ಕುರಿ, ಮೇಕೆ,ಹಸು, ಕೋಳಿ ಸಾಕಾಣಿಕೆ ಮಾಡಲು ಬಯಸುವ ರೈತರಿಗೆ ಇಲ್ಲಿದೆ ಸಂತಸದ ಸುದ್ದಿ. ಈಗ ನೀವು ಕುರಿ, ಕೋಳಿ ಸಾಕಾಣಿಕೆಗೆ ಸಾಲ ಪಡೆಯಲು ಬ್ಯಾಂಕಿಗೆ ಅಲೆದಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ
ಆಡು ಸಾಕಾಣಿಕೆ ಇಂದು ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಆಡು ಸಾಕಾಣಿಕೆಯೂ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಗಳಿಕೆ ಇರುವ ಕಾರಣಕ್ಕೆ ಜನರು ಕೃಷಿಯ ಜೊತೆಗೆ ಆಡು ಸಾಕಾಣಿಕೆ ಮಾಡುತ್ತಿದ್ದಾರೆ. ನಮ್ಮಲ್ಲಿ ಜಮೀನಿಲ್ಲ. ನೀರಿಲ್ಲ. ಮತ್ತೆ ಹೆಂಗೆ ಕೃಷಿ ಮಾಡೋದು. ಜೀವನ ನಡೆಸೋದು ಹೆಂಗೆ? ಎಂಬ ಚಿಂತೆಯಲ್ಲಿದ್ದೀರಾ, ಜಮೀನಿಲ್ಲದಿದ್ದರೆ ಏನಂತೆ.... ಯಾವುದಾದರೂ ಉಪಕಸುಬು ಮಾಡಬಾರದೆ? ಹಾಗಾದರೆ ಯಾವ ಉಪಕಸಬು ಮಾಡಲಿ ಎಂಬ ವಿಚಾರದಲ್ಲಿದ್ದೀರಾ. ಆಡು ಸಾಕಾಣಿಕೆ ಮಾಡುವ ಯೋಜನೆ ಇದ್ದರೆ ಆನ್ ಲೈನ್ ನಲ್ಲಿ ಅರ್ಜಿ ಹಾಕಿ ಸಾಲಸೌಲಭ್ಯ ಪಡೆದು ಕುರಿ ಸಾಕಾಣಿಕೆ ಮಾಡಿ ಆರ್ಥಿಕ ಆದಾಯ ಗಳಿಸಿಕೊಳ್ಳಿ.
ಪಶುಸಂಗೋಪನೆಯ ಯೋಜನೆಯಡಿಯಲ್ಲಿ ಹಸುರ, ಕುರಿ, ಮೇಕೆ, ಕೋಳಿ ಸಾಕಾಣಿಕೆಗೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುವುದು. ಶೇ. 3 ರ ಬಡ್ಡಿಯಲ್ಲಿ 40 ಸಾವಿರ ರೂಪಾಯಯವರಿಗೆ ಸಾಲ ನೀಡಲಾಗುವುದು ಇದಕ್ಕೆ ಶೇ. 50 ರಷ್ಟು ಸಹಾಯಧನ ಸಿಗಲಿದೆ.
ಇದನ್ನೂ ಓದಿ.....ಹೈನುಗಾರಿಕೆ-ಎರೆಹುಳು ಗೊಬ್ಬರ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ
ಹೌದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಇತ್ತೀಚೆಗೆ ಅಲ್ಪಸಂಖ್ಯಾತ ಮಹಿಳೆಯರಿಗೆ ಸಾಲ ನೀಡಲು ಈ ಯೋಜನೆ ಆರಂಭಿಸಿದೆ. ಈಗ ನೀವು ಬ್ಯಾಂಕಿಗೆ ಹೋಗಿ ಅಧಿಕಾರಿಗಳ ಮುಂದೆ ನಿಲ್ಲುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಸಾಲಕ್ಕಾಗಿ ಅರ್ಜಿ ಹಾಕಬಹುದು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ kmdc.kar.nic.in ಅಥವಾ kmdc.kar.nic.in/loan/login.aspx ಸರ್ಕಾರದ ವೆಬ್ ಸೈಟ್ನಲ್ಲಿ ಡಿಸೆಂಬರ್ 10 ರೊಳಗೆ ಅರ್ಜಿ ಸಲ್ಲಿಸಬಹುದು.
ಬಿಪಿಎಲ್ ಕುಟುಂಬದವರಾಗಿರಬೇಕು. 25 ರಿಂದ 50 ವಯೋಮಾನದವರಾಗಿರಬೇಕು. ರಾಜ್ಯದ ಕಾಯಂ ನಿವಾಸಿಯಾಗಿರಬೇಕು. ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಹೊಂದಿರಬೇಕು.
ಇದನ್ನೂ ಓದಿ...ಪಶುಪಾಲಕರಿಗೆ ಸಂತಸದ ಸುದ್ದಿ: ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡಬೇಕೇ ಈ ಉಚಿತ ಸಹಾಯವಾಣಿಗೆ ಕರೆ ಮಾಡಿ
Share your comments