ಕೇಂದ್ರದಿಂದ ಪ್ರತಿ ತಿಂಗಳು ರೈತರಿಗೆ 3000 ರೂ. ಪಿಂಚಣಿ! ಪಿಎಂ ಕಿಸಾನ್ ಮನ್‌ಧನ್‌ ಯೋಜನೆಯಲ್ಲಿದೆ ರೈತರಿಗೆ ಸಹಾಯ

Kalmesh T
Kalmesh T
3,000 per month from the center. Pension! Assistance to farmers under PM Kisan Mandhan project

ಇತರೆ ಕ್ಷೇತ್ರಗಳಲ್ಲಿ ಇರುವಂತೆಯೇ ಕೃಷಿ ಕ್ಷೇತ್ರದಲ್ಲಿಯೂ ರೈತರ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ತಿಂಗಳು ರೈತರಿಗೂ ಕೂಡ ರೂ. 3000 ಪಿಂಚಣಿಯನ್ನು ನೀಡಲು ಕೇಂದ್ರ ಸರ್ಕಾರದ ಯೋಜನೆಯೊಂದು ಇಲ್ಲಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಅವರ ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಕೇಂದ್ರ ಸರ್ಕಾರವು PM Kisan Maan Dhan Pension Scheme  ಯೋಜನೆ ಜಾರಿ ಮಾಡಿದೆ. ಈ ಮೂಲಕ ರೈತರಿಗೂ ಮಾಸಿಕ ಪಿಂಚಣಿ ಸೌಲಭ್ಯ ಕಲ್ಪಿಸಿದೆ.

ರೈತರಿಗೆ ಖಚಿತ ಪಿಂಚಣಿ ಸಿಗಲಿದೆ

ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್‌ ಯೋಜನೆಯಡಿ ರೈತರಿಗೆ 60 ವರ್ಷಗಳ ನಂತರ ಪಿಂಚಣಿ ನೀಡಲಾಗುವುದು. ವಿಶೇಷವೆಂದರೆ ನೀವು ಪಿಎಂ ಕಿಸಾನ್‌ನಲ್ಲಿ ಖಾತೆದಾರರಾಗಿದ್ದರೆ, ನಿಮಗೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಪಿಎಂ ಕಿಸಾನ್ ಮನ್‌ಧನ್‌ ಯೋಜನೆಯಲ್ಲಿ ನಿಮ್ಮ ನೇರ ನೋಂದಣಿಯನ್ನು ಸಹ ಮಾಡಲಾಗುತ್ತದೆ. ಈ ಯೋಜನೆಯ ಅನೇಕ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ.

ಇದನ್ನೂ ಓದಿರಿ:

ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!

ಕಡಿಮೆ ವೆಚ್ಚ ಹೆಚ್ಚು ಇಳುವರಿ; ಕ್ಯಾಸ್ಟರ್ ಬೆಳೆದು ಲಾಭ ಪಡೆಯಿರಿ!

ಏನಿದು ಪಿಎಂ ಕಿಸಾನ್ ಮಾನ್‌ಧನ್‌ ಯೋಜನೆ

ಪಿಎಂ ಕಿಸಾನ್ ಮಾನ್‌ಧನ್ ಯೋಜನೆ (PM Kisan Maan Dhan Pension Scheme)ಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 60 ವರ್ಷ ವಯಸ್ಸಿನ ನಂತರ ಈ ಯೋಜನೆಯಡಿ ರೈತರಿಗೆ ಪಿಂಚಣಿ ಸೌಲಭ್ಯವಿದೆ. ಅಂದರೆ, ರೈತರ ವೃದ್ದಾಪ್ಯ ಕಾಪಾಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕ 3000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ.

ಮಾನ್‌ಧನ್‌ ಯೋಜನೆಗೆ ಅಗತ್ಯವಿರುವ ದಾಖಲೆಗಳು

1. ಆಧಾರ್ ಕಾರ್ಡ್
2. ಗುರುತಿನ ಚೀಟಿ
3. ವಯಸ್ಸಿನ ಪ್ರಮಾಣಪತ್ರ
4. ಆದಾಯ ಪ್ರಮಾಣಪತ್ರ
5. ಕ್ಷೇತ್ರದ ಖಸ್ರಾ ಖತೌನಿ
6. ಬ್ಯಾಂಕ್ ಖಾತೆ ಪಾಸ್‌ಬುಕ್
7. ಮೊಬೈಲ್ ಸಂಖ್ಯೆ
8. ಪಾಸ್‌ಪೋರ್ಟ್ ಗಾತ್ರದ ಫೋಟೋ

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

Good News.. ಡ್ರೋನ್ ಬಳಕೆಗಾಗಿ 477 ಕೀಟನಾಶಕಗಳಿಗೆ ಗ್ರೀನ್ ಸಿಗ್ನಲ್..!

ಕುಟುಂಬ ಪಿಂಚಣಿ ಒದಗಿಸುವುದು

ಈ ಯೋಜನೆಯಡಿಯಲ್ಲಿ, ನೋಂದಾಯಿತ ರೈತರು 60 ವರ್ಷ ವಯಸ್ಸಿನ ನಂತರ ವಯಸ್ಸಿನ ಪ್ರಕಾರ ಮಾಸಿಕ ಹೂಡಿಕೆಯ ಮೇಲೆ ಕನಿಷ್ಠ 3000 ರೂ ಅಥವಾ ವರ್ಷಕ್ಕೆ ರೂ 36,000 ಪಿಂಚಣಿ ಪಡೆಯುತ್ತಾರೆ. ಇದಕ್ಕಾಗಿ ರೈತರು ಮಾಸಿಕ ರೂ.55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ.

ಪಿಎಂ ಕಿಸಾನ್ ಮಾನ್‌ಧನ್‌ ನಲ್ಲಿ (PM Kisan Maan Dhan Pension Scheme) ಕುಟುಂಬ ಪಿಂಚಣಿ ಸೌಲಭ್ಯವೂ ಇದೆ. ಖಾತೆದಾರನ ಮರಣದ ನಂತರ, ಅವನ ಸಂಗಾತಿಯು ಶೇ.50ರಷ್ಟು ಪಿಂಚಣಿ ಪಡೆಯುತ್ತಾರೆ. ಕುಟುಂಬ ಪಿಂಚಣಿಯಲ್ಲಿ ಸಂಗಾತಿಯನ್ನು ಮಾತ್ರ ಸೇರಿಸಲಾಗುತ್ತದೆ.

333 ರೂ. Deposit ಮಾಡಿ 16 ಲಕ್ಷ ಪಡೆಯಿರಿ! ಇಲ್ಲಿದೆ Bumper ಅವಕಾಶ

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

ಪಿಎಂ ಕಿಸಾನ್ ಸಮ್ಮಾನ್‌ ನಿಧಿ ಫಲಾನುಭವಿಗೆ ಹೇಗೆ ಪ್ರಯೋಜನ?

ಪ್ರಧಾನಮಂತ್ರಿ ಕಿಸಾನ್ ಯೋಜನೆ(PM Kisan Yojana)ಯಡಿ, ಅರ್ಹ ರೈತರಿಗೆ 2000 ರೂ.ಗಳ 3 ಕಂತುಗಳಲ್ಲಿ ಸರ್ಕಾರವು ಪ್ರತಿ ವರ್ಷ ರೂ 6000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಅದರ ಖಾತೆದಾರರು ಪಿಂಚಣಿ ಯೋಜನೆ ಪಿಎಂ ಕಿಸಾನ್ ಮಾಂದನ್ ಯೋಜನೆಯಲ್ಲಿ ಭಾಗವಹಿಸಿದರೆ, ಅವರ ನೋಂದಣಿಯನ್ನು ಸುಲಭವಾಗಿ ಮಾಡಲಾಗುತ್ತದೆ.

ಅಲ್ಲದೆ, ರೈತರು ಈ ಆಯ್ಕೆಯನ್ನು ಆರಿಸಿದರೆ, ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಕಡಿತಗೊಳಿಸುವ ಕೊಡುಗೆಯನ್ನು ಈ 3 ಕಂತುಗಳಲ್ಲಿ ಪಡೆದ ಮೊತ್ತದಿಂದಲೇ ಕಡಿತಗೊಳಿಸಲಾಗುತ್ತದೆ. ಅಂದರೆ, ಇದಕ್ಕಾಗಿ ಪಿಎಂ ಕಿಸಾನ್ ಖಾತೆದಾರರು ಜೇಬಿನಿಂದ ಹಣ ಹೂಡಿಕೆ ಮಾಡಬೇಕಾಗಿಲ್ಲ.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!

Published On: 22 April 2022, 06:10 PM English Summary: 3,000 per month from the center. Pension! Assistance to farmers under PM Kisan Mandhan project

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.