1. ಪಶುಸಂಗೋಪನೆ

ಚಳಿಗಾಲದಲ್ಲಿ ಮೆಲಕು ಹಾಕುವ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯಾ ಕಾಯಿಲೆಗಳು

ಬ್ಯಾಕ್ಟೀರಿಯಗಳು ಏಕಕೋಶೀಯ ಸೂಕ್ಷ್ಮಜೀವಿಗಳು. ಇವು ತಮ್ಮ ಜೀವಾಣು ವಿಷದಿಂದ ಪ್ರಾಣಿಗಳಲ್ಲಿ ರೋಗ ಉಂಟುಮಾಡುತ್ತವೆ. ಬ್ಯಾಕ್ಟೀರಿಯ ಸೋಂಕಿತ ಕಾಯಿಲೆಗಳು, ಸಾಂಕ್ರಾಮಿಕ ರೋಗಗಳಾಗಿದ್ದು ಒಂದರಿಂದ ಮತ್ತೊಂದು ಪ್ರಾಣಿಗೆ ಹಲವು ರೀತಿಗಳಲ್ಲಿ ಹರಡುತ್ತವೆ. ಬ್ಯಾಕ್ಟೀರಿಯಾಗಳಿಂದ ಮೆಲಕು ಹಾಕುವ ಪ್ರಾಣಿಗಳಲ್ಲಿ ಚಳಿಗಾಲದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ನಾವಿಲ್ಲಿ ಚರ್ಚಿಸುತ್ತೇವೆ.

  1. ಗಳಲೆ ರೋಗ

[ಹೆಮೊರಾಜಿಕ್ ಸೆಪ್ಟಿಸೀಮಿಯಾ, ಬಾರ್ಬೋನ್, ಸೆಪ್ಟೀಸೀಮಿಕ್ ಪಾಸ್ಚರುಲ್ಲೋಸಿಸ್]

ಗಳಲೆ ರೋಗ ಮುಖ್ಯವಾಗಿ ಹಸು ಮತ್ತು ಎಮ್ಮೆಗಳಲ್ಲಿ ಕಂಡುಬರುವ ತೀವ್ರ ರೂಪದ ಕಾಯಿಲೆಯಾಗಿದೆ. ಇತರೆ ಮೆಲಕು ಹಾಕುವ ಪ್ರಾಣಿಗಳಲ್ಲೂ ಈ ಕಾಯಿಲೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳಬಹುದು. ಸೋಂಕಿತ ಪ್ರಾಣಿಗಳಲ್ಲಿ ಹಠಾತನೆ ಹೆಚ್ಚಿನ ಜ್ವರ ಬರುವುದು, ಉಸಿರಾಡಲು ಕಷ್ಟ ಆಗುವುದು, ಅತಿಯಾದ ಜೊಲ್ಲು ಸುರಿಸುವಿಕೆ, ಚರ್ಮದ ಕೆಳ ಭಾಗದಲ್ಲಿ ಬಿಸಿಯಾದ ನೋವುಳ್ಳ ಊತ ಬರುವುದು ಹಾಗೂ ಸಬ್‍ಮ್ಯುಕೋಸ ಪದರದಲ್ಲಿ ರಕ್ತಸ್ರಾವ ಆಗುವುದು ಈ ರೋಗದ ಗುಣಲಕ್ಷಣಗಳು.

ರೋಗ ಕಾರಕ:

 ಗಳಲೆ ರೋಗ ಪಾಸ್ಚರುಲ್ಲಾ ಎಂಬ ಗ್ರಾಂ ನೆಗಟೀವ್ ಬ್ಯಾಕ್ಟೀರಿಯ ಉಂಟುಮಾಡುತ್ತದೆ. ಈ ಗಳಲೆ ರೋಗ ಜನಕ ಬ್ಯಾಕ್ಟೀರಿಯಾ ಪಾಸ್ಚರುಲ್ಲಾ ಮಲ್ಟೋಸಿಡಾ ಬಿ.2 ಮತ್ತು ಇ.2. ಎಂಬ ಎರಡು ಸಿರೋಟೈಪ್‍ಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಉಷ್ಣ ವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಗಳಲೆ ರೋಗ ಪ್ರಮುಖವಾಗಿ ಕಂಡುಬರುವುದರಿಂದ ಭಾರತ ದೇಶದಲ್ಲಿ ಗಳಲೆ ರೋಗ ಹರಡುವಿಕೆ ಹೆಚ್ಚಾಗಿರುತ್ತದೆ. ಮಳೆ ಮತ್ತು ಚಳಿಗಾಲದಲ್ಲಿ ಗಳಲೆ ರೋಗ ಏಕಾಏಕಿ ಹರಡುವುದು ಸಾಮಾನ್ಯ.

ರೋಗ ಹರಡುವಿಕೆ:

ರೋಗಗ್ರಸ್ಥ ಪ್ರಾಣಿಗಳ ನೇರ ಸಂಪರ್ಕ ಹಾಗೂ ಪರೋಕ್ಷ ಸಂಪರ್ಕದಿಂದ ಗಳಲೆ ರೋಗ ಹರಡುತ್ತದೆ. ಚಳಿಗಾಲದಲ್ಲಿ, ಜಾನುವಾರುಗಳು ಕಿಕ್ಕಿರುದು ಹತ್ತಿರ ನಿಲ್ಲುವುದರಿಂದ ಹಾಗೂ ಅವುಗಳು ವಾಸಿಸುವ ಪ್ರದೇಶ ವದ್ದೆ ಇರುವುದರಿಂದ ಗಳಲೆ ರೋಗ ವೇಗವಾಗಿ ಹರಡಲು ಸಹಾಯವಾಗುತ್ತದೆ.

ಪಾಸ್ಚರುಲ್ಲಾ ಮಲ್ಟೊಸಿಡಾ ಬ್ಯಾಕ್ಟೀರಿಯ ಗಲಗ್ರಂಥಿ (ಣoಟಿsiಟ) ಹಾಗೂ ಮೂಗು ಗಂಟಲ್ಕುಳಿ ತಮ್ಮ ನೈಸರ್ಗಿಕ ಆವಾಸಸ್ಥಾನವನ್ನಾಗಿ ಮಾಡಿಕೊಂಡಿರುತ್ತವೆ. ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿ ಯಾವುದೇ ಕಾರಣದಿಂದ ಕಡಿಮೆಯಾದಾಗ, ಅಂಗಾಂಶಗಳ ಮೇಲೆ ಆಕ್ರಮಣ ಮಾಡುತ್ತವೆ.

ವೈದ್ಯಕೀಯ ಚಿಹ್ನೆಗಳು:

 ತೀವ್ರ ಅಥವಾ ಉಗ್ರ ರೂಪ ಗಳಲೆ ರೋಗದಿಂದಾಗಿ ಬಹುಪಾಲು ಸೋಂಕಿತ ಪ್ರಾಣಿಗಳು 6 ರಿಂದ 24 ಗಂಟೆಗಳ ಒಳಗೆ ಸಾವನ್ನಪ್ಪುತ್ತವೆ. ಮೊದಲಿಗೆ ಮಂಕಾಗಿರುವುದು, ನಡೆಯಲು ನಿರಾಕರಿಸುವುದು ಮತ್ತು ಅತೀತ ಜ್ವರ, ತದನಂತರ ಜೊಲ್ಲು ಸುರಿಸುವಿಕೆ ಹಾಗೂ ಮೂಗಿನಲ್ಲಿ ಗೊಣ್ಣೆ ಸೋರುವುದು ಕಂಡುಬರುತ್ತದೆ.

ಮರಣೋತ್ತರ ಪರೀಕ್ಷೆ:

ಮರಣೋತ್ತರ ಪರೀಕ್ಷೆಯಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಬಹುದು.

ತಲೆ, ಕತ್ತು ಹಾಗೂ ಎದೆ ಭಾಗದಲ್ಲಿ ನೀರೂತ

ಕೆಳಲೋಲ್ಪರೆಯಲ್ಲಿ ಚುಕ್ಕೆ-ರಕ್ತಸ್ರಾವ

ಎದೆಗೂಡು ಹಾಗೂ ಉದರ ಕುಹರದಲ್ಲಿ ರಕ್ತ ಮಿಶ್ರಿತ ದ್ರವ್ಯ

ದೇಹದ ವಿವಿಧ ಒಳಅಂಗಾಂಗಳಲ್ಲಿ ಊತ ಬಂದು ರಕ್ತಸ್ರಾವ.

ಚಿಕಿತ್ಸೆ:

* ಕಾಯಿಲೆಯ ಗುಣಲಕ್ಷಣಗಳು ಕಾಣಿಸಿದಾಕ್ಷಣ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಿ ಕೂಡಲೇ ಸೂಕ್ತ ಚಿಕಿತ್ಸೆ ಕೊಡಿಸುವುದು.

* ಸಲ್ಫೋನಮೈಡ್

* ಪೆನ್ಸಿಲಿನ್

* ಟೆಟ್ರಾಸೈಕ್ಲಿನ್

ತಡೆಗಟ್ಟುವಿಕೆ:

ಆರೋಗ್ಯವಂತ ಪ್ರಾಣಿಗಳಿಗೆ ಲಸಿಕೆ ಮಾಡುವುದರಿಂದ ಗಳಲೆ ರೋಗ ತಡೆಗಟ್ಟಬಹುದು. ಇದಕ್ಕಾಗಿ ಉತ್ಪಾದಿಸಿದ ಲಸಿಕೆಗಳೆಂದರೆ,

  • ಕಿಲ್ಲಡ್ ವ್ಯಾಕ್ಸಿನ್
  • ಆಲಂ ಪ್ರಿಸಿಪಿಟೇಟೆಡ್ ವ್ಯಾಕ್ಸಿನ್
  • ಅಲುಮಿನಿಯಂ ಹೈಡ್ರಾಕ್ಸೈಡ್ ಜೆಲ್ ವ್ಯಾಕ್ಸಿನ್
  • ಆಯಿಲ್ ಅಡ್ಜುವಂಟ್ ವ್ಯಾಕ್ಸಿನ್.

ಲಸಿಕೆಯನ್ನು 3 ವರ್ಷದ ಜಾನುವಾರು ಹಾಗೂ ಅದಕ್ಕೂ ಮೇಲ್ಪಟ್ಟವಲ್ಲಿ ಲಸಿಕೆ ಮಾಡಬೇಕು.

ಆರಂಭದಲ್ಲಿ 2 ಡೋಸ್ 1-3 ತಿಂಗಳ ಅಂತರದಲ್ಲಿ ಲಸಿಕೆ ಹಾಕಿ ನಂತರ ವರ್ಷಕ್ಕೋಮ್ಮೆ ಲಸಿಕೆ ಹಾಕಬೇಕು.

 

 ದನಗಳ ಸೋಂಕುಕಾರಕ ಕೆರಟೊ ಕಂಜಂಕ್ಟಿವೈಟಿಸ್/ ಪಿಂಕ್ ಐ.

ಇದು ಜಾನುವಾರುಗಳ ಕಣ್ಣುಗಳಿಗೆ ಹಾನಿ ಮಾಡುವ, ಅಂದರೆ ಕಾರ್ನಿಯಾ ಹಾಗೂ ಕಂಜಂಕ್ಟೈವಾ ಉರಿಯೂತ ಮತ್ತು ಕಾರ್ನಿಯಾದಲ್ಲಿ ಅಲ್ಸರ್ ಉಂಟುಮಾಡುವ ಸಾಂಕ್ರಾಮಿಕ ರೋಗ. ಪಿಂಕ್ ಐ ಬೇರೆ ಕಾಲಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಚಳಿಗಾಲದಲ್ಲಿ ಜಾನುವಾರುಗಳು ಬೆಚ್ಚಗಿರಲು ಒಂದಕ್ಕೊಂದು ತುಂಬಾ ಹತ್ತಿರ ಕೂಡಿಕೊಳ್ಳುತ್ತವೆ

ರೋಗಕಾರಕ:

ಬ್ಯಾಕ್ಟೀರಿಯಂ ಮೊರಾಕ್ಸೆಲ್ಲಾ ಬೋವಿಸ್

ರೋಗ ಹರಡುವಿಕೆ:

ರೋಗಗ್ರಸ್ಥ ಪ್ರಾಣಿಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದಿಂದಾಗಿ ರೋಗ ಹರಡುತ್ತದೆ. ರೋಗ ಗುಣವಾದರೂ ಕಾಯಿಲೆಗೀಡಾದ ಪ್ರಾಣಿಗಳು ದೀರ್ಘಕಾಲದ ವರೆಗೆ ಬ್ಯಾಕ್ಟೀರಿಯ ಅನ್ನು ತಮ್ಮ ಮೂಗಿನ ಸ್ರವಣದಲ್ಲಿ ಹೊರಹಾಕುತ್ತಿರುತ್ತವೆ.

ರೋಗ ಹರಡಲು ಸಹಾಯಕವಾದ ಅಂಶಗಳು-

  • ಜಾನುವಾರುಗಳು ಗುಂಪಲ್ಲಿ ತುಂಬಾ ಹತ್ತಿರ ಇರುವುದು ಹಾಗೂ ಒಟ್ಟಿಗೆ ಮೇಯುವುದು.
  • ಯು.ವಿ. ಕಿರಣಗಳು
  • ಕಣ್ಣಿನಲ್ಲಿ ನವ್ವೆ (ಮೇವಿನಿಂದಾಗಿ)
  • ಇತರೆ ವೈರಾಣುವಿನ ಸೋಂಕು

ಚಳಿಗಾಲದ ಪಿಂಕ್ ಐ, ದನಗಳ ಸೋಂಕುಕಾರಕ ಐ.ಬಿ.ಆರ್ ವೈರಾಣು ಇಂದ ಬರುವುದು ಎಂದು ತಿಳಿಯುವ ಸಾಧ್ಯತೆ ಇದೆ. ದನಗಳ ಸೋಂಕುಕಾರಕ ಐ.ಬಿ.ಆರ್ ರೋಗದಲ್ಲಿ ವಿಪರೀತ ಸೋರುವ ಕೆಂಪು ಕಣ್ಣುಗಳು ಇರುವುದೇ ಹೊರತು, ಕಾರ್ನಿಯ ಅಲ್ಸರ್‍ಗಳಲ್ಲ. ಆದರೆ ಐ.ಬಿ.ಆರ್ ವೈರಾಣು ಜಾನುವಾರುಗಳನ್ನು ಪಿಂಕ್ ಐ ರೋಗಕ್ಕೆ ತುತ್ತುಮಾಡುವಲ್ಲಿ ಸಹಾಯಕಾರಿಯಾಗುತ್ತವೆ.

ಚಿಕಿತ್ಸೆ:

ಟೆಟ್ರಾಸೈಕ್ಲಿನ್ಸ್

ತಡೆಗಟ್ಟುವಿಕೆ:

ಸೋಂಕಿನ ಪ್ರಾಣಿಯನ್ನು ಬೇರ್ಪಡಿಸಿ ಚಿಕಿತ್ಸೆ ನೀಡುವುದು.

ಬುಡಕ ಕೊಳೆಯುವ ರೋಗ/ ಫೂಟ್ ರಾಟ್/ಗೊರೆಸು ಹುಣ್ಣು

(ಸೋರ್ ಫೂಟ್, ಫೌಲ್ ಫೂಟ್)

ಇದು ಜಾನುವಾರುಗಳ ಗೊರೆಸುಗಳ ಊತ ಹಾಗೂ ಕುಂಟುವಿಕೆಯನ್ನು ಉಂಟುಮಾಡುವ ಸೋಂಕುಕಾರಕ ರೋಗ. ಇದು ಇಡೀ ಹಿಂಡಿಗೆ ಹರಡಿ ಆರ್ಥಿಕ ನಷ್ಟ ಉಂಟು ಮಾಡುತ್ತದೆ. 

ರೋಗಕಾರಣ:

  1. ಬ್ಯಾಕ್ಟೀರಾಯ್ಡಿಸ್ ಮೆಲನಿನೋಜೆನಿಕಸ್

 

ಗೊರಸುಗಳಲ್ಲಿ ಗಾಯ, ಮೂಗೇಟು, ಆಳದ ಗಾಯ, ಅತಿಯಾದ ತುರುಚು ಗಾಯ ಇದ್ದಲ್ಲಿ ಬ್ಯಾಕ್ಟೀರಿಯ ಪಾದದ ಅಂಗಾಂಶ ಪ್ರವೇಶಿಸಿ ಸೋಂಕು ಉಂಟುಮಾಡುತ್ತದೆ. ಈ ಕಾಯಿಲೆಯು ಚೆದರಿದ ಮಾದರಿಯಲ್ಲಿ, ಅಂದರೆ ಹಿಂಡಿನ ಅಲ್ಲಲ್ಲಿ ಸಂಭವಿಸುತ್ತದೆ. ಹೆಚ್ಚಾಗಿ ಇದನ್ನು ತೇವ ಪೂರಿತ ಪ್ರದೇಶಗಳಲ್ಲಿ ಗುರುತಿಸಲಾಗುತ್ತದೆ, ಹಾಗಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲದೆ ಮೇವಿನಲ್ಲಿ Zಟಿ, Se ಹಾಗೂ ಅu ಖನಿಜಾಂಶಗಳ ಕೊರತೆ ಇದ್ದಲ್ಲಿ ಅಂತಹ ಜಾನುವಾರುಗಳು ಮತ್ತು ಕರುಗಳು ಬಹು ಸುಲಭವಾಗಿ ಈ ರೋಗಕ್ಕೆ ತುತ್ತಾಗುತ್ತಾವೆ.

ವೈದ್ಯಕೀಯ ಚಿಹ್ನೆಗಳು:

  • ಗೊರಸಿನ ಊತಕದ ಸಾವು, ಹಾಗೂ ತೀವ್ರ ನೋವು.
  • ಪಾದದ ಗಾಯದೊಳಗಿಂದ ದುರ್ನಾಥ ಬೀರುವ ಸ್ರವಿಕೆಗಳು.
  • ಕುಂಟುವಿಕೆ, ಹೆಚ್ಚಾಗಿ ಹಿಂಗಾಲುಗಳಲ್ಲಿ ಕಾಣುತ್ತದೆ.
  • ರೋಗ ಪೀಡಿತ ಕಾಲಿನ ಮೇಲೆ ಭಾರ ಊರುವುದಿಲ್ಲ.
  • ಹಸಿವಿಲ್ಲದಿರುವುದು
  • ದೇಹದ ತೂಕ ಕಡಿಮೆಯಾಗುವುದು.
  • ಜ್ವರ
  • ಹಾಲಿನ ಉತ್ಪಾದನೆ ಕಡಿಮೆಯಾಗುವುದು.

ಚಿಕಿತ್ಸೆ:

  • ಪೆನ್ಸಿಲಿನ್ಸ್
  • ಆಕ್ಸಿಟೆಟ್ರಾಸೈಕ್ಲನ್
  • ಸೆಫ್ಟಿಯೋಫರ್
  • ಪ್ರತಿಜೈವಿಕ ಲೇಪನಗಳು

ತಡೆಗಟ್ಟುವಿಕೆ:

  • ಜಾನುವಾರುಗಳನ್ನು ಒಣ ಪ್ರದೇಶದಲ್ಲಿ ಇಡಬೇಕು.
  • ಮೇವಿನಲ್ಲಿ Zಟಿ ಅವಶ್ಯಕ ಪ್ರಮಾಣದಲ್ಲಿ ಖನಿಜ ಮಿಶ್ರಣದೊಂದಿಗೆ ಕೊಡುವುದರಿಂದ ಕಾಯಿಲೆಯನ್ನು ತಡೆಯಬಹುದು.

 ಲಿಸ್ಟೀರಿಯೋಸಿಸ್/ಸುರುಳಿ ಸುತ್ತುವ ಕಾಯಿಲೆ

(ಸರ್ಕಲಿಂಗ್ ಡಿಸೀಸ್ / ಸೈಲೇಜ್ ಸಿಕ್ನೆಸ್)

ಈ ರೋಗ ಮೆಲಕು ಹಾಕುವ ಪ್ರಾಣಿಗಳಿಗೆ ಪ್ರಪಂಚದಾದ್ಯಂತ ಎಲ್ಲಿಯಾದರೂ ಸಂಭವಿಸಬಹುದು. ಇದು ಮನುಷ್ಯರಿಗೂ ಹಬ್ಬುವು ಸಾದ್ಯತೆ ಇರುವುದರಿಂದ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

 

ರೋಗ ಕಾರಣ:

ಬ್ಯಾಕ್ಟೀರಿಯ ಲಿಸ್ಟೀರಿಯಾ ಮೊನೊಸೈಟೋಜಿನಿಸ್

ನೈಸರ್ಗಿಕವಾಗಿ ಈ ಬ್ಯಾಕ್ಟೀರಿಯಾ ಮಣ್ಣು ಹಾಗೂ ಸಸ್ತನಿಗಳ ಜಠರ ಕರುಳಲುವ್ಯೂಹದಲ್ಲಿ ಇದ್ದು ತೀವ್ರ ಆಹಾರ ಮುಖೇನ ಹರಡುವ ಸೋಂಕನ್ನು ಉಂಟುಮಾಡಬಹುದು.

ರೋಗ ಹರಡುವಿಕೆ:

  • ಬ್ಯಾಕ್ಟೀರಿಯ ಇರುವ ಮಲದಿಂದ ಕಲುಷಿತಗೊಂಡ ಹುಲ್ಲುಗಾವಲುಗಳಲ್ಲಿ ಮೇಯುವುದರಿಂದ
  • ಗಾಯದ ಮೂಲಕ
  • ಉಸಿರಾಟದ
  • ಜೋಳದ ಸೈಲೇಜ್ ಮುಖಾಂತರ

ಮನುಷ್ಯರಲ್ಲಿ ಸೋಂಕಿತ ಪ್ರಾಣಿಗಳೊಂದಿಗೆ ಸಂಪರ್ಕ ಹೊಂದುವುದರ ಮೂಲಕ, ಅಥವಾ ಅವುಗಳ ಹಾಲು, ಗಿಣ್ಣು ಮತ್ತು ಮಾಂಸ ಸೀವಿಸುವುದರಿಂದ ರೋಗ ಬರುತ್ತದೆ.

ವೈದ್ಯಕೀಯ ಚಿಹ್ನೆಗಳು:

  • ಕಂದು ಹಾಕುವುದು
  • ರಕ್ತನಂಜು (seಠಿಣeಛಿeಚಿmiಚಿ)
  • ಮಿದುಳ್ಪರೆಮಿದುಳು ಹುರಿಯುರಿತ (meಟಿiಟಿgo eಟಿಛಿeಠಿhಚಿಟiis)
  • ಕೆಚ್ಚಲು ಬಾವು
  • ಹಸಿವಿಲ್ಲದಿರುವಿಕೆ
  • ಮಂಕಾಗಿರುವುದು
  • ದಿಗ್ಭ್ರಮೆ
  • ಮುಖದ ಪಾಶ್ರ್ವವಾಯು
  • ಹೆಚ್ಚಾಗಿ ಜೊಲ್ಲು ಸುರಿಸುವಿಕೆ

ಚಿಕಿತ್ಸೆ:

  • ಟೆಟ್ರಾಸೈಕ್ಲನ್ಸ್
  • ಪೆನಿಸಿಲಿನ್ಸ್ ಹೆಚ್ಚಿನ ಡೋಸ್‍ನಲ್ಲಿ
  • ಅಯಾನ್ ವಾಹಕ ದ್ರಾವಣ ಹಾಗೂ ದ್ರವ ಚಿಕಿತ್ಸೆ

 

ಕಾಫ್ ಡಿಫ್ತೀರಿಯ

ಬ್ಯಾಕ್ಟೀರಿಯ ಫ್ಯೂಜೋಬ್ಯಾಕ್ಟೀರಿಯಂ ನೆಕ್ರೋಫೋರಂ ಸಹಜವಾಗಿ ಪ್ರಾಣೀಗಳ ಜಠರ ಕರುಳಲುವ್ಯೂಹ, ಶ್ವಾಸಕೋಶ ಹಾಗೂ ಜನನಾಂಗದ ವ್ಯೂಹದ ನಿವಾಸಿಯಾಗಿರುತ್ತದೆ. ಈ ಕಾಯಿಲೆ ತೀವ್ರ ಅಥವಾ ದೀರ್ಘಕಾಲಿಕ ಸೋಂಕಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಮ್ಮು, 106ಲಿ ಈ ಜ್ವರ, ಶ್ವಾಸ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು ಹಾಗೂ ಉಸಿರಾಡುವಾಗ ಜೋರಾಗಿ ಶಬ್ಧ ಬರುವುದು ಈ ರೋಗದ ಗುಣಲಕ್ಷಣಗಳು.

ಅನಾರೋಗ್ಯಕರ ಪರಿಸ್ಥಿತಿಗಳು ಹಾಗೂ ಇತರೆ ಶ್ವಾಸಕಾಂಗದ ಸೋಂಕುಗಳೆಲ್ಲಾ ಕಾಫ್ ಡಿಫ್ತೀರಿಯ ಕಾಯಿಲೆಯ ಸಂಭವನೀಯತೆ ಹೆಚ್ಚಾಗಿರುತ್ತದೆ.

ಚಿಕಿತ್ಸೆ:

  • ಪ್ರೊಕೇನ್ ಪೆನಿಸಿಲಿನ್ಸ್
  • ಆಕ್ಸಿ ಟೆಟ್ರಾಸೈಕ್ಲನ್ಸ್

ಕಂಟೇಜಿಯಸ್ ಬೊವೈನ್ ಪ್ಲೂರೋ ನ್ಯುಮೋನಿಯ / ಲಂಗ್ ಪ್ಲೇಗ್

ಬ್ಯಾಕ್ಟೀರಿಂ ಮೈಕೋಪ್ಲಾಸ್ಮಾ ಮೈಕಾಯ್ಡಿಸ್ ನಿಂದಾಗಿ ದನ ಹಾಗೂ ಎಮ್ಮೆಗಳಲ್ಲಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಲಂಗ್ ಪ್ಲೇಗ್ ಸಾಂಕ್ರಾಮಿಕ ಕಾಯಿಲೆ ಉಂಟುಮಾಡುತ್ತದೆ. ಶ್ವಾಸಕೋಶದ ಉರಿತ ಹಾಗೂ ಶ್ವಾಸಕೋಶದ ಲೋಳೆಯ ಉರಿಯೂತ ಈ ರೋಗದ ಗುಣಲಕ್ಷಣಗಳು. ಈ ಕಾಯಿಲೆಯ ಕಾವು ಅವಧಿ 20-123 ದಿನಗಳು.

ವೈದ್ಯಕೀಯ ಚಿಹ್ನೆಗಳು:

  • 107 ಲಿ ಈ ಜ್ವರ
  • ಹಸಿವಿಲ್ಲದಿರುವುದು
  • ನೋವಿನಿಂದ ಕೂಡಿದ ಕಷ್ಟಕರ ಉಸಿರಾಟ
  • ಮೈಚಾಚಿಕೊಂಡಿರುವುದು.
  • 1 ರಿಂದ 3 ವಾರದಲ್ಲಿ ಮರಣಿಸಬಹುದು

ಚಿಕಿತ್ಸೆ:

ಟೈಲೋಸಿನ್

ಡಾನೋಫ್ಲಾಕ್ಸಸಿನ್

ತಡೆಗಟ್ಟುವಿಕೆ:

ಸೋಂಕಿತ ಪ್ರಾಣಿಗಳನ್ನು ಬೇರ್ಪಡಿಸುವುದು.

ಗಳಲೆ ರೋಗ (ಗುಂಡಿಗೆಯ ಮೇಲೆ ಚುಕ್ಕೆ-ರಕ್ತಸ್ರಾವ)
ಹಸುವಿನಲ್ಲಿ ಗುಲಾಬಿ ಬಣ್ಣದ ಕಣ್ಣು (ಪಿಂಕ್ ಐ)
ಗೊರಸು ಕೊಳೆತ
ಲಿಸ್ಟೀರಿಯೋಸಿಸ್ (ನಾಲಿಗೆಯ ಸಡಿಲತೆ)
ಕರುಗಳಲ್ಲಿ ಡಿಫ್ತೀರಿಯ
ದನಗಳಲ್ಲಿ ಶ್ವಾಸಕೋಶದ ಪ್ಲೇಗ್
Published On: 04 October 2018, 03:29 AM English Summary: Bacterial disorders commonly seen in wintering animals

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.