1. ಪಶುಸಂಗೋಪನೆ

ಗೋವು ತಾಯಿ ಸಮಾನ, ಗೋವನ್ನು ಕಸಾಯಿಖಾನೆಗೆ ಹೋಗಲು ಬಿಡಬಾರದು- ಸಚಿವ ಪ್ರಭು ಚವ್ಹಾಣ್

ಯಾರ ಮನೆಯಲ್ಲಿ ಗೋವು ಇರುತ್ತದೋ ಆ ಕುಟುಂಬ ಭಾಗ್ಯಶಾಲಿ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ ಹೇಳಿದರು.

ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಪಶು ಆಸ್ಪತ್ರೆಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗೋವಿ ಅನಾದಿಕಾಲದಿಂದಲೂ ನಮಗೆ ಪೂಜನೀಯವೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಗೋವು ಅತ್ಯಂತ ಪವಿತ್ರವೆಂದು ಭಾವಿಸುತ್ತೇವೆ.  ಹಾಲು, ಮೊಸರು, ತುಪ್ಪ, ಗೋಮೂತ್ರ ಸಗಣಿ ಎಲ್ಲವನ್ನು ಇಂದು ನಾವು ಯಥೇಚ್ಛವಾಗಿ ಬಳಸುತ್ತಿದ್ದೇವೆ. ತಾಯಿಯ ಸಮಾನ ನಮ್ಮ ಆರೋಗ್ಯವನ್ನು ಎಲ್ಲ ವಿಧಗಳಿಂದ ಕಾಪಾಡುತ್ತಿರುವ ಗೋವನ್ನು ಎಂದೂ ಕಸಾಯಿಖಾನೆಗೆ ಹೋಗಲು ಬಿಡಬಾರದು ಎಂದು ಹೇಳಿದರು.

ಗೋ ಹತ್ಯೆ ನಿಷೇಧ ಮಾಡಿಯೇ ತೀರುತ್ತೇನೆ-ಪ್ರಭು ಚವ್ಹಾಣ

ಗೋ ಹತ್ಯೆ ನಿಷೇಧ ಮಾಡಿಯೇ ತೀರುತ್ತೇನೆ. ಮುಂದಿನ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಮೋದನೆ ಪಡೆಯುತ್ತೇನೆ ಎಂದು ಮಂಗಳವಾರ ವಿಜಪುರದಲ್ಲಿ ಪಶು ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿರು.

ಕೋವಿಡ್-19 ನಿಂದಾಗಿ ಗೋಹತ್ಯೆ ಕಾಯ್ದೆ ಜಾರಿ ವಿಳಂಬವಾಗಿದೆ. ಆದರೆ ಮುಂದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿಯೇ ಸಿದ್ದ. ಹಸುಗಳು ಕಸಾಯಿಖಾನೆಗೆ ಹೋಗಬಾರದು ಎಂದರು.

ಸರ್ಕಾರದಿಂದ ಪಶುಗಳ ತುರ್ತು ಚಿಕಿತ್ಸೆಗಾಗಿ ಪಶು ಸಂಜೀವಿನಿ ವಾಹನವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಂಬುಲೆನ್ಸ್ ನೀಡಲಾಗುವುದು ಎಂದು ಹೇಳಿದರು.

Published On: 18 November 2020, 08:00 PM English Summary: Which family has cow, that family is lucky

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.