ಈ ಬೆಳೆ ಬೆಳೆಯುವ ರೈತರಿಗೆ ಸರ್ಕಾರ ನೀಡ್ತಿದೆ ಹೆಕ್ಟರ್‌ಗೆ 10 ಸಾವಿರ ರೂ..ಇಲ್ಲಿದೆ ಮಾಹಿತಿ

Maltesh
Maltesh
ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಇದನ್ನು ನೇರ ವರ್ಗಾವಣೆ ಮೂಲಕ ರೈತರ ಅಕೌಂಟ್‌ಗೆ 10 ಸಾವಿರ ರೂಪಾಯಿ ಪಾವತಿಸಲಾಗುತ್ತದೆ. ಸಿರಿಧಾನ್ಯ ಬೆಳೆಗಳ ವ್ಯಾಪ್ತಿ ಹೆಚ್ಚಿಸಲು ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ.

ಈ ಯೋಜನೆಯನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಯೋಜನೆಗಳೊಂದಿಗೆ ಸಂಯೋಜಿಸಲಾಗಿದೆ. ಸಿರಿಧಾನ್ಯಗಳು ಪ್ರಮುಖವಾಗಿ ಮಳೆಯಾಶ್ರಿತ ಬೆಳೆಗಳಾಗಿದ್ದು ಮುಂಗಾರು ಹಂಗಾಮನಲ್ಲಿ ಬೆಳೆಯಲಾಗುತ್ತದೆ.

WPI Inflation: ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ..ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ..

ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!

ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು ಹಾಗೂ ಈ ಯೋಜನೆಯ ಅನುಷ್ಠಾನಕ್ಕಾಗಿ 1,000 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿದೆ.

ಯೋಜನೆಯ ಉದ್ದೇಶಗಳು ಏನು..?

ಸಿರಿಧಾನ್ಯ ಬಿತ್ತನೆಯನ್ನು ಹೆಚ್ಚಿಸುವುದು ಮತ್ತು ಉತ್ಪಾದನೆಯ ಹೆಚ್ಚಳ

ಸಿರಿಧಾನ್ಯಗಳು ಸುಸ್ಥಿರ ಕೃಷಿ ಹಾಗೂ ಪರಿಸರಕ್ಕೆ ಪೂರಕವಾಗಿರುವುದರಿಂದ ಈ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ

ಕಡಿಮೆ ಫಲಪ್ರದವಾದ ಭೂಮಿಯ ಸದ್ಬಳಕೆಗಾಗಿ ಪೂರಕವಾದ ಸುಧಾರಿತ ತಾಂತ್ರಿಕತೆಗಳನ್ನು ಸೂಕ್ತವಾಗಿ ಅಳವಡಿಸಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ

2 ಕಂತುಗಳಲ್ಲಿ ನಗದು ವರ್ಗಾವಣೆ

ಈ ಕಂಪನಿಯಲ್ಲಿ ತೂಕ ಇಳಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಬೋನಸ್‌..!

WPI Inflation: ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ..ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ..

ಸೀದಾ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು.

ಹಾರಕ, ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಆದ್ಯತೆ

ಮೊದಲ ಕಂತಿನ 6000 ರೂಪಾಯಿಯನ್ನು ಬಿತ್ತನೆ ಮಾಡಿದ 30 ದಿನಗಳ ನಂತರ ಜಿಪಿಎಸ್‌ ಆಧಾರಿತ ಫೋಟೋ ಪರಿಶೀಲನೆ ಬಳಿಕ ನೀಡಲಾಗುತ್ತದೆ.

₹4,000ವನ್ನು ನಂತರದಲ್ಲಿ ಜಮೆ ಮಾಡಲಾಗುವುದು.

ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ.

ಫಲಾನುಭವಿಗಳ ಅರ್ಹತೆ:

ಫಲಾನುಭವಿಯು ಮೊದಲಿಗೆ ರೈತರಾಗಿರಬೇಕು. ಅವರ ಹೆಸರರಿನಲ್ಲಿಯೇ ಜಮೀನನ್ನು ಹೊಂದಿರಬೇಕು. ಜಂಟಿ ಖಾತೆ ಇದ್ದಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆಯ ಪ್ರಮಾಣ ಪತ್ರ ಪಡೆದಿರಬೇಕು.

ಮಹಿಳೆಯ ಹೆಸರಲ್ಲಿ ಖಾತೆ ಹೊಂದಿ, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಮಾನ್ಯ ಮಾಡಬಾರದು, ಅಂತವುಗಳನ್ನು ತಿರಸ್ಕರಿಸಬೇಕು.

ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!

ಜೋರಾಗಿದೆ Hydroponic Farmingಗೆ ಬೇಡಿಕೆ..ಇಲ್ಲಿವೆ ಟಾಪ್‌ 5 ತರಕಾರಿಗಳು

ಈ ಯೋಜನೆಯಡಿ, ಮುಖ್ಯವಾಗಿ ರಾಜ್ಯದ 17 ಜಿಲ್ಲೆಗಳಲ್ಲಿಊದಲು, ನವಣೆ, ಹಾರಕ, ಕೊರಲೆ, ಸಾಮೆ, ಮತ್ತುಬರಗು ಸಿರಿಧಾನ್ಯಗಳಿಗೆ ಒತ್ತು ನೀಡಲಾಗಿದೆ. ಫಲಾನುಭವಿ ರೈತರು ಮೇಲ್ಕಾಣಿಸಿದ ಸಿರಿಧಾನ್ಯಗಳನ್ನೆ ಪ್ರಮುಖ ಬೆಳೆಯಾಗಿ ಬೆಳೆದಿರಬೇಕು

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ

ವಸತಿ ಪ್ರಮಾಣಪತ್ರ

ಆಧಾರ್ ಕಾರ್ಡ್

ಆದಾಯ ಪ್ರಮಾಣಪತ್ರ

ಬ್ಯಾಂಕ್ ಖಾತೆ ಪಾಸ್ ಬುಕ್‌

ವಿಳಾಸದ ಕುರಿತಂತೆ ಪುರಾವೆ

ಭೂ ದಾಖಲೆಗಳು

Published On: 11 June 2022, 04:29 PM English Summary: Govt Giving 10 Thousand Rupees to Farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.