1. ಪಶುಸಂಗೋಪನೆ

ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಉಚಿತ ಕರುಳು ಬೇನೆ ಲಸಿಕೆ ಆರಂಭ

Ramlinganna
Ramlinganna
goat

ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದರಿಂದ ಜಾನುವಾರುಗಳಿಗೆ ವಿವಿಧ ರೋಗಗಳು ಬರುವ ಸಾಧ್ಯತೆಯಿದೆ. ಆಡು, ಕುರಿಗಳಿಗೆ ಕರುಳು ಬೇನೆ ರೋಗ ಬರಬಾರದೆಂದು ಕೊಪ್ಪಳ  ಜಿಲ್ಲೆಯ ಎಲ್ಲಾ ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಉಚಿತ ಕರಳು ಬೇನೆ ಲಸಿಕಾ ಕಾರ್ಯಕ್ರಮವನ್ನು ಜೂನ್ 5 ರಿಂದ ಆರಂಭಿಸಲಾಗಿದೆ.

ಕರಳು ಬೇನೆ ರೋಗವನ್ನು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿಯಂತೆ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಮೊದಲನೇ ಸುತ್ತಿನ ಲಿಸಕೆ ಕಾರ್ಯಕ್ರಮವು ಜೂನ್ ಮಾಹೆಯಲ್ಲಿ ಕಾರ್ಯಾರಂಭಗೊAಡಿದ್ದು, ಎರಡನೇ ಸುತ್ತಿನ ಲಸಿಕೆ ಕಾರ್ಯಕ್ರಮವು ಡಿಸೆಂಬರ್-2021 ನೇ ಮಾಹೆಯಲ್ಲಿ ಜರುಗಲಿದೆ. ಪ್ರಯುಕ್ತ 2021-22ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಕರಳು ಬೇನೆ (ಇ.ಟಿ) ಲಸಿಕೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಉಚಿತವಾಗಿ ಹಾಕಲಾಗುತ್ತಿದೆ.

ಕರಳು ಬೇನೆ ರೋಗವು ಸಾಮಾನ್ಯವಾಗಿ ಕುರಿ-ಮೇಕೆಗಳಲ್ಲಿ ಕಂಡುಬರುತ್ತದೆ. ಈ ರೋಗವು ಕ್ಲಾಸ್ಟಾçಡಿಯಂ ಪರ್‌ಫ್ರುಂಜೇನ್ಸ್ ಎಂಬ ನಂಜುಕಾರಕ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದರಿಂದ ಕುರಿ ಮಂಕಾಗುವಿಕೆ, ಮೇವಿನತ್ತ ನಿರಾಸಕ್ತಿ, ಭೇದಿ, ಸುತ್ತಿ-ಸುತ್ತಿ ಬಿದ್ದು ಹಠಾತ ಸಾವನ್ನಪ್ಪುವುದು. ರೋಗಾಣು ಕುರಿ-ಮೇಕೆಗಳ ಕರುಳಿನಲ್ಲಿ ವೃದ್ಧಿ ಹೊಂದಿ ವಿಷ ವಸ್ತುವನ್ನು ಉತ್ಪಾದಿಸಿ ನಂಜು ಉಂಟು ಮಾಡುತ್ತದೆ.

 ರೋಗ ಕಾಣಿಸಿಕೊಂಡಲ್ಲಿ ಕುರಿ-ಮೇಕೆ ಮರಿಗಳಲ್ಲಿ ಹೆಚ್ಚಿನ ಸಾವಿನ ಪ್ರಮಾಣ ಕಂಡುಬರುತ್ತದೆ. ಆದ್ದರಿಂದ, ಜಿಲ್ಲೆಯ ಎಲ್ಲಾ ಕುರಿ-ಮೇಕೆ ಸಾಕಾಣಿಕೆದಾರ ಹಾಗೂ ರೈತರ ಕುರಿ-ಮೇಕೆಗಳಿಗೆ ಕರಳು ಬೇನೆ ಲಸಿಕೆಯನ್ನು ಹಾಕಿಸಿ, ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರು(ಆಡಳಿತ) ಡಾ.ಹೆಚ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.