1. ಇತರೆ

ನಾನೂ ಒತ್ತಡ ಆತಂಕಕ್ಕೆ ಒಳಗಾಗಿದ್ದೆ- ಎಂ.ಎಸ್. ಧೋನಿ

ಯಾವುದೇ ಕ್ರೀಡೆ ಆಗಿರಲಿ ಕೋಚ್‌ ಹಾಗೂ ಕ್ರೀಡಾಪಟು ನಡುವೆ ಮುಕ್ತವಾದ ಸಂವಾದ ಮುಖ್ಯವಾಗುತ್ತದೆ, ಆದರೆ ಮುಕ್ತ ಸಂವಾದ ನಡೆಯುವುದಿಲ್ಲ. ಇದರಿಂದಾಗಿ ಬಹಳಷ್ಟು ಸಲ ಕ್ರೀಡಾಪಟು ಒತ್ತಡದಿಂದ ಹೊರಬರುವುದಿಲ್ಲ. ಒತ್ತಡದಿಂದ ಹೊರಬಂದು ಕ್ರೀಡಾಪಟು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ತಿಳಿಸಿದ್ದಾರೆ.
ಕ್ರೀಡಾಪಟುಗಳಿಗೆ ಮಾನಸಿಕ ಸದೃಢತೆಯ ಕುರಿತು ತಿಳಿವಳಿಕೆ ಮೂಡಿಸಿ ಸಾಮರ್ಥ್ಯ ವೃದ್ಧಿಸುವ ನೆರವು ನೀಡುತ್ತಿರುವ ಎಂ. ಫೋರ್ ಸಂಸ್ಥೆಯು ಏರ್ಪಡಿಸಿದ್ದ ಸಂವಾದದಲ್ಲಿ ಧೋನಿ ಮಾತನಾಡಿದ್ದಾರೆ.
ಇಂದಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ “ಒತ್ತಡ ಇದ್ದೇ ಇರುತ್ತದೆ, ಆದರೆ ಅದನ್ನು ಹೇಳಿಕೊಳ್ಳುವುದಿಲ್ಲ, ನಾನೂ ಬ್ಯಾಟಿಂಗ್‌ಗೆ  ಕ್ರೀಸ್‌ಗೆ ಇಳಿದಾಗ ಆರಂಭದ 5ರಿಂದ 10 ಎಸೆತಗಳನ್ನು ಎದುರಿಸುವಾಗ ಹೆಚ್ಚು ಒತ್ತಡಕ್ಕೆ ಒಳಗಾಗುತ್ತೇನೆ. ಅದನ್ನು ನಾವು ಮಾನಸಿಕ ಸ್ಥಿತಿ ನಿರ್ವಹಣಾ ತರಬೇತುದಾರರ ಜತೆ ನಾವು ಎಷ್ಟೋ ಸಲ ಚರ್ಚಿಸಲು  ಹಿಂದೇಟು ಹಾಕುತ್ತೇವೆ, ಇದಕ್ಕೆ ಕಾರಣ ಭಾರತದಲ್ಲಿ ಇನ್ನೂ ಮಾನಸಿಕ ಒತ್ತಡವನ್ನು ಮುಕ್ತವಾಗಿ ಜನ ಹಂಚಿಕೊಳ್ಳುತ್ತಿಲ್ಲ.

ಕ್ರೀಡಾಪಟು ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳಲು ಆಟಗಾರರು ಹಾಗೂ ತರಬೇತುದಾರನ ನಡುವಿನ ಉತ್ತಮ ಸ್ನೇಹದಿಂದ ಮಾತ್ರ ಸಾಧ್ಯವಾಗುತ್ತದೆ. ಕೋಚ್‌ ಜತೆಗಿದ್ದಾಗ ಆಟಗಾರ ಯಾವ ವಲಯದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾನೆ ಎನ್ನುವುದನ್ನು ಕಂಡು ಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಧೋನಿ ತಿಳಿಸಿದ್ದಾರೆ.
Published On: 09 May 2020, 03:23 PM English Summary: I am under stress anxiety- MS. Dhoni

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.