ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಸೋಲಾರ್ ಪಂಪ್ಸ್ ಸೆಟ್ಗಳಿಗೆ ಶೇ. 80 ರಷ್ಟು ಸಬ್ಡಿಡಿ ಪಡೆಯಿರಿ. ಇಲ್ಲಿದೆ ಮಾಹಿತಿ

Solar pumpset

ಕುಸುಮ  ಯೋಜನೆ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್‍ಸೆಟ್‍ ಅಳವಡಿಸಲು ಸರ್ಕಾರವು ಶೇ.80 ರಷ್ಟು ಸಹಾಯಧನ ನೀಡಲು ಮುಂದಾಗಿದೆ.

ಹೌದು, ಕೇಂದ್ರ ಸರ್ಕಾರದ ಪಿಎಂ ಕುಸುಮ್  ಯೋಜನೆಯಡಿ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‍ಸೆಟ್‍ಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ.

PM-KUSUM, Component_B ಯೋಜನೆಯಡಿಯಲ್ಲಿ ಕೊಳವೆ/ತೆರೆದ ಬಾವಿಗಳಿಗೆ ಗರಿಷ್ಟ 7.5 ಹೆಚ್.ಪಿ. ಸಾಮರ್ಥ್ಯದವರೆಗೆ ಪ್ರತಿ ಸೌರ ಪಂಪ್‍ಸೆಟ್‍ಗೆ ಶೇ. 30 ರಷ್ಟು ಸಹಾಯಧನ ಒದಗಿಸಲಾಗುವುದು ಹಾಗೂ ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಪಂಗಡ ವರ್ಗದ ರೈತ ಫಲಾನುಭವಿಗಳ ಕೊಳವೆ/ತೆರೆದ ಬಾವಿಗಳಿಗೆ ಸೌರ ಪಂಪ್ ಸೆಟ್  ಅಳವಡಿಸಲು ಶೇ. 50 ರಷ್ಟು ಸಹಾಯಧನ ಒದಗಿಸಲಾಗುವುದು. ಸದರಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದವರು ಯೋಜನೆಗೆ ಅರ್ಹರಾಗುವುದಿಲ್ಲ.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಕೃಷಿ ಯಂತ್ರೋಪಕರಣಗಳಿಗೆ ಶೇ.80ರವರೆಗೆ ಸಬ್ಸಿಡಿ ಪಡೆಯಿರಿ

 ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಮತ್ತು ಈಗಾಗಲೇ ವಿದ್ಯುತ್ ಸಂಪರ್ಕದಲ್ಲಿರುವ ರೈತರ ಕೃಷಿ ಪಂಪ್‍ಸೆಟ್‍ಗಳಿಗೂ ಸಹ ಈ ಯೋಜನೆಯು ಅನ್ವಯಿಸುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು,  ಅರ್ಜಿಯನ್ನು ಸಲ್ಲಿಸಿದ ನಂತರ ಪಡೆದುಕೊಂಡು ಸ್ವೀಕೃತಿ ಪ್ರತಿ ಹಾಗೂ ಎಲ್ಲಾ ಡಾಕ್ಯುಮೆಂಟ್ ಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ದಿನಾಂಕದಿಂದ ಐದು ದಿನಗಳಿಗಾಗಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯ ಉಪವಿಭಾಗೀಯ ಕಚೇರಿಗಳಲ್ಲಿ ಸಲ್ಲಿಸಬೇಕು.

ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳು

ಭೂ ಮಾಲಿಕತ್ವವುಳ್ಳ ರೈತರ ಹೆಸರು, 2. ಆಧಾರ್ ಕಾರ್ಡ್ ಸಂಖ್ಯೆ, 3. ದೂರವಾಣಿ ಸಂಖ್ಯೆ, 4. ವಾಸಸ್ಥಳ ಮತ್ತು ವಿಳಾಸ, ಗ್ರಾಮ, ತಾಲೂಕು, ಜಿಲ್ಲೆ,5 ಭೂ ದಾಖಲೆಗಳ ವಿವರಗಳು-ಸರ್ವೆ ನಂಬರ್, ಗ್ರಾಮ, ಗ್ರಾಮ ಪಂಚಾಯತಿ, ಹೋಬಳಿ, ತಾಲೂಕು, ಜಿಲ್ಲೆ, 6.  ಜಾತಿ ಪ್ರಮಾಣಪತ್ರ ಆರ್.ಡಿ, ರೇಷನ್ ಕಾರ್ಡ್ ನಂಬರ್

 ಆಸಕ್ತಿಯುಳ್ಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು https://kredlinfo.in/Applnoffgridswp  ಗೆ  ಭೇಟಿ ನೀಡಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.

;

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಗೆ  ttps://kredlinfo.in/Scrollfiles/Offgrid%20SWP%20Paper-Notification.pdf  ಭೇಟಿ ನೀಡಿ ಅಲ್ಲಿ ಸರ್ಕಾರದಿಂದ ಬಿಡುಗಡೆಯಾದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ https://kredlinfo.in/ ಅಥವಾ ದೂರವಾಣಿ ಸಂಖ್ಯೆ-080 22202100ಗೆ ಸಂಪರ್ಕಿಸಬಹುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.