330 ರೂಪಾಯಿ ಪಾವತಿಸಿ 2 ಲಕ್ಷ ರೂಪಾಯಿ ಜೀವ ವಿಮೆ ಪಡೆಯಿರಿ

ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ವಿಮಾ ಹೊಂದಿರುವವರು ಮೃತ ಪಟ್ಟರೆ ಅಥವಾ ಅವನು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ ಅವರ ಕುಟುಂಬಕ್ಕೆ 2 ಲಕ್ಷ ರೂ. ವಿಮಾ ಪ್ರಯೋಜನ ಸಿಗಲಿದೆ. ಹೌದು ಇದು ಸತ್ಯ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಯೋಜನೆಯಡಿಯಲ್ಲಿ ಈ ಸೌಲಭ್ಯ ಸಿಗಲಿದೆ.  ಕೇಂದ್ರ ಸರ್ಕಾರವು 2015 ರಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಆರಂಭಿಸಿದೆ. ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಪಾಲಿಸಿ ಮಾಡಿಸಿದ ವ್ಯಕ್ತಿ ನಿಧನವಾದರೆ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ವಿಮೆ ಹಣ ಸಿಗುತ್ತದೆ.

ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಒಂದು ವರ್ಷದ ಜೀವನ ವಿಮೆಯಾಗಿದ್ದು, ಪ್ರತಿ ವರ್ಷ ನವೀಕರಿಸಬೇಕಾಗುತ್ತದೆ. ಕಡಿಮೆ ಆದಾಯದ ವರ್ಗದ ಜನರು ಈ ವಿಮೆಯ ಸೌಲಭ್ಯ ಪಡೆಯಬಹುದು. 18-50 ವರ್ಷದೊಳಗಿನವರು ಈ ಪಾಲಿಸಿ ಮಾಡಿಸಬಹುದು.

ವಿಮೆ ಮಾಡಿಸಿದ ವ್ಯಕ್ತಿಯು ಯಾವುದೇ ಸಮಯದಲ್ಲಿ ತೊರೆಯಬಹುದು. ಮತ್ತು ಭವಿಷ್ಯದಲ್ಲಿ ಮತ್ತೇ ಸೇರಬಹುದು. ರಾಷ್ಟ್ರೀಕೃತ ಯಾವುದೇ ಬ್ಯಾಂಕ್ ನಲ್ಲಿ ಈ ಪಾಲಿಸಿಯನ್ನು ತೆರೆಯಬಹುದು. ಬ್ಯಾಂಕ್ ನಲ್ಲಿ ಖಾತೆಯಿರಬೇಕು. ಅದಕ್ಕೆ ಆಧಾರ್ ಲಿಂಕ್ ಆಗಿರಬೇಕು. ಪ್ರತಿವರ್ಷ ನಿಮ್ಮ ಅಕೌಂಟ್ ನಿಂದ 330 ರೂಪಾಯಿ ಕಟಾವು ಆಗುತ್ತದೆ. ವ್ಯಕ್ತಿ ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿದರೆ ಸಾಕು. ಅಂದರೆ 330 ರೂಪಾಯಿ ಅಕೌಂಟ್ ನಿಂದ ಕಡಿತಗೊಳಿಸಲಾಗುವುದರಿಂದ ಕನಿಷ್ಚ ಬ್ಯಾಲೆನ್ಸ್ ಹೊಂದಿರಬೇಕು. ಪಾಲಿಸಿಯ ಪ್ರಯೋಜನಗಳನ್ನು ಪಡೆಯಲು ಒಬ್ಬ ವ್ಯಕ್ತಿಯು ಒಂದೇ ಬ್ಯಾಂಕಿನಿಂದ ಪಾಲಿಸಿ ಮಾಡಿಸಿರಬೇಕು. ನಾಲ್ಕೈದು ಬ್ಯಾಂಕ್ ಅಕೌಂಟ್ ಇದ್ದರೂ ಸಹ ಒಂದೇ ಬ್ಯಾಂಕಿನಿಂದ ಪ್ರಿಮಿಯಂ ಹಣ ಕಡಿತಗೊಳಿಸಲು ಸೂಚಿಸಿದರೆ ಸಾಕು.

ವಿಮೆ ಖರೀದಿದಾರರು ಯಾವುದೇ ಅನಾರೋಗ್ಯದಿಂದ ಬಳಲುತ್ತಿಲ್ಲವೆಂಬುದಕ್ಕೆ ಪುರಾವೆಯಾಗಿ ವ್ಯಕ್ತಿಯು ಸ್ವಯಂ ದೃಢೀಕರಿಸಿದ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. 18 ರಿಂದ 50 ವರ್ಷದೊಳಗಿನ ಆಧಾರ್ ಕಾರ್ಡ್ ಹೊಂದಿದ ನಾಗರಿಕರು ಈ ನೂತನ ಜೀವ ವಿಮೆ ಯೋಜನೆಯಲ್ಲಿ ಸೇರಬಹುದು. ವಾರ್ಷಿಕ ಪ್ರೀಮಿಯಂ ಕೇವಲ 330 ರೂಪಾಯಿ ಪಾವತಿಸಬೇಕು. ಪಾಲಿಸಿದಾರ ಮೃತಪಟ್ಟರೆ 2 ಲಕ್ಷ ರೂಪಾಯಿ ವಿಮೆ ರಕ್ಷಣೆ ದೊರೆಯುತ್ತದೆ. ವ್ಯಕ್ತಿ 50ನೇ ವರ್ಅಷಕ್ಕೆ ಪಾಲಿಸಿ ಪಡದರೂ ಸಹ ವಾರ್ಷಿಕ ವಿಮಾ ಕಂತನ್ನು ಪಾವತಿಸುವ ಮೂಲಕ 55ನೇ ವರ್ಷದವರೆಗೂ ವಿಮೆ ರಕ್ಷಣೆ ಪಡೆಯಬಹುದು.

ಅಗತ್ಯ ದಾಖಲಾತಿಗಳು:

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ ನೋಂದಣಿ ಮಾಡಲು ಬ್ಯಾಂಕಿನಿಂದ ಅರ್ಜಿ ನಮೂನೆ ಪಡೆಯಬೇಕು.ಗುರುತಿನ ಚೀಟಿ ಹೊಂದಿರಬೇಕು. ಬ್ಯಾಂಕ್ ಖಾತೆ ಹೊಂದಿರಬೇಕು. ಬ್ಯಾಂಕ್ ಖಾತೆಯ ಸ್ವಯಂ ಡೆಬಿಟ್ ಸಮ್ಮತಿ ನೀಡಬೇಕು. ಒಂದು ವೇಳೆ ನೀವು ಉಳಿತಾಯ ಖಾತೆಹೊಂದಿದ್ದರೆ ಜೀವಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ ಮಾಡಿಸದಿದ್ದರೆ ಬ್ಯಾಂಕಿಗೆ ಹೋಗಿ ವಿಮೆ ಮಾಡಿಸಬಹುದು.

ಈ ರೀತಿಯಾಗಿ ನೀವು 2 ಲಕ್ಷ ರೂಪಾಯಿಗಳನ್ನು ಪಡೆಯಬಹುದು:
ಕೇವಲ 12 ರೂಪಾಯಿಗಳ ಬದಲಾಗಿ ನೀವು 2 ಲಕ್ಷ ರೂಪಾಯಿಗಳ ಲಾಭವನ್ನೂ ಪಡೆಯುತ್ತೀರಿ. ಯೋಜನೆಯಡಿಯಲ್ಲಿ ವಿಮೆ ಮಾಡಿದವರು ಯಾವುದೇ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬ ಸದಸ್ಯರು ಈ ಮೊತ್ತವನ್ನು ಪಡೆಯುತ್ತಾರೆ. ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ವಿಮಾ ಹೊಂದಿರುವವರ ಸಾವಿಗೆ ಅಥವಾ ಅವನು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ 2 ಲಕ್ಷ ರೂ. ವಿಮಾ ಹೊಂದಿರುವವರು ಈ ಯೋಜನೆಯಡಿ 18 ರಿಂದ 70 ವರ್ಷ ವಯಸ್ಸಿನ ಯಾರಾದರೂ ಭಾಗಶಃ ಅಂಗವಿಕಲರಾಗಿದ್ದರೆ ಅವರಿಗೆ 1 ಲಕ್ಷ ರೂ. ರಕ್ಷಣೆ ಪಡೆಯಬಹುದು.

Published On: 13 September 2021, 11:14 PM English Summary: Pradhan Mantri Jeevan Jyoti Bima Yojana benefit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.