1. ಪಶುಸಂಗೋಪನೆ

ಕುರಿ ಸಾಕಾಣಿಕೆ ಮಾಡಲು ರೈತರಿಂದ ಅರ್ಜಿ ಆಹ್ವಾನ

Ramlinganna
Ramlinganna

ಕಲಬುರಗಿ ನಗರದ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಮಾರ್ಚ್ 15 ರಿಂದ 24ರ ವರೆಗೆ 10 ದಿನಗಳ ಕಾಲ ಉಚಿತ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

ಅರ್ಜಿ ಸಲ್ಲಿಸುವ ರೈತರು ಬಿಪಿಎಲ್ ಕುಟುಂಬದ ಸದಸ್ಯರಾಗಿರಬೇಕು. ಬಿ.ಪಿ.ಎಲ್ ಕುಟುಂಬದ ನಿರುದ್ಯೋಗಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿ ಸಮಯದಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ತರಬೇತಿ ಬಯಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.

ಅರ್ಜಿಯನ್ನು ನಿರ್ದೇಶಕರು, ಎಸ್.ಬಿ.ಐ ಆರ್.ಸೆ.ಟಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ರಾಮ ಮಂದಿರ ರಸ್ತೆ, ಆರ್ಯನ್ ಸ್ಕೂಲ್ ಎದುರುಗಡೆ, ಮಹಾದೇವಪ್ಪ ರಾಂಪೂರೆ ಬಡಾವಣೆ, ಜಿ.ಡಿ.ಎ. ಲೇಔಟ್ ದರಿಯಾಪುರ ಕಲಬುರಗಿ-585102 ಇಲ್ಲಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರಗಳು, ಆಧಾರ ಕಾರ್ಡ್ ಪ್ರತಿ, ಬಿ.ಪಿ.ಎಲ್ ರೇಷನ ಕಾರ್ಡ್, ಪಾಸಬುಕ್ ಪ್ರತಿಗಳೊಂದಿಗೆ ಮಾರ್ಚ್ 15 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ 9243602888 ಹಾಗೂ 9886781239 ಗೆ ಸಂಪರ್ಕಿಸಬಹುದು.

ಕಕ್ಕೇರಾದಲ್ಲಿ ತಾಡಪತ್ರಿ ಹಾಗೂ ಪಿವಿಸಿ ಪೈಪ್ ವಿತರಿಸಲು ಅರ್ಜಿ ಆಹ್ವಾನ

ಯಾದಗಿರಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 37 ಗ್ರಾಮಗಳ ತರಿಗೆ ತಾಡಪತ್ರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ರೈತರು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಜಾತಿಪ್ರಮಾಣಪತ್ರ, ಪಹಣಿ, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಇತರ ಅಗತ್ಯ ದಾಖಲಾತಿಗಳನ್ನು ಇದೇ ತಿಂಗಳ ಮಾರ್ಚ್ 15 ರೊಳಗೆ ಸಲ್ಲಿಸಲು ಕೋರಲಾಗಿದೆ.

;

2.5 ಇಂಚಿನ ಪಿವಿಸಿ ಪೈಪಗಳು ಸಹಾಯಧನದಡಿಯಲ್ಲಿ ಲಭ್ಯವಿದ್ದು, ಆಸಕ್ತ ರೈತರು ಆಧಾರ್ ಕಾರ್ಡ್ ಹಾಗೂ ಪಹಣಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರದ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಸ್ಥಳೀಯ ಕೇಂದ್ರದ ಅಧಿಕಾರಿ ಪರಶುನಾಥ ತಿಳಿಸಿದ್ದಾರೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.