರ್ ಪೊಟ್ಯಾಸಿಯಮ್, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್,ಸತು ಮತ್ತು ಸೆಲೆನಿಯಂ ನಂತಹ ಅನೇಕ ಉತ್ತಮ ಖನಿಜಗಳ ಮೂಲವಾಗಿದೆ ಮತ್ತು ವಿಟಮಿನ್ ಬಿ ಮತ್ತು ವಿಟಮಿನ್ ಇ ಯಿಂದ ಕೂಡಿದೆ,  ದೇಹದ ಆರೋಗ್ಯಕ್ಕೆ ಹೃದಯದ ಆರೋಗ್ಯಕ್ಕೆ ಮತ್ತು ಸ್ನಾಯುಗಳಿಗೆ ಅತ್ಯುತ್ತಮವಾಗಿದೆ.  . ಉತ್ಪನ್ನವು ಎರಡು ಪ್ಯಾಕ್ ಗಾತ್ರಗಳಲ್ಲಿ ಲಭ್ಯವಿದ್ದು, - 450 ಗ್ರಾಂ ಗಳು ಮತ್ತು 800 ಗ್ರಾಂಗಳು ಕ್ರಮವಾಗಿ 225 ₹ ಮತ್ತು ₹ 400 ಬೆಲೆಯಾಗಿದೆ

24 ಮಂತ್ರ ಆರ್ಗ್ಯಾನಿಕ್ ನ ಇತರ ಎಲ್ಲಾ ಉತ್ಪನ್ನಗಳಂತೆ, ಹೊಸದಾಗಿ ಪ್ರಾರಂಭಿಸಲಾದ ಶ್ರೇಣಿಯು ದೇಶಾದ್ಯಂತ 10,000+ ಚಿಲ್ಲರೆ ಮಳಿಗೆಗಳಲ್ಲಿ ಮತ್ತು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ತನ್ನ ವಿಶೇಷ ಅಂಗಡಿಗಳಲ್ಲಿ ಲಭ್ಯವಿದೆ. ಅಮೆಜಾನ್, ಫ್ಲಿಪ್ ಕಾರ್ಟ್, ಬಿಗ್ ಬಾಸ್ಕೆಟ್, ಜಿಯೋಮಾರ್ಟ್, ಗ್ರೋಫರ್ಸ್, ಮಿಲ್ಕ್ ಬಾಸ್ಕೆಟ್, ಸ್ವಿಗ್ಗಿ, ಸುಪರ್ ಡೈಲಿ ಮತ್ತು ಮೆಟ್ರೋ, ಸ್ಪೆನ್ಸರ್ಸ್,ಸ್ಟಾರ್ ಬಜಾರ್, ಸ್ಪಾರ್ ಮತ್ತು ವಾಲ್ ಮಾರ್ಟ್ ನಂತಹ ಹೈಪರ್ ಮಾರ್ಟ್ ಗಳಂತಹ ಎಲ್ಲಾ ಪ್ರಮುಖ ಇ-ಕಾಮರ್ಸ್ ಸೈಟ್ ಗಳಿಂದ ಅವುಗಳನ್ನು ಖರೀದಿಸಬಹುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.