1. ಪಶುಸಂಗೋಪನೆ

ಆಗಸ್ಟ್ 6 ರಿಂದ 15ರವರೆಗೆ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನ

Ramlinganna
Ramlinganna

ಕೃಷಿಯಲ್ಲಿ ಹೈನುಗಾರಿಕೆಯ ಪಾತ್ರ ವಿಶಿಷ್ಟವಾದುದು. ಸನಾತನ ಧರ್ಮದ ಕಾಲದಿಂದಲೂ ಹೈನುಗಾರಿಕೆ ರೈತರ ಪೋಷಣೆ ಮಾಡುತ್ತ ಕೈ ಹಿಡಿದು ನಡೆಸುತ್ತಾ ಸಾಗಿದೆ. ಸಮಯ ಕಳೆದಂತೆ, ಹೈನೋದ್ಯಮ ಹಲವಾರು ಸಮುದಾಯ, ಪ್ರದೇಶ ಮತ್ತು ದೇಶಗಳ ಆರ್ಥಿಕತೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತ ಬಂದಿದೆ. ಇತ್ತೀಚೆಗೆ ಹೈನುಗಾರಿಕೆಯಲ್ಲಿ ಯುವಕರ ಆಸಕ್ತಿಯೂ ಹೆಚ್ಚಾಗುತ್ತಿದೆ.ಕೆಲವರು ತಮ್ಮ ನೌಕರಗೆ ಗುಡ್ ಬೈ ಹೇಳಿ ಹೈನುಗಾರಿಕೆಯಲ್ಲಿ ತೊಡಗಿ ಯಶಸ್ಸು ಗಳಿಸುತ್ತಿರುವ ಸುದ್ದಿಗಳನ್ನು ನಾವು ಓದುತ್ತಿದ್ದೇವೆ.ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಹತ್ತು ದಿನಗಳ ಕಾಲ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ

ಹೌದು ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ (ಕಿಟಸರ್ಡ್) ಸಂಸ್ಥೆಯಲ್ಲಿ ಇದೇ ಆಗಸ್ಟ್ 6 ರಿಂದ 15 ವರೆಗೆ  ಹತ್ತು ದಿನಗಳ ಕಾಲ ಉಚಿತವಾಗಿ  ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕಾ ತರಬೇತಿಯನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಎಸ್.ಬಿ.ಐ. ಆರ್‌ಸೆಟಿ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

  ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ 18 ರಿಂದ 45 ವರ್ಷದೊಳಗಿನ  ಬಿ.ಪಿ.ಎಲ್. ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿ ಸಮಯದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ  ಒದಗಿಸಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತರಬೇತಿ ಸಂಸ್ಥೆಯಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬಿ.ಪಿ.ಎಲ್ ಪಡಿತರ ಚೀಟಿ, ಬ್ಯಾಂಕ್ ಪಾಸ್‌ಬುಕ್ ಜಿರಾಕ್ಸ್ ಪ್ರತಿ ಹಾಗೂ ಇತ್ತೀಚಿನ 5 ಇತ್ತೀಚಿನ ಭಾವಚಿತ್ರ ದಾಖಲಾತಿಗಳೊಂದಿಗೆ 2021ರ ಆಗಸ್ಟ್ 5 ರೊಳಗಾಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತರಬೇತಿ ಸಂಸ್ಥೆ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.

ಅಭ್ಯರ್ಥಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9243602888, 9886781239ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

;

ರಾಜ್ಯದಲ್ಲಿ ಇತ್ತೀಚೆಗೆ ಯುವಕರು  ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ಸಂಗತಿ. ಹೈನುಗಾರಿಕೆಯಲ್ಲಿ ತರಬೇತಿಯಲ್ಲಿ ನೀಡುವ ಸಲಹೆಗಳನ್ನು ಸದುಪಯೋಗ ಪಡೆದುಕೊಂಡು ಯುವಕರು ಕೊನೆಯ ದಿನದವರೆಗೆ ಕಾಯದೆ ಬೇಗನೆ ಅರ್ಜಿ ಸಲ್ಲಿಸಿ ತರಬೇತಿಯ ಲಾಭ ಪಡೆದುಕೊಳ್ಳಬಹುದು.

ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಗ್ರಾಮಸ್ಥರು ತಮ್ಮೂರಿನಲ್ಲಿ ಹೈನುಗಾರಿಕೆ ಮಾಡಲು ಇಚ್ಚೆಯುಳ್ಳುವರಿಗೆ ಈ ತರಬೇತಿಯು ಅನುಕೂಲವಾಗಲಿದೆ. ಹೈನುಗಾರಿಕೆ ಮಾಡಲು ಆಸಕ್ತಿಯಿರುತ್ತದೆ. ಆದರೆ ತರಬೇತಿಯ ಕೊರತೆಯಿಂದಾಗಿ ರೈತರು ಹೈನುಗಾರಿಕೆ ಮಾಡಲು ಹಿಂಜರಿಯುತ್ತಾರೆ. ಅಂತಹ ರೈತರಿಗೆ ಈ 10 ದಿನಗಳ ಕಾಲ ನೀಡುವ ಉಚಿತ ತರಬೇತಿ ಅನುಕೂಲವಾಗಲಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.