ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ (ಪಿಎಂಕೆವಿವೈ)ಯ ಮೂರನೇ ಹಂತವು ಈಗಾಗಲೇ ಆರಂಭವಾಗಿದೆ. ಈ ಯೋಜನೆಯಡಿ ನಿರುದ್ಯೋಗಿಗಳು ಸ್ವಂತ ಉದ್ಯೋಗಕ್ಕಾಗಿ 1.15 ಲಕ್ಷ ರೂಪಾಯಿಯವರೆಗೆ ಸಾಲಸೌಲಭ್ಯ ಪಡೆಯುವ ಅವಕಾಶವಿದೆ.
2015ರಲ್ಲಿ ಆರಂಭ :
ಕೇಂದ್ರ ಸರ್ಕಾರವು 2015ರಲ್ಲಿ ಪಿಎಂಕೆವಿವೈ ಅನ್ನು ಪ್ರಾರಂಭಿಸಿತು. ದೇಶದ ಕೈಗಾರಿಕೆಗಳಿಗೆ ಕೌಶಲಯುಕ್ತ ಯುವಕರನ್ನು ಒದಗಿಸುವ ಉದ್ದೇಶದಿಂದ ಪಿಎಂಕೆವಿವೈ ಅನ್ನು ಜಾರಿಗೆ ತರಲಾಗಿದೆ. ಈ ತರಬೇತಿಯ ಲಾಭವನ್ನು ಪಡೆದುಕೊಳ್ಳುವ ಮೂಲಕ ಯುವಜನತೆ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು ಅಥವಾ ಬೇರೆಲ್ಲಾದರೂ ಉದ್ಯೋಗ ಪಡೆಯಬಹುದು. ಇದಲ್ಲದೆ ಈ ಯೋಜನೆಯಡಿ ತರಬೇತಿ ಪಡೆದ ಯುವಕರಿಗೆ ಸರ್ಕಾರದಿಂದ ಉದ್ಯೋಗ ದೊರಕಿಸಿಕೊಡುವ ಪ್ರಯತ್ನಗಳು ಸಹ ನಡೆಯುತ್ತವೆ.
ಹೌದು, ಈ ಯೋಜನೆ ಆರಂಭವಾಗಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪಿಎಂಕೆವಿವೈ ಅನ್ನು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನಡೆಸುತ್ತಿದೆ. 2020-2021ರ ಸ್ಕೀಮ್ ಅವಧಿಯಲ್ಲಿ 1.5 ಕೋಟಿ ಅಭ್ಯರ್ಥಿಗಳಿಗೆ 948.90 ಕೋಟಿ ರೂ ವೆಚ್ಚದಲ್ಲಿ ತರಬೇತಿ ನೀಡಲಾಗುವುದು. 729 ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳು (ಪಿಎಂಕೆಕೆಗಳು), 200 ಕ್ಕೂ ಹೆಚ್ಚು ಐಟಿಐಗಳಲ್ಲಿ ತರಬೇತಿ ನೀಡಲು ಉದ್ಯೇಶ ಹೊಂದಿದೆ.
1.5 ಲಕ್ಷ ರೂ. ಸಾಲ :
ನಿರುದ್ಯೋಗಿಗಳಿಗೆ ಹಾಗೂ ಯಾವುದಾದರೂ ಹೊಸ ಉದ್ಯೋಗ ಆರಂಭಿಸಬೇಕೆಂದುಕೊಂಡವರಿಗೆ ಪ್ರೋತ್ಸಾಹ ನೀಡಲು ಈ ಯೋಜನೆಯಡಿ ಸರಕಾರವು 1.5 ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡುತ್ತದೆ. ಕಡಿಮೆ ವಿದ್ಯಾವಂತರು ಅಥವಾ 10ನೇ, 12ನೇ ತರಗತಿಯ ಡ್ರಾಪ್‌ಟೌಟ್ ಆದವರೂ ಈ ಯೋಜನೆಯ ಫಲಾನುಭವಿಗಳಾಗಬಹುದು. ಈ ಯೋಜನೆಯಡಿ ತರಬೇತಿ ಪಡೆಯುವವರಿಗೆ ಪ್ರತೀ 6 ತಿಂಗಳುಗಳಿಗೊಮ್ಮೆ ಸರಕಾರವು ಉದ್ಯೋಗ ಮೇಳವನ್ನು ಆಯೋಜಿಸುತ್ತದೆ.
ನೋಂದಾಯಿಸಿ ಕೊಳ್ಳುವುದು ಹೇಗೆ? :
ಈ ಯೋಜನೆಯಲ್ಲಿ ಹೆಸರು, ವಿಳಾಸ ಮತ್ತು ಇಮೇಲ್ ಇತ್ಯಾದಿಗಳನ್ನು http://pmkvyofficial.org ನಲ್ಲಿ ಭರ್ತಿ ಮಾಡಬೇಕು. ಅನಂತರ ಅರ್ಜಿದಾರರು ತರಬೇತಿ ನೀಡಲು ಬಯಸುವ ತಾಂತ್ರಿಕ ಕ್ಷೇತ್ರವನ್ನು ಆಯ್ಕೆ ಮಾಡಬೇಕಾಗುತ್ತದೆ.
ಇದು ನಿರ್ಮಾಣ, ಎಲೆಕ್ಟ್ರಾನಿಕ್ಸ್, ಯಂತ್ರಾಂಶ, ಆಹಾರ ಸಂಸ್ಕರಣೆ, ಪೀಠೊಪಕರಣಗಳು ಮತ್ತು ಫಿಟ್ಟಿಂಗ್‌ಗಳು, ಕರಕುಶಲ ವಸ್ತುಗಳು, ರತ್ನ-ಆಭರಣಗಳು ಮತ್ತು ಚರ್ಮದ ತಂತ್ರಜ್ಞಾನದಂತಹ ಸುಮಾರು 40 ತಾಂತ್ರಿಕ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಆದ್ಯತೆಯ ತಾಂತ್ರಿಕ ಕ್ಷೇತ್ರದ ಜತೆಗೆ, ಇತರ ತಾಂತ್ರಿಕ ಕ್ಷೇತ್ರವನ್ನೂ ಆಯ್ಕೆ ಮಾಡಬೇಕಾಗುತ್ತದೆ. ಈ ಮಾಹಿತಿಯನ್ನು ಭರ್ತಿ ಮಾಡಿದ ಅನಂತರ ನಿಮ್ಮ ತರಬೇತಿ ಕೇಂದ್ರವನ್ನು ನೀವು ಆರಿಸಬೇಕಾಗುತ್ತದೆ. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ https://pmkvyofficial.org ಈ ಜಾಲತಾಣಕ್ಕೆ ಭೇಟಿ ಕೊಡಬಹುದು.
Share your comments