ನೋಂದಾಯಿತ ರೈತರಿಗೆ ಪಿ.ಎಂ.ಕಿಸಾನ್ ಇ-ಕೆವೈಸಿ ಮಾಡಿಸಲು ಸೂಚನೆ

Maltesh
Maltesh
Instructions For PM Kisan e-KYC for registered farmers

ಮಡಿಕೇರಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Sammana Nidhi) ಯೋಜನೆಯಡಿ ರೈತರ ಆದಾಯ ( Farmers Income) ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ. ಗಳನ್ನು ಒಟ್ಟು 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. 

ಜಿಲ್ಲೆಯ ಸುಮಾರು 49,582 ಜನ ನೋಂದಣಿಯಾಗಿದ್ದು, ಈಗಾಗಲೇ ನೇರ ಆರ್ಥಿಕ ನೆರವು ವರ್ಗಾವಣೆ ಚಾಲ್ತಿಯಲ್ಲಿದೆ. ಈ ಯೋಜನೆಯ ನೆರವು ಅರ್ಹ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಇ-ಕೆವೈಸಿ ಮಾಡಿಕೊಂಡ ರೈತರಿಗೆ ಮಾತ್ರ ಮುಂದಿನ ಕಂತು ಬಿಡುಗಡೆ ಮಾಡಲಾಗುವುದು.

ರೈತರು http://pmkisan.gov.in ಪೋರ್ಟಲ್‍ನ ಪಾರ್ಮರ್ಸ್ ಕಾರ್ನರ್‍ನ ಇ-ಕೆವೈಸಿ ಅವಕಾಶದಡಿ ರೈತರು ತಮ್ಮ (ಈಗಾಗಲೇ ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಿರುವ ಪ್ರತಿಯೊಬ್ಬ ರೈತರು ) ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್‍ಗೆ ಒಟಿಪಿ ( OTP)ಯು ರವಾನೆಯಾಗುತ್ತದೆ. ಹೀಗೆ ಸ್ವೀಕರಿಸಿದ ಒಟಿಪಿಯನ್ನು ಪೋರ್ಟಲ್‍ನಲ್ಲಿ  ದಾಖಲಿಸಿ “ಸಬ್‍ಮಿಟ್ ಫಾರ್ ಆಥ್ (SUBMIT FOR AUTH) ಎಂಬ ಬಟನ್ ಒತ್ತಬೇಕು.

ನಿಮ್ಮ ಅಕೌಂಟ್‌ಗೆ ಪಿಎಂ ಕಿಸಾನ್‌ 14 ನೆ ಕಂತು ಬರುತ್ತದೆಯೇ? ಈಗಲೇ ತಿಳಿದುಕೊಳ್ಳಿ

ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು e-KYC is “successfully submitted”ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಒಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವೈಸಿ ಮಾಡಬಹುದಾಗಿದೆ. (ಈಗಾಗಲೇ ಇ-ಕೆವೈಸಿ ಆಗಿದ್ದರೆ, “e-KYC already done”  ಎಂಬ ಮಾಹಿತಿ ಗೋಚರಿಸುತ್ತದೆ).

ಯಾವ ಫಲಾನುಭವಿಯು ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ ಇ-ಕೆವೈಸಿಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುದಿಲ್ಲವೋ ಅವರು ಸಿಎಸ್‍ಸಿ(ಸಿಟಿಜನ್ ಸರ್ವಿಸ್ ಸೆಂಟರ್ಸ್) ನಾಗರಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಬಹುದಾಗಿದೆ. ಅಲ್ಲಿ ಕೈಬೆರಳಿನ ಗುರುತು ಆಧಾರದ ಮೇಲೆ ಇ-ಕೆವೈಸಿ ಮಾಡಬಹುದಾಗಿದೆ.

ಈ ಯೋಜನೆಯ ಪ್ರತಿ ಫಲಾನುಭವಿ ರೈತರು, ಕೇಂದ್ರ ಸರ್ಕಾರವು ಮುಂದಿನ ಕಂತಿನಲ್ಲಿ ನೀಡುವ ಆರ್ಥಿಕ ನೆರವು ಪಡೆಯಲು ಜೂನ್, 30 ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ರೈತರು ತಮ್ಮ  ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ.

- ಡಿಐಪಿಆರ್‌ ಕೊಡುಗು

Published On: 20 June 2023, 11:55 AM English Summary: Instructions For PM Kisan e-KYC for registered farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.