1. ಸುದ್ದಿಗಳು

ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000ದವರೆಗೆ ವೇತನ ಹೆಚ್ಚಳ: ಪ್ರಿಯಾಂಕಾ ಗಾಂಧಿ

Kalmesh T
Kalmesh T
15,000 salary hike for Anganwadi workers if comes to power: Priyanka Gandhi

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹದಿನೈದು ಸಾವಿರ ರೂಪಾಯಿಗೆ ವೇತನ ಹೆಚ್ಚಳ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ಹೊಸ ಘೋಷಣೆ ಮಾಡಿದ್ದಾರೆ.

ಈಗಾಗಲೇ ಸಾಕಷ್ಟು ದಿನಗಳ ಹಿಂದಿನಿಂದ ಅಂಗನವಾಡಿ ಕಾರ್ಯಕರ್ತೆಯರು ಸಂಬಳ ಹೆಚ್ಚಿಗೆ ಮಾಡುವಂತೆ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ.

ಅದಾಗಿಯೂ ಸರ್ಕಾರ ಇದರತ್ತ ಗಮನ ಹರಿಸಿಲ್ಲ. ಹೀಗಿರುವಾಗ ಇಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಅಂಗನವಾಡಿ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡುವ ಕುರಿತು ಮಾತನಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂಪಾಯಿವರೆಗೆ ವೇತನ ಹೆಚ್ಚಿಸಲಾಗುವುದು.

ಆಶಾ ಕಾರ್ಯಕರ್ತೆಯರಿಗಾಗಿ 8 ಸಾವಿರ ರೂ. ವೇತನ ಹೆಚ್ಚಳ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೊಸ ಘೋಷಣೆ ಮಾಡಿದರು.

ಖಾನಾಪುರದಲ್ಲಿ ನಡೆದ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿಯಿಂದ ಹೊಸ ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿಯಲ್ಲಿ (Guarantee) ಮತ್ತೊಂದು ಗ್ಯಾರಂಟಿ ಘೋಷಣೆ ಮಾಡಲಾಗಿದೆ.

ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದ್ದಾರೆ

ಕಾರ್ಯಕರ್ತೆಯರಿಗೆ ಯಾವುದೇ ಪೆನ್ಶನ್ ಸಿಗಲ್ಲ, ಸೌಲಭ್ಯ ಸಿಗಲ್ಲ. ಅಂಗನವಾಡಿ ಮಹಿಳೆಯರಿಗೆ 15 ಸಾವಿರ ರೂ. ವರೆಗೆ ವೇತನ ಹೆಚ್ಚಿಸಲಾಗುವುದು.

ಆಶಾ ಕಾರ್ಯಕರ್ತೆಯರಿಗಾಗಿ 8 ಸಾವಿರ ರೂ. ವೇತನ ಹೆಚ್ಚಳ ಮಾಡಲಾಗುವುದು. ಬಿಸಿಯೂಟ ಕಾರ್ಯಕರ್ತರಿಗೆ 5 ಸಾವಿರ ರೂ. ವೇತನ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು. 

Published On: 30 April 2023, 10:07 PM English Summary: 15,000 salary hike for Anganwadi workers if comes to power: Priyanka Gandhi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.