1. ಇತರೆ

ಹೀರೇಕಾಯಿಯಲ್ಲಿ ಅಡಗಿವೆ ಸದೃಢ ಆರೋಗ್ಯದ ಹತ್ತಾರು ಸೂತ್ರಗಳು

ಹೀರೇಕಾಯಿ ಕರ್ನಾಟಕದ ಮನೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಕಾಯಿಪಲ್ಲೆ. ಹೀರೇಕಾಯಿ ಎಣ್ಣೆಗಾಯಿ, ಹೀರೇಕಾಯಿ ಪಲ್ಯ, ಹೀರೇಕಾಯಿ ಚಟ್ನಿ, ಹೀರೇಕಾಯಿ ಬಜ್ಜಿ, ಬೋಂಡಾ ಹೀಗೆ ಇದರಿಂದ ಹತ್ತು ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ಇನ್ನು ಹೀರೇಕೇಯಿಯ ಸಿಪ್ಪೆಯಿಂದ ಮಾಡುವ ಚಟ್ನಿ ಬಲು ರುಚಿಕರ. ಮಧ್ಯ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿ ಬಿಸಿ ರೊಟ್ಟಿ ಜೊತೆ ಹೀರೇಕಾಯಿ ಪಲ್ಯ ಸವಿಯಲಾಗುತ್ತದೆ. ಚಪಾತಿ, ರಾಗಿ ರೊಟ್ಟಿ ಹಾಗೂ ಅಕ್ಕಿ ರೊಟ್ಟಿಗೂ ಈ ಪಲ್ಯ ಅದ್ಭುತ ಕಾಂಬಿನೇಷನ್ ಆಗುತ್ತದೆ.

ತಿನ್ನಲು ರುಚಿಯಾಗಿರುತ್ತದೆ ಎಂಬ ಕಾರಣಕ್ಕೆ ಆಗಾಗ ಹೀರೇಕಾಯಿ ಸೇವಿಸುವವರಿಗೆ ಇದರಲ್ಲಿ ಅಡಗಿರುವ ಆರೋಗ್ಯದ ಗುಟ್ಟುಗಳು ಮಾತ್ರ ತಿಳಿದಿಲ್ಲ. ಹೀರೇಕಾಯಿ ಬಳ್ಳಿ, ಅದರ ಎಲೆಗಳು, ಕಾಂಡ, ಬೇರು ಹಾಗೂ ಕಾಯಿ ಸೇರಿ ಎಲ್ಲವೂ ಮಾನವನ ಆರೋಗ್ಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಪೂರಕವಾಗಿವೆ. ಇಂತಹ ಅದ್ಭುತ ತರಕಾರಿಯಿಂದ ಆಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ.

* ಮಧುಮೇಹ ರೋಗಿಗಳು ದಿನವೂ ಹೀರೇಕಾಯಿ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಉಪವಾಸದ ನಂತರ ಹೀರೇಕಾಯಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಹೀರೇಕಾಯಿ ರಸವನ್ನು ಕುಡಿಯುವುದು ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಪ್ರಯೋಜನಕಾರಿ. ಪೊಟ್ಯಾಷಿಯಂನಿಂದ ಸಮೃದ್ಧವಾಗಿರುವ ಹೀರೇಕಾಯಿ, ಹೃದಯದ ಸಮರ್ಪಕ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಹೃದಯಾಘಾತ ಮತ್ತು ರಕ್ತದ ಕೊರತೆಯಿಂದ ಕಾಣಿಸಿಕೊಳ್ಳುವ ಹೃದಯದ ಸಮಸ್ಯೆಗಳನ್ನು ತಡೆಯುತ್ತದೆ. ಜೊತೆಗೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಖಿನ್ನತೆಯನ್ನು ದೂರ ಮಾಡುತ್ತದೆ.

* ಶ್ರೀಲಂಕಾದಲ್ಲಿ ಮಧುಮೇಹಕ್ಕೆ ಆಯುರ್ವೇದ ಔಷಧಿಯಾಗಿ ಹೀರೇಕಾಯಿ ಬಳಸಲಾಗುತ್ತದೆ. ಕಾಂಡದ ಮೇಲ್ಭಾಗದ ಪದರ ಮತ್ತು ಎಳೆಯ ಎಲೆಗಳನ್ನು ಬೇಯಿಸಿದ ನೀರನ್ನು ಸೂಪ್‌ಗೆ ಬೆರೆಸಿ ರೋಗಿಗಳಿಗೆ ನೀಡುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ.

* ಮೆದುಳಿಗೆ ಮತ್ತು ನರಗಳ ಕಾರ್ಯ ನಿರ್ವಹಣೆಗೆ ಅಗತ್ಯವಾಗಿರುವ ‘ಬಿ’ ಜೀವಸತ್ವಗಳು ಹೀರೇಕಾಯಿಯಲ್ಲಿ ಹೇರಳವಾಗಿದ್ದು, ಆತಂಕ, ಅಪಸ್ಮಾರ ಮತ್ತು ಆಲ್ ಜೈಮರ್ ಚಿಕಿತ್ಸೆಗೆ ಇದು ನೆರವಾಗುತ್ತದೆ.

* ಈ ತರಕಾರಿಯಲ್ಲಿನ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುತ್ತದೆ. ಇದರಲ್ಲಿನ ವಿಟಮಿನ್ ‘ಬಿ’ ಮತ್ತು ಫೈಬರ್ ಅಂಶಗಳು ಜೀರ್ಣ ಕ್ರಿಯೆ ಸುಧಾರಣೆಗೆ ಸಹಕಾರಿಯಾಗಿವೆ. ಆಯುರ್ವೇದದಲ್ಲಿ ಇದನ್ನು ಅನೋರೆಕ್ಸಿಯಾ ಮತ್ತು ಕೆಮ್ಮು ನಿಯಂತ್ರಣಕ್ಕೆ ಬಳಸಲಾಗುತ್ತದೆ.

* ಇದರಲ್ಲಿನ ಆ್ಯಂಟಿ-ಹಿಸ್ಟಮೈನ್ ಅಂಶಗಳು ಚರ್ಮದ ಕಿರಿಕಿರಿ ಮತ್ತು ಅಲರ್ಜಿಯನ್ನು ಗುಣಪಡಿಸುತ್ತವೆ. ಹೀರೆಕಾಯಿ ಕಬ್ಬಿಣ ಅಂಶವನ್ನು ಹೊಂದಿದ್ದು, ಇದನ್ನು ಪ್ರತಿ ದಿನ ಸೇವಿಸುವುದರಿಂದ ಕಬ್ಬಿಣದ ಕೊರತೆ ನಿವಾರಣೆಯಾಗುತ್ತದೆ. ತ್ವಚೆಯ ಬಿರುಕು, ಗೊನೊರಿಯಾ, ಪಿತ್ತರಸದ ಕಾಯಿಲೆ, ಅನೋರೆಕ್ಸಿಯಾ, ಕೆಮ್ಮು ಮತ್ತು ಮಧುಮೇಹ ಗಾಯಗಳಿಗೆ ಚಿಕಿತ್ಸೆ ನೀಡಲು ಹೀರೇಕಾಯಿ ಎಲೆಗಳನ್ನು ಬಳಸುತ್ತಾರೆ.

* ಆಯುರ್ವೇದದಲ್ಲಿ ಕಣ್ಣಿನ ಪೊರೆ ಚಿಕಿತ್ಸೆಗಾಗಿ ಹೀರೇಕಾಯಿ ಬಳ್ಳಿಯ ಕಾಂಡದ ರಸವನ್ನು ಬಳಸಲಾಗುತ್ತದೆ. ಹಾಗೇ, ಯಕೃತ್ತಿನ ಕಾಯಿಲೆಗಳ ಉಪಶಮನಕ್ಕೆ ಹೀರೇಕಾಯಿ ಉಪಯುಕ್ತವಾಗಿದೆ.

* ಮೂಲವ್ಯಾದಿಯಿಂದ ನರಳುವವರು ಹೀರೇಕಾಯಿ ಬಳ್ಳಿಯ ಬೇರನ್ನು ನುಣ್ಣಗೆ ಅರೆದು ಅದನ್ನು ಮೂಲದ ಮೊಳಕೆಗೆ ದಿನವೂ ಹೆಚ್ಚುತ್ತಾ ಬಂದರೆ ವ್ಯಾದಿ ಉಪಶಮನವಾಗುತ್ತದೆ.

* ಹೀರೆಕಾಯಿ ಬಳ್ಳಿಯ ಕಸಿ ಎಲೆಗಳನ್ನು ನುಣ್ಣಗೆ ಅರೆದು ಅದನ್ನು ಗಾಯದ ಮೇಲೆ ಹೆಚ್ಚುತ್ತಾ ಬಂದರೆ ಗಾಯ ಬೇಗ ಗುಣವಾಗುತ್ತದೆ. ಜೊತೆಗೆ ಬೊಜ್ಜು ಇಳಿಸಲು ಸಹ ಹೀರೇಕಾಯಿ ಬಳಕೆಯಲ್ಲಿದೆ. ಇದರಲ್ಲಿರುವ ಆಂಟಿ-ಅಡಿಪೋಜೆನಿಕ್ ಏಜೆಂಟ್ ಅಂಶವು ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುವ ಜೊತೆಗೆ, ಸ್ಥೂಲಕಾಯತೆಯಿಂದ ಉಂಟಾಗುವ ಚಯಾಪಚಯ ರೋಗಗಳನ್ನು ನಿವಾರಿಸುತ್ತದೆ.

* ದೀರ್ಘಕಾಲದಿಂದ ಆಯಾಸ ಹೊಂದಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಹೀರೇಕಾಯಿಗೆ ಪ್ರಧಾನ ಸ್ಥಾನ ನೀಡಬೇಕು. ಇದರಲ್ಲಿನ ಕಬ್ಬಿಣದ ಸಮೃದ್ಧ ಅಂಶವು ಆಯಾಸ ನಿವಾರಿಸುತ್ತದೆ. ಜೊತೆಗೆ ಇದರ ನಿರಂತರ ಸೇವನೆಯಿಂದ ನೀವು ಫಿಟ್ ಆಗಿ ಆರೋಗ್ಯಕರ ಮತ್ತು ಶಕ್ತಿಯುತವಾಗಿರುತ್ತೀರಿ.

* ಆಲ್ ಜೈಮರ್ ಕಾಯಿಲೆ, ಅಪಸ್ಮಾರ, ಮರಗಟ್ಟುವಿಕೆ, ಮಲ್ಟಿಪಲ್ ಸತ್ಯಾರಿಯಾಸಿಸ್ (ಅತಿಕಾಮುಕತೆ), ಆತಂಕ ಮತ್ತು ಇತರ ಹಲವಾರು ನರ ಸಂಬAಧಿತ ಸಮಸ್ಯೆಗಳನ್ನು ಎದುರಿಸಲು ಹೀರೇಕಾಯಿ ಸಹಕಾರಿ. ಈ ತರಕಾರಿಯಲ್ಲಿರುವ ಥಯಾಮಿನ್ ಅಂಶವು, ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ.

* ಪ್ರೋಟೀನ್ ಪಡೆಯಲು ಮತ್ತು ದೇಹದಲ್ಲಿನ ಕೊಬ್ಬನ್ನು ಕರಗಿಸಲು ಹೀರೇಕಾಯಿ ರಾಮಬಾಣವಾಗಿದೆ. ಹೀರೇಕಾಯಿ ಸೇವಿಸಿದ ನಂತರ ಅದರೊಳಗಿರುವ ಥಯಾಮಿನ್, ರಕ್ತ ಮತ್ತು ಪ್ಲಾಸ್ಮಾದ ಜೊತೆ ಬೆರೆತು ಜೀವಕೋಶಗಳಿಗೆ ಅಪಾರ ಶಕ್ತಿಯನ್ನು ನೀಡುತ್ತದೆ.

* ಹೀರೇಕಾಯಿಯಲ್ಲಿ ಅಡಕವಾಗಿರುವ ಶ್ರೀಮಂತ ಫೈಬರ್ ಅಂಶವು ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ವ್ಯಕ್ತಿಯ ತೂಕ ಮತ್ತು ಗಾತ್ರ ಹೆಚ್ಚಿಸುವಲ್ಲಿ ಇದರಲ್ಲಿನ ಡಯೆಟರಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಅಗತ್ಯ ಪ್ರಮಾಣದ ಫೈಬರ್ ಸೇವನೆಯಿಂದ ಡ್ಯುವೋಡೆನಲ್ ಅಲ್ಸರ್, ಹೆಮೊರೊಯಿಡ್ಸ್, ಗ್ಯಾಸ್ಟ್ರೋ ಅನ್ನನಾಳದ ರಿಫ್ಲಕ್ಸ್ ಕಾಯಿಲೆ, ಮಲಬದ್ಧತೆ ಮತ್ತು ಡೈವರ್ಟಿಕ್ಯುಲೈಟಿಸ್ ಸಮಸ್ಯೆಗಳು ನಿವಾರಣೆಯಾಗುತ್ತವೆ.

* ಹೀರೇಕಾಯಿಯಲ್ಲಿರುವ ಕ್ಯಾಲ್ಸಿಯಂ ಅಲ್ಪಾವಧಿಯಲ್ಲಿ ಕಿಡ್ನಿ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯ ಹೊಂದಿರುತ್ತದೆ. ವಾಸ್ತವವಾಗಿ ನೀರಿನಲ್ಲಿರುವ ಹೆಚ್ಚುವರಿ ಕ್ಯಾಲ್ಸಿಯಂ ಕಿಡ್ನಿ ಕಲ್ಲುಗಳಿಗೆ ಕಾರಣವಾಗುತ್ತದೆ. ಹೀಗಾಗಿ ಕಿಡ್ನಿ ಕಲ್ಲಿನಿಂದ ದೂರವಿರಲು ಹೀರೇಕಾಯಿಯನ್ನು ಆಗಾಗ ಸೇವಿಸುತ್ತಿರಿ.

ಮಾಹಿತಿ: ಅಫ್ಫು ಉಡುಪಿ, ಮನೆ ಮದ್ದು

Published On: 23 July 2021, 01:11 PM English Summary: health benefits of ridge gourd

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.