1. ಪಶುಸಂಗೋಪನೆ

ವೈಜ್ಞಾನಿಕವಾಗಿ ದಾಣಿ ಮಿಶ್ರಣ ನೀಡುವುದರಿಂದ ರಾಸುಗಳಲ್ಲಿ ಹಾಲು ಉತ್ಪಾದನೆ ಹೆಚ್ಚಾಗುತ್ತದೆ

Animal husbandry

ದಾಣಿ ಮಿಶ್ರಣ ತಯಾರಿಕೆ, ರೈತರ ಪ್ರತಿಯೊಬ್ಬರ ಮನೆಯಲ್ಲಿ ಹಸುಗಳು ಸಾಕುವುದು ಸಹಜ, ಇನ್ನೂ ಕೆಲವರು ಅದನ್ನೇ ಪ್ರಮುಖ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಮತ್ತು ಅದು ಅಧಿಕ ಲಾಭ ನೀಡುವ ಉದ್ಯೋಗವಾಗಿದೆ. ಉದಾಹರಣೆಗೆ ಹೈನುಗಾರಿಕೆ, ಈ ರೀತಿಯಾಗಿ ರಾಸುಗಳಿಗೆ ದಾಣಿ ಮಿಶ್ರಣ ನೀಡುವುದರಿಂದ, ಹಾಲಿನ ಇಳುವರಿಯಲ್ಲಿ ಹೆಚ್ಚು. ಮತ್ತು ಅದಕ್ಕೆ ಬೇಕಾಗುವ ಪೋಷಕಾಂಶಗಳು,ಸಮಯಕ್ಕೆ ಸರಿಯಾಗಿ ಗರ್ಭಧರಿಸುವಿಕೆ,ಹೆಚ್ಚಾಗುತ್ತದೆ.

ದಾಣಿ ಮಿಶ್ರಣ ಅಂದರೆ ಎಲ್ಲಾ ಪೋಷಕಾಂಶಗಳು ಮತ್ತು ಜೀವಸತ್ವಗಳು, ಖನಿಜಾಂಶಗಳು ಪುಡಿಮಾಡಿ ರಾಸುಗಳಿಗೆ ತಿನ್ನಿಸುವುದು.ಈ ರೀತಿಯಾಗಿ ವೈಜ್ಞಾನಿಕವಾಗಿ ತಯಾರಿಸಿದ ಈ ಆಹಾರವು ಹೆಚ್ಚು ಶಕ್ತಿ ಹೊಂದಿರುತ್ತದೆ, ಮತ್ತು ರಾಸುಗಳ ಆರೋಗ್ಯ ಗುಣಮಟ್ಟವು ಹೆಚ್ಚಾಗುತ್ತದೆ.ಈ ದಾಣಿ ಮಿಶ್ರಣವು ರಾಸುಗಳಿಗೆ ಪಿಷ್ಠ, ಸಾರಜನಕ, ಜೀವಸತ್ವಗಳು ಸಮತೋಲನವಾಗಿ ನೀಡುತ್ತದೆ. ಹೈನುರಾಸುಗಳಿಗೆ ಯಾವುದೇ ರೀತಿ ಆಂಟಿ ಬಯೋಟಿಕ್ಸ್ ಮತ್ತು ಪ್ರೊಬಯೋಟಿಕ್ಸ್ ಅವಶ್ಯಕತೆ ಇರುವುದಿಲ್ಲ.

ದಾಣಿ ಮಿಶ್ರಣ ತಯಾರಿಕೆ:

ಶಕ್ತಿ ಪ್ರಧಾನವಾದ ವಸ್ತುಗಳು 45 ಪ್ರತಿಶತದಷ್ಟು ಇರಬೇಕು. ಕೃಷಿ ಕೈಗಾರಿಕಾ ಉತ್ಪನ್ನಗಳು 35% ರಷ್ಟು  ಇರಬೇಕು.(ರೈತರು ತಮ್ಮಲ್ಲಿ ಲಭ್ಯವಿರುವ ವಸ್ತುಗಳ ಆಧಾರದ ಮೇಲೆ ಶಕ್ತಿ ಪ್ರಧಾನವಾದ ವಸ್ತುಗಳನ್ನು 60ರಷ್ಟು ತೆಗೆದುಕೊಳ್ಳಬಹುದು ಮತ್ತು ಕೃಷಿ ಕೈಗಾರಿಕಾ ಉತ್ಪನ್ನಗಳು 20ರಷ್ಟು ತೆಗೆದುಕೊಳ್ಳಬಹುದು. ಒಟ್ಟಾರೆಯಾಗಿ ಶಕ್ತಿ ಪ್ರಧಾನವಾದ ವಸ್ತುಗಳು ಮತ್ತು ಕೃಷಿ ಕೈಗಾರಿಕಾ ಉತ್ಪನ್ನಗಳು ಎರಡು ಸೇರಿ 80ರಷ್ಟು ಇರಬೇಕು. ಸಸಾರಜನಕ ಪ್ರಧಾನವಾದ ವಸ್ತುಗಳು 17 ಪ್ರತಿಶತದಷ್ಟು ಇರಬೇಕು.  ಖನಿಜಾಂಶದ ಪುಡಿ 2 ಪ್ರತಿಶತದಷ್ಟು ಇರಬೇಕು. ಉಪ್ಪು ಒಂದು ಪ್ರತಿಶತದಷ್ಟು ಇರಬೇಕು.

 ಉದಾಹರಣೆಗೆ : 10 ಕೆಜಿ ಎಷ್ಟು ದಾಣಿ ಮಿಶ್ರಣ ತಯಾರಿಸಬೇಕಾದರೆ ಸುಮಾರು ಅದರಲ್ಲಿ ಶಕ್ತಿ ಪ್ರಧಾನವಾದ ವಸ್ತುಗಳು 4.5 ಕೆಜಿ ಎಷ್ಟಿರಬೇಕು. ಮತ್ತು ಕೃಷಿ ಕೈಗಾರಿಕಾ ಉತ್ಪನ್ನಗಳು 3.5 ಕೆಜಿ ಇರಬೇಕು. ಮತ್ತು ಸಸಾರಜನಕ ಪ್ರಧಾನವಾದ ವಸ್ತುಗಳು 1.7 ಕೆಜಿ ಇರಬೇಕು. ಮತ್ತು ಖನಿಜಾಂಶದ ಪುಡಿ ಎರಡು ಕೆಜಿ ಇರಬೇಕು. ಮತ್ತು ಒಂದು ಕೆಜಿ ಎಷ್ಟು ಉಪ್ಪು ಇರಬೇಕು.

 ಸೂಚನೆಗಳು :

ಶಕ್ತಿ ಪ್ರಧಾನವಾದ ವಸ್ತುಗಳು ಅಂದರೆ : ಮುಸಕಿನ ಜೋಳ, ಗೋವಿನ ಜೋಳ, ರಾಗಿ, ಸಜ್ಜಿ,ಗೋಧಿ, ಇತ್ಯಾದಿ...

ಕೃಷಿ ಕೈಗಾರಿಕಾ ಉತ್ಪನ್ನಗಳು ಅಂದರೆ:  ಅಕ್ಕಿ ತವುಡು, ಗೋಧಿ ಬೂಸಾ,ಮುಸುಕಿನ ಜೋಳದ ಬೂಸಾ, ಹೆಸರುಕಾಳು ಹೂಟ್ಟು, ಉದ್ದಿನಕಾಳಿನ ಹೊಟ್ಟು, ಕಡಲೆಕಾಯಿಯ( ಶೇಂಗಾ) ಹೊಟ್ಟು, ಕಾಕಂಬಿ ಅಥವಾ ಬೆಲ್ಲದ ಪಾಕ, ಇತ್ಯಾದಿ.....

★ ಸಸಾರಜನಕ ಪ್ರಧಾನವಾದ ವಸ್ತುಗಳು ಅಂದರೆ:  ಶೇಂಗಾ ಹಿಂಡಿ, ಹತ್ತಿಕಾಳು ಹಿಂಡಿ,ಸೂರ್ಯಕಾಂತಿ ಹಿಂಡಿ,ಎಳ್ಳು ಹಿಂಡಿ, ಸೋಯಾ ಅವರೆ ಹಿಂಡಿ,  ಅಗಸೆ ಹಿಂಡಿ  ,ಹುಚ್ಚಳ್ಳು  ಹಿಂಡಿ, ಹಾಗೂ ಎಲ್ಲಾ ದ್ವಿದಳ ಧಾನ್ಯದ ಕಾಳುಗಳು, ಮತ್ತು ಎಣ್ಣೆಕಾಳುಗಳು.

ಲೇಖನ:ಮುತ್ತಣ್ಣ ಬ್ಯಾಗೆಳ್ಳಿ

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.