ಸಿಹಿಸುದ್ದಿ: ರೈತರಿಗಾಗಿ “ಕೃಷಿ ಯಂತ್ರಧಾರೆ ಯೋಜನೆ”..! ಕಡಿಮೆ ಬಾಡಿಗೆಯಲ್ಲಿ ಹೆಚ್ಚಿನ ಲಾಭ..

Kalmesh T
Kalmesh T
Agricultural machinery project for farmers

ಕೃಷಿ ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೃಷಿ ಕಾಯಕಕ್ಕೆ ಆಧುನಿಕ ಯಂತ್ರಗಳು ದೊರೆಯುಂತಾಗಲಿ ಎಂಬ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಕೃಷಿ ಯಂತ್ರಧಾರೆ.

ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಕೃಷಿಯನ್ನು ಲಾಭದಾಯಕಾಗಿ  ರೂಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ.

ಇದನ್ನೂ ಓದಿರಿ: ಎಮ್ಮೆ ಖರೀದಿಸುವ ರೈತರಿಗೆ ಈ ಸರ್ಕಾರ ನೀಡುತ್ತಿದೆ 50% ಸಬ್ಸಿಡಿ..!

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ! 

ಎಲ್ಲೆಲ್ಲಿವೆ ಕೃಷಿ ಯಂತ್ರಧಾರೆ ಕೇಂದ್ರಗಳು?

ರಾಜ್ಯ ಕೃಷಿ ಇಲಾಖೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇವುಗಳನ್ನು ನಡೆಸುತ್ತಿದೆ. ಸದ್ಯ ರಾಜ್ಯದ 490 ಹೋಬಳಿ ಸ್ಥಳಗಳಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

25 ಜಿಲ್ಲೆಗಳ 164 ಹೋಬಳಿಗಳ ಕೇಂದ್ರಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ವಹಿಸಲಾಗುತ್ತಿದೆ.

ಯಾವೆಲ್ಲ ಕೃಷಿ ಯಂತ್ರಗಳು ಬಾಡಿಗೆಗೆ ಲಭ್ಯ?

ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌, ರೋಟರಿ ಟಿಲ್ಲರ್‌, ಎಂ.ಬಿ.ನೇಗಿಲು, ರೋಟಾವೇಟರ್‌, ಡಿಸ್ಕ್‌ ನೇಗಿಲು, ಡಿಸ್ಕ್‌ ಹ್ಯಾರೋ, ನೇಗಿಲು, ಕಬ್ಬಿನ ಸ್ಟಬಲ್‌ ಶೇವರ್‌ ಮತ್ತು ನೇಗಿಲು, ಲೆವೆಲ್ಲರ್‌ ಬ್ಲೇಡ್‌, ಕೇಜ್‌ ವೀಲ್‌, ಬ್ಲೇಡ್‌ ಕುಂಟೆ.

Subsidy: ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರಿಗೆ ಸಿಗಲಿದೆ ₹27000 ಸಹಾಯಧನ..!

ಸಿಹಿಸುದ್ದಿ: ರೈತರ ಖಾತೆಗೆ ಬರಲಿದೆ Pm Kisan 11 ನೇ ಕಂತಿನ ಹಣ! ಈ ದಾಖಲೆಗಳನ್ನು ಇನ್ನೊಮ್ಮೆ ಪರಿಶೀಲಿಸುವುದು ಉತ್ತಮ..

ಬದು ನಿರ್ಮಾಣ ಯಂತ್ರ, ಭತ್ತ ನಾಟಿ ಯಂತ್ರ, ಬದು ಮತ್ತು ಸಾಲು ತೆಗೆಯುವ ಯಂತ್ರ, ಲೇಸರ್‌ ಆಧಾರಿತ ಸಮತಟ್ಟು ಯಂತ್ರ, ಗುಂಡಿ ತೆಗೆಯುವ ಯಂತ್ರ, ಬಿತ್ತನೆ ಮತ್ತು ರಸಗೊಬ್ಬರ ಕೂರಿಗೆ ಯಂತ್ರ, ಶೂನ್ಯ ಬೇಸಾಯ ಹೊದಿಕೆ ಯಂತ್ರ, ಸಿಂಪರಣಾ ಯಂತ್ರಗಳು (ನ್ಯಾಪ್‌ ಸ್ಯಾಕ್‌, ಬ್ಯಾಟರಿ ಚಾಲಿತ, ವಿದ್ಯುತ್‌ ಚಾಲಿತ, ಗಟಾರ್‌, ಹೆಚ್‌ಟಿಪಿ)

ಬಹು ಬೆಳೆ ಒಕ್ಕಣೆ ಯಂತ್ರ, ಕೂರಿಗೆ, ನರ್ಸರಿ ಟ್ರೇ, ಕಳೆ ತೆಗೆಯುವ ಯಂತ್ರ, ತೂರುವ ಯಂತ್ರ, ನೆಲಗಡಲೆ ಸುಲಿಯುವ/ಒಕ್ಕಣೆ ಯಂತ್ರ, ಕಬ್ಬು ಸ್ಟ್ರೀಪ್ಪರ್‌, ಅಡಿಕೆ ಸುಲಿಯುವ ಯಂತ್ರ, ಕಟಾವು ಯಂತ್ರ, ಬಹುಬೆಳೆ ಕಟಾವು ಯಂತ್ರ, ಕಾಳು ಮೆಣಸು ಬಿಡಿಸುವ ಯಂತ್ರ, ಪಂಪ್‌ ಸೆಟ್‌, ನೀರಿನ ಟ್ಯಾಂಕರ್‌.

ಅಲ್ಯುಮಿನಿಯಂ, ಪೈಪುಗಳು, ಸ್ಟ್ರಿಂಕ್ಲರ್‌ಗಳು, ತಳ್ಳು ಗಾಡಿ, ಅಡಿಕೆ/ ತೆಂಗಿನ ಮರ ಹತ್ತುವ ಯಂತ್ರ, , ಟ್ರಾಲಿಗಳು, ಗರಗಸ ಹೀಗೆ 44 ಬಗೆಯ ಯಂತ್ರ/ ಉಪಕರಣಗಳು ಲಭ್ಯವಿದೆ. ಆದರೆ ಇದೆಲ್ಲಾ. ಆಯಾ ಭಾಗದ ಕೃಷಿ ಅವಶ್ಯಕತೆಗೆ ಅನುಗುಣವಾಗಿ ಉಪಕರಣಗಳು ಕೇಂದ್ರದಲ್ಲಿವೆ.

Recruitment: ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ನೇಮಕಾತಿ; ₹85000 ಸಂಬಳ!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಬಾಡಿಗೆಗೆ ಪಡೆಯುವುದು ಹೇಗೆ?

ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಾದಲ್ಲಿ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಹೋಗಿ ಬೇಕಾದ ಯಂತ್ರವನ್ನು ಮುಂಗಡ ಹಣ ಪಾವತಿಸಿ ಕಾಯ್ದಿರಿಸಬಹುದು. ಏಕಕಾಲದಲ್ಲಿ ಅಲ್ಲಿನ ಎಲ್ಲಾ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆಯನ್ನು ನೋಡಿಕೊಂಡು ಬಾಡಿಗೆ ನೀಡಲಾಗುವುದು.

ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಪ್ರಕಟಿಸಲಾಗಿರುತ್ತದೆ. ಇತರ ಕಡೆಗಳಲ್ಲಿ ದೊರೆಯುವ ಯಂತ್ರಗಳಿಗೆ ಹೋಲಿಸಿದರೆ ಇಲ್ಲಿ ಬಾಡಿಗೆ ಕಡಿಮೆ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಖಾಸಗಿ ಯಂತ್ರಗಳಿಗಿಂತ ಕಡಿಮೆ ಬಾಡಿಗೆ..

ರೈತರು ಕಾರ್ಮಿಕರ ಸಮಸ್ಯೆಯಿಂದ ಕೃಷಿಗೆ ಅವಶ್ಯಕ ಯಂತ್ರಗಳನ್ನು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಾಡಿಗೆ ನೀಡಿ ಪಡೆಯುತ್ತಾರೆ. ಆದರೆ ಬಾಡಿಗೆ ಕೇಂದ್ರದಲ್ಲಿ ನೋಂದಾಯಿಸಿಕೊಂಡರೆ ಯಂತ್ರಗಳನ್ನು ಕಳುಹಿಸಿಕೊಡುವಾಗ ಜತೆಗೆ ನುರಿತ ಚಾಲಕರನ್ನೂ ಕಳುಹಿಸಿ ಕೊಡಲಾಗುತ್ತದೆ.

ಯಂತ್ರ ನಿಮ್ಮ ಗದ್ದೆಗೆ ಇಳಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಸಮಯದ ಲೆಕ್ಕಾಚಾರವನ್ನು ಆ ಯಂತ್ರವನ್ನು ಚಲಿಸುವವರೇ ನೋಡಿಕೊಳ್ಳುತ್ತಾರೆ. ಚಾಲಕನಿಗೆ ಹಣ ನೀಡಬೇಕಾದ ಅಗತ್ಯವಿಲ್ಲ.

ಕೆಲವೊಂದು ಚಾಲಕ ರಹಿತ ಯಂತ್ರಗಳು ಅಂದರೆ ನಾವೇ ಬಳಸಬಹುದಾದ ಡೀಸೆಲ್‌ ಪಂಪು, ಗರಗಸ, ಸ್ಪ್ರೇ ಯರ್‌ ಮುಂತಾದ ಯಂತ್ರೋಪಕರಣಗಳನ್ನು ಬಳಕೆ ಮಾಡಿದ ನಂತರ ಕೇಂದ್ರಕ್ಕೆ ಹಿಂದಿರುಗಿಸಬೇಕಿದ್ದು ಯಂತ್ರಗಳ ಬಾಡಿಗೆಯು ಕೂಡ ಕೈಗೆಟುಕುವಂತಿರುತ್ತದೆ.

Published On: 27 May 2022, 10:52 AM English Summary: Agricultural machinery project for farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.