1. ಪಶುಸಂಗೋಪನೆ

ಹಸು, ಎಮ್ಮೆ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ಹೈನುಗಾರಿಕೆ ಮಾಡಲಿಚ್ಚಿಸುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಹಸು, ಎಮ್ಮೆ ಖರೀದಿಗೆ ಸಹಾಯಧನ ನೀಡಲು ಯಾದಗಿರಿ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಕೂಲಿಕಾರ್ಮಿಕರಿಗೆ ಹಾಗೂ ಸಣ್ಣ ರೈತರಿಗೆ ಹಸು, ಎಮ್ಮೆ ಖರೀದಿಸಲು ಸರ್ಕಾರದ ವತಿಯಿಂದ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

2021-22ನೇ ಸಾಲಿನ ರಾಷ್ಟ್ರೀಯ ಕೃಷಿ ಕೂಲಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ ಆಸಕ್ತ ಸಣ್ಣ ಮತ್ತು ಅತೀ ಸಣ್ಣ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಧಾರಿತ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿಯಲ್ಲಿ  ಅರ್ಜಿ ಕರೆಯಲಾಗಿದೆ.  ಒಂದು ಮಿಶ್ರ ತಳಿ ಹಾಲು ಕರೆಯುವ ಹಸು/ಒಂದು ಸುಧಾರಿತ ಎಮ್ಮೆ ವಿತರಿಸಲಾಗುವುದು. ಘಟಕದ ವೆಚ್ಚ 62 ಸಾವಿರ ರೂಪಾಯಿ ಆಗಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ 20,665 ರೂಪಾಯಿಗಳು ಮತ್ತು ಸಾಮಾನ್ಯ ಱಫಲಾನುಭವಿಗಳಿಗೆ 15500 ರೂಪಾಯಿಗಳ ಸಹಾಯಧನ ಒದಗಿಸಲಾಗುವುದು.

ಸಹಾಯಧನ ಹೊರತುಪಡಿಸುವಂತೆ ಉಳಿದ ಮೊತ್ತವನ್ನು ಫಲಾನುಭವಿಗಳ ವಂತಿಗೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕ್ ನಿಂದ ಪಡೆಯಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಯಾದಗಿರಿ ದೂರವಾಣಿ ಸಂಖ್ಯೆ 9448651212, ಶಹಾಪೂರ ದೂರವಾಣಿ ಸಂಖ್ಯೆ 9448651169, ಸುರಪುರ ದೂರವಾಣಿ ಸಂಖ್ಯೆ 9441198671 ರವರನ್ನು ಸಂಪರ್ಕಿಸಬಹುದು.

ಅರ್ಜಿಯನ್ನು ಭರ್ತಿ ಮಾಡಿ ಅಕ್ಟೋಬರ್ 11 ಸಾಯಂಕಾಲ 5 ಗಂಟೆಯೊಳಗೆ ಸಂಬಂಧಿಸಿದ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಯಾದಗಿರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ರೈತರು ತಮ್ಮ ಹತ್ತಿರದ ಪಶು ಇಲಾಖೆಗೆ ಅಗತ್ಯ ದಾಖಲೆಗಳನ್ನು ಅರ್ಜಿಯನ್ನು ಕೊನೆಯ ದಿನಾಂಕದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು

ಪಶುಪಾಲಕರ 8277 100 200:

ರಾಜ್ಯದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ದೂರವಾಣಿ ಸಂಖ್ಯೆ 8277 100 200 (ಉಚಿತ) ಕ್ಕೆ 24*7 ರವರೆಗೆ ಕರೆ ಮಾಡಿ, ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ಸಹಾಯವಾಣಿಯ ಮೂಲಕ ಲಭ್ಯವಿರುವ ಮಾಹಿತಿಗಳು:

ಇಲಾಖೆಯ ವತಿಯಿಂದ ಲಭ್ಯವಿರುವ ತಾಂತ್ರಿಕ ಸೇವೆಗಳ ಬಗ್ಗೆ ಮಾಹಿತಿ.

ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ.

ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರ.

ದೇಶಿ ಹಾಗೂ ವಿದೇಶಿ ಜಾನವಾರು ತಳಿಗಳ ಬಗ್ಗೆ ಮಾಹಿತಿ.

ಜಾನುವಾರುಗಳಲ್ಲಿ ನಿಯಮಿತವಾಗಿ ನೀಡಬೇಕಾಗಿರುವ ಲಸಿಕೆಗಳ ಕುರಿತು ವಿವರಣೆ.

ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ಮಾಹಿತಿ.

ಮಿಶ‍್ರತಳಿ ಹಸು, ಕುರಿ ಮತ್ತು ಮೇಕೆ, ಹಂದಿಗಳ ಅಂದಾಜು ಬೆಲೆ ಹಾಗೂ ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಸ್ಥಳಗಳ ವಿವರ.

ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ.

Published On: 26 September 2021, 09:39 PM English Summary: Application invited for subsidy to purchase of cow and buffalo

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.