1. ಪಶುಸಂಗೋಪನೆ

ಒಣಮೇವು ಪೌಷ್ಟೀಕರಣದಿಂದ ಮೇವಿನ ಸಮರ್ಪಕ ಬಳಕೆ- ರಾಸುಗಳಿಗೆ ನೀಡುವುದರಿಂದ ಹೆಚ್ಚಿನ ಲಾಭ

ಬೇಸಿಗೆ ಹಂಗಾಮಿನಲ್ಲಿ ಅಥವಾ ಬರಪರಿಸ್ಥಿತಿಯಲ್ಲಿ ಹಸಿರು ಮೇವು ದೊರಕದೆ ಜಾನುವಾರುಗಳು ಹಸಿವೆಯಿಂದ ಬಳಲುತ್ತವೆ ಹಾಗೂ ರೆತರಿಗೆ ಪಶು ಆಹಾರ ಪೂರೆಕೆ ಕಷ್ಟವಾಗುತ್ತದೆ. ಅದರ ಬದಲಾಗಿ ಮುಂಗಾರು ಹಂಗಾಮಿನಲ್ಲಿ ಲಭ್ಯವಿರುವ ಹಸಿ ಮೇವನ್ನು ರಸಮೇವಾಗಿ ಪರಿವರ್ತಿಸಿ ಒಣಮೇವನ್ನು ಪೌಷ್ಟೀಕರಿಸಿ ಸಂಸ್ಕರಿಸಿ ಸಂರಕ್ಷಿಸುವುದರಿಂದ ಬೇಸಿಗೆ ಹಾಗೂ ಬರಗಾಲದಲ್ಲಿ ಮೇವಿನ ಕೊರತೆಯನ್ನು ನೀಗಿಸುವುದರ ಜೊತೆಗೆ ಹೆಚ್ಚಿನ ಹಾಲಿನ ಉತ್ಪಾದನೆಯನ್ನು ಪಡೆಯಬಹುದು.

ಒಣಮೇವು ಪೌಷ್ಟೀಕರಣ ತಯಾರಿಸುವ ಕ್ಕಿಂತ ಮೊದಲು ನೀವು ಒಂದು ಸಲ ಪಶು  ತಜ್ಞರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೂರಿಯಾ ಪ್ರಮಾಣವನ್ನು ಸರಿಯಾಗಿ ಹಾಕಿದ್ದೆಯಾದರೆ ಖಂಡಿತವಾಗಿಯೂ ಅದು ರಾಸುಗಳಿಗೆ ಉಪಯೋಗವಾಗುತ್ತದೆ.

 ಪಶು ವಿಶ್ವವಿದ್ಯಾಲಯ ಬೀದರ್, ಪಶು ಮಹಾವಿದ್ಯಾಲಯ ಹೆಬ್ಬಾಳ, ಬೆಂಗಳೂರು. ಇವರಿಂದ ಈ ಮಾಹಿತಿಯನ್ನು ಪಡೆಯಲಾಗಿದೆ. ಉಪಯೋಗಿಸುವ ಕ್ಕಿಂತ ಮುಂಚೆ ಸ್ವಲ್ಪ ಎಚ್ಚರವಿರಲಿ.  ಮೊದಲಿಗೆ ಇದು ಕಡಿಮೆ ಪ್ರಮಾಣದಿಂದ ನಂತರದ ದಿನಗಳಲ್ಲಿ  ಹೆಚ್ಚಿಗೆ ಕೊಡುವುದು ಉತ್ತಮವಾಗಿದೆ.

ಒಣಮೇವನ್ನು ಪೌಷ್ಟೀಕರಣ ಗೊಳಿಸುವದರಿಂದ ಆಗುವ ಲಾಭಗಳು:

* ಮೇವು ಹಾಳಾಗುವುದನ್ನು ತಡೆಯಬಹುದು.

* ಹೆಚ್ಚು ಜೀರ್ಣವಾಗುತ್ತದೆ.

* ಸಸಾರಜನಕ ಪ್ರಮಾಣ ಹೆಚ್ಚಾಗುತ್ತದೆ.

* ಮೇವಿನ ಸೇವನೆ ಹೆಚ್ಚಾಗುತ್ತದೆ.

grass

* ಹೆಚ್ಚು ನಾರಿನಂಶ ಜೀರ್ಣವಾಗುವುದರಿಂದ ರಾಸುಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ.

* ಈ ರೀತಿ ತಯಾರಿಸಿದ ಒಣಮೇವನ್ನು ನೀಡುವುದರಿಂದ ಶೇಕಡಾ 30ರಿಂದ 35ರಷ್ಟು ಹಿಂಡಿ ಮಿಶ್ರಣವನ್ನು ನೀಡುವುದನ್ನು ತಪ್ಪಿಸಬಹುದು. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ, ಖರ್ಚು ಕಡಿಮೆಯಾಗುತ್ತದೆ.

* ರಾಸುಗಳಲ್ಲಿ ಹಾಲಿನ ಪ್ರಮಾಣ ಮತ್ತು ಕೊಬ್ಬಿನ ಪ್ರಮಾಣ ಮೂರರಿಂದ ನಾಲ್ಕು ವಾರಗಳಲ್ಲಿ ಹೆಚ್ಚಾಗುತ್ತದೆ.

* ಹಸುಗಳ ಉತ್ತಮ ಆರೋಗ್ಯ. ಮತ್ತು ಗರ್ಭ ಕಟ್ಟುವಿಕೆ ಉತ್ತಮವಾಗಿರುತ್ತದೆ. ಒಣಮೇವಿನ ಸದ್ಬಳಕೆಯ ಕೂಡ ಆಗುತ್ತದೆ.

ಒಣಮೇವನ್ನು ಉಪಯೋಗಿಸುವ ಕ್ರಮಗಳು:

 ಉಪಚರಿಸಿದ ಒಣಮೇವನ್ನು ತಮಗೆ ಬೇಕಾದಷ್ಟು ಒಂದು ದಿನಕ್ಕೆ ಆಗುವಷ್ಟು ಮಾತ್ರ ತೆಗೆದುಕೊಳ್ಳಬೇಕು. ಉಳಿದ ಒಣಮೇವನ್ನು ಮತ್ತೆ ಗಾಳಿಯಾಡದಂತೆ ಇಡಬೇಕು. ಮತ್ತು ಈ ಉಪಚರಿಸಿದ ಒಣಮೇವನ್ನು ನೀವು ಹಸಿ ಹುಲ್ಲಿನೊಂದಿಗೆ ಸಹ ಕೊಡಬಹುದು. ಒಂದು ವೇಳೆ ಈ ರೀತಿಯಾಗಿ ಉಪಚರಿಸಿದ ಒಣಮೇವನ್ನು ರಾಸುಗಳು ತಿನ್ನದಿದ್ದರೆ ಅದಕ್ಕೆ ಬೆಲ್ಲದ ನೀರು ಅಥವಾ ಹಿಂಡಿ ನೀರು ಸಿಂಪಡಿಸಿ ಹಂತಹಂತವಾಗಿ ತಿನ್ನಿಸುವುದು ರೂಢಿ ಮಾಡಿಸಬೇಕು.ದಪ್ಪ ಕಾಂಡ ಉಳ್ಳದ್ದು ಮೇವಿನ ಬೆಳೆಗಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ರಾಸುಗಳಿಗೆ ನೀಡಬೇಕು. ಈ ರೀತಿ ಉಪಚರಿಸಿದ ಮೇವನ್ನು ರಾಸುಗಳ ದಾವಣಿಯಲ್ಲಿ ಹಾಕಬೇಕು.  ಹೀಗೆ ಮಾಡುವುದರಿಂದ ಸಗಣಿ ಮತ್ತು ಗಂಜಲದಿಂದ ಮಾಲಿನ್ಯ ವಾಗುವುದನ್ನು ತಪ್ಪಿಸಬಹುದು. ರಾಸುಗಳಿಗೆ ಹೊಟ್ಟು ಆಹಾರವಾಗಿ ನೀಡುವುದಾದರೆ ಬುಟ್ಟಿಯಲ್ಲಿ ಇಡಬೇಕು.

ಪ್ರಮುಖವಾದ ಸೂಚನೆ:

 *ಇದನ್ನು ಮಾಡಿದ ನಂತರ 21ದಿನಗಳ ಕಾಲ ಒಣಮೇವನ್ನು ಮುಚ್ಚಿಡಬೇಕು.ನಂತರ ಇದನ್ನು ದೊಡ್ಡ ರಾಸುಗಳಿಗೆ ತಿನ್ನಿಸಬೇಕು.

* ಆರು ತಿಂಗಳು ಕಿಂತ ಚಿಕ್ಕದಿರುವ ಕರೆಗಳಿಗೆ ಸಂಸ್ಕರಿಸಿದ ಅಥವಾ ಪೌಷ್ಟೀಕರಣ ಗೊಳಿಸಿದ ಮೇವನ್ನು ತಿನ್ನಿಸಬಾರದು.

* ಸಂಸ್ಕರಿಸಿದ ಒಣಮೇವನ್ನು ಮಳೆಯಿಂದ ಬಿಸಿಲಿನಿಂದ ರಕ್ಷಿಸಬೇಕು. ಸ್ವಲ್ಪಮಟ್ಟಿಗೆ ಗಾಳಿಯಾಡದಂತೆ ನೋಡಿಕೊಳ್ಳಬೇಕು.

*ಯೂರಿಯಾವನ್ನು ನೀರಿನಲ್ಲಿ ಸರಿಯಾಗಿ ಕಲಿಸಬೇಕು.

* ಉಪಚರಿಸಿದ ಹುಲ್ಲನ್ನು ರಾಸುಗಳಿಗೆ ನೀಡುವ ಮೊದಲು ಅರ್ಧ ಗಂಟೆಗಳ ಕಾಲ ಆರಲು ಬಿಡಬೇಕು.

 ಯೂರಿಯಾ ದಿಂದ ಒಣಮೇವಿನ ಪೌಷ್ಟೀಕರಣ,

ಯೂರಿಯಾ ದಿಂದ ಒಣಮೇವನ್ನು ಪೌಷ್ಟೀಕರಣಗೊಳಿಸಲು ತೆಳವು  ಕಾಂಡ ಉಳ್ಳ ಭತ್ತ,  ರಾಗಿ, ಗೋಧಿ, ಕಬ್ಬಿನ ವಾಡಿ, ಯೋಗ್ಯವಾಗಿವೆ.

 ಒಂದು 100 ಕೆಜಿ ಹುಲ್ಲಿನ ಅಥವಾ ಕಬ್ಬಿನ ವಾಡಿ ಯೂರಿಯಾ ದಿಂದ ಪುಷ್ಟೀಕರಣ ಗೊಳಿಸಲು ಬೇಕಾಗುವ ಸಾಮಗ್ರಿಗಳು:-( ಬಹಳ ಎಚ್ಚರಿಕೆಯಿಂದ ಯೂರಿಯಾ ಪ್ರಮಾಣವನ್ನು ಹಾಕಬೇಕು, ಸ್ವಲ್ಪ ಕೂಡ ಹೆಚ್ಚು ಕಡಿಮೆ ಮಾಡಬಾರದು, ಆ ರೀತಿ ಏನಾದರೂ ಆದರೆ ಹಸುಗಳಿಗೆ ತೊಂದರೆ ಉಂಟಾಗಬಹುದು ಇದರಿಂದ ಇದು ಎಚ್ಚರಿಕೆಯಿಂದ ಮಾಡುವುದು ಉತ್ತಮ.)

* ಯೂರಿಯಾ 4ಕೆಜಿ

* 40ರಿಂದ 45 ಲೀಟರ್ ನೀರನ್ನು ಪ್ರತಿ 100 ಕೆಜಿ ಹುಲ್ಲಿಗೆ.

* 100ಕೆಜಿ ಕಬ್ಬಿನ ವಾಡಿ ಅಥವಾ ಜೋಳದ ಕಣಕಿ ಅಥವಾ ಭತ್ತದ ಹುಲ್ಲು.

* ಬ್ಯಾರೆಲ್ ಅಥವಾ ನೀರಿನ ಟಾಕಿ ಅಥವಾ ಪ್ಲಾಸ್ಟಿಕ್ ಶೀಟ್

* ಯೂರಿಯಾ ನೀರನ್ನು ಸಿಂಪಡಿಸಲು ಯಂತ್ರ ಅಥವಾ ಜಾರಿ.

* ತೂಕದ ಯಂತ್ರ ಅಥವಾ ಮಷೀನ್.

 ಒಣಮೇವು ಪೌಷ್ಟೀಕರಣದ ಸೂತ್ರ

 * ಪ್ರತಿ 25 ಕೆಜಿ ಒಣಮೇವನ್ನು 1 ಕೆಜಿ ಯೂರಿಯಾವನ್ನು ಹತ್ತರಿಂದ ಹನ್ನೆರಡು ಲೀಟರ್ ನೀರಿನೊಂದಿಗೆ ಸೇರಿಸಿ ಸಿಂಪಡಿಸಬೇಕು.

* ಪ್ರತಿ 100 ಕೆಜಿ ಒಣಮೇವನ್ನು 4ಕೆಜಿ ಯೂರಿಯಾವನ್ನು 40ರಿಂದ 45 ಲೀಟರ್ ನೀರಿನೊಂದಿಗೆ ಸರಿಯಾಗಿ ಮಿಶ್ರಣ ಮಾಡಿ ಸಿಂಪಡಿಸಬೇಕು.

* ಪ್ರತಿ 200 ಕೆಜಿ ಒಣಮೇವನ್ನು 8 ಕೆಜಿ ಯೂರಿಯಾವನ್ನು 80 ರಿಂದ 90 ಲೀಟರ್ ನೀರಿನೊಂದಿಗೆ ಸರಿಯಾಗಿ ಮಿಶ್ರಣಮಾಡಿ ಸಿಂಪಡಿಸು.

ಸೂಚನೆಗಳು

 ಉಪಯೋಗಿಸುವ ಕ್ಕಿಂತ ಮೊದಲು ಒಂದು ಸಲ ಅನುಭವವಿರುವ ಪಶು  ತಜ್ಞರಿಗೆ,ಕೇಳಿ ನಂತರ ಬಳಸಿ ನಿಜವಾಗಿಯೂ ಈ ರೀತಿ ಒಣಮೇವನ್ನು ಪೌಷ್ಟೀಕರಣ ಗೊಳಿಸಿ ರಾಸುಗಳಿಗೆ ನೀಡುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ರೈತರು ಯೂರಿಯಾವನ್ನು ಸರಿಯಾದ ತೂಕದ ಯಂತ್ರದಲ್ಲಿ ತೂಕ ಮಾಡಬೇಕು.  ಎಷ್ಟು ಪ್ರಮಾಣ ಯೂರಿಯಾ ಅವಶ್ಯಕತೆ ಇದೆಯೋ ಅಷ್ಟೇ ಪ್ರಮಾಣದಲ್ಲಿ ಸರಿಯಾಗಿ ಕರಗಿಸಿ ನಂತರ ಸಿಂಪಡಿಸಬೇಕು.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ

Published On: 31 December 2020, 06:09 PM English Summary: fodder and grass urea enrichment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.