1. ಸುದ್ದಿಗಳು

ದೇಶದ 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ ಪಿಎಂ ಕಿಸಾನ್ ಪ್ರೋತ್ಸಾಹ ಹಣ ಜಮೆ

PM Narendra Modi

ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಪಿಎಂ-ಕಿಸಾನ್ ಯೋಜನೆಯಡಿ 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ 1,364 ಕೋಟಿ ರೂಪಾಯಿ ಪಾವತಿಸಿದೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ (ಪಿಎಂ–ಕಿಸಾನ್‌) ಒಟ್ಟು 1,364 ಕೋಟಿ ಪಾವತಿಸಲಾಗಿದೆ. ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಕೃಷಿ ಸಚಿವಾಲಯ ನೀಡಿರುವ ಉತ್ತರದಲ್ಲಿ ಈ ಅಂಶ ಬಹಿರಂಗಗೊಂಡಿದೆ.

ಕೇಂದ್ರ ಸರ್ಕಾರದ  ಮಹತ್ವಾಕಾಂಕ್ಷೆಯ ಈ ಯೋಜನೆ ಪಿ.ಎಂ ಕಿಸಾನ್ ಯೋಜನೆಯನ್ನು 2019ರಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಈ ಯೋಜನೆ ಅತೀ ಹೆಚ್ಚು ಪ್ರಸಿದ್ಧಿ ಹೊಂದಿದೆ. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಒಟ್ಟು ಮೂರು ಕಂತುಗಳಲ್ಲಿ ವರ್ಷಕ್ಕೆ 6,000 ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ. ಕಳೆದ ತಿಂಗಳು 7ನೇ ಕಂತಿನ ಹಣವನ್ನು ಸಹ ರೈತರ ಖಾತೆಗೆ ಜಮೆ ಮಾಡಲಾಗಿದೆ.

ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ (ಸಿಎಚ್‌ಆರ್‌ಐ)ನ ವೆಂಕಟೇಶ ನಾಯಕ್‌ ಎಂಬುವವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರಿಸಿರುವ ಕೃಷಿ ಸಚಿವಾಲಯ, ‘ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಫಲಾನುಭವಿಗಳನ್ನು ಅನರ್ಹ ರೈತರು ಹಾಗೂ ಆದಾಯ ತೆರಿಗೆ ಪಾವತಿಸುವ ರೈತರು ಎಂಬುದಾಗಿ ವಿಂಗಡಿಸಲಾಗಿದೆ’ ಎಂದು ತಿಳಿಸಿದೆ.

‘ಅನರ್ಹ ಫಲಾನುಭವಿಗಳ ಪೈಕಿ ಗರಿಷ್ಠ ಸಂಖ್ಯೆಯ ರೈತರು ಪಂಜಾಬ್‌, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್‌ ಹಾಗೂ ಉತ್ತರಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂಬುದು ಸಚಿವಾಲಯ ಒದಗಿಸಿದ ಮಾಹಿತಿಯಿಂದ ತಿಳಿಯುತ್ತದೆ.

ದೇಶಾದ್ಯಂತ ಒಟ್ಟು ಅರ್ಹರ ಪಟ್ಟಿಯಲ್ಲಿ ಪಂಜಾಬ್ ಶೇ 23.16ರಷ್ಟು (4.74 ಲಕ್ಷ) ಫಲಾನುಭವಿಗಳನ್ನು ಹೊಂದಿದ್ದು, ಶೇ 16.87ರಷ್ಟು (3.45 ಲಕ್ಷ ಫಲಾನುಭವಿಗಳು) ಹಾಗೂ ಮಹಾರಾಷ್ಟ್ರ ಶೇ 13.99ರಷ್ಟು (2.86 ಲಕ್ಷ ಫಲಾನುಭವಿಗಳು) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

Published On: 10 January 2021, 03:28 PM English Summary: 1364 cr to over 20 lakh undeserving beneficiaries under pm kisan

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.