1. ಅಗ್ರಿಪಿಡಿಯಾ

ಪತ್ತೆಯಾಯ್ತು ಆಲೂಗಡ್ಡೆ ಮಾದರಿಯ ವಿಶೇಷ ತರಕಾರಿ..ಅಸಲಿಗೆ ಏನಿದು..?

KJ Staff
KJ Staff

ಆಲೂಗಡ್ಡೆ ಅಂದ್ರೆ ಸಹಜವಾಗಿ ದುಂಡು ದುಂಡಾಗಿ ಮೀಡಿಯಂ ಸೈಜ್‌ನಲ್ಲಿರುತ್ತವೆ. ಆದರೆ ಇ ದಂಪತಿಯ ಮನೆಯಲ್ಲಿ ವಿಶೇಷವಾದ ಆಲೂ ಕಭಂದಿದ್ದಿ ಹೆಂಡತಿ ಉ ಅಚ್ಚರಿಗೊಂಡಿದ್ದಾರೆ. ಹೌದು ನ್ಯೂಜಿಲೆಂಡ್‌ನ ದಂಪತಿಗಳು ಅತಿದೊಡ್ಡ ಆಲೂಗಡ್ಡೆಯನ್ನು ಕಂಡು ಬೆರಗಾಗಿದ್ದಾರೆ.. ಕಾಲಿನ್ ಮತ್ತು ಡೊನ್ನಾ ಕ್ರೇಗ್-ಬ್ರೌನ್ ತಮ್ಮ ಮನೆಯ ಹಿಂದೆ ದೈತ್ಯ ಆಲೂಗಡ್ಡೆಯನ್ನುತ್ತೆ ಮಾಡಿದ ದಂಪತಿ.

ಈ ದಂಪತಿ ಇಬ್ಬರು ದಿನನಿತ್ಯ ಗಾರ್ಡನ್‌ನಲ್ಲಿ ಕೆಲಸ ಮಾಡುತ್ತಾರೆ. ಅದೇ ರೀರಿ ಡೊನ್ನಾ ಕೈಯಲ್ಲಿ ಗುದ್ದಲಿಯನ್ನು ಹಿಡಿದು ನೆಲವನ್ನ ಅಗೆಯುತ್ತಿದ್ದರು. ಆಗ ನೆಲಕ್ಕೆ ಗುದ್ದಲಿಯನ್ನು ಹಾಕಿದಾಗ ಜೋರಾದ ಶಬ್ದವೊಂದು ಕೇಳಿದೆ.. ಆಗ ಕೆಲ ಸಮಯ ಗಲಿಬಿಲಿಗೊಂಡ ಡೊನ್ನಾ ಹೆಂಡತಿಯ ಸಹಾಯದಿಂದ ಮತ್ತೆ ಅಗೆಯಲು ಶುರು ಮಾಡಿದನು.. ಹೀಗೆ ಕೆಲ ಹೊತ್ತು ನೆಲವನ್ನು ಅಗೆಯುತ್ತಿದ್ದಂತೆ ಮುಂದೆ ಅವನಿಗೆ ಅಚ್ಚರಿಯೊಂದು ಎದುರಾಗಿತ್ತು..!

ಇದನ್ನೂ ಓದಿ: LPG Price hike: 5 ತಿಂಗಳ ಬಳಿಕ ಮತ್ತೇ ಗ್ರಾಹಕರಿಗೆ ಶಾಕ್‌..ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ..!

ನೆಲವನ್ನು ಅಗೆಯುವ ವೇಳೆ ಡೊನ್ನಾಗೆ ಸುಮಾರು 17 ಪೌಂಡ್ ತೂಕದ ಆಲೂಗಡ್ಡೆ ದೊರಕಿದೆ..ಅದನ್ನು ಚಿಕ್ಕ ತುಂಡನ್ನಾಗಿ ಸ್ವಲ್ಪ ಕತ್ತರಿಸಿ ತಿಂದಾಗ ಆಲೂಗಡ್ಡೆಯಯ ರುಚಿಯನ್ನು ನೀಡಿದೆ. ಹಾಗಾಗಿ ಇದು ಆಲೂಗಡ್ಡೆ ಎಂದು ಡೊನ್ನಾ ತಿಳಿದುಕೊಂಡಿದ್ದಾನೆ. ಅವರ ಆವಿಷ್ಕಾರವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಸೇರಿಸಲು ಪರಿಗಣಿಸಬಹುದು ಎಂದು ಅವರ ಸ್ನೇಹಿತರು ಮತ್ತು ಕುಟುಂಬದವರು ಸಲಹೆ ನೀಡಿದರು. ನಂತರ ದಂಪತಿಗಳು ಅಲೂಗಡ್ಡೆ ಹೋಲುವ ಈ ತರಕಾರಿಗೆ ವಿಶ್ವದ ಅತ್ಯಂತ ಭಾರವಾದ ಆಲೂಗಡ್ಡೆ ಎಂದು ಪ್ರಚಾರ ಮಾಡಿದ್ದಾರೆ. ಇನ್ನು ಪ್ರಪಂಚದಾದ್ಯಂತ ಜನರು ದೊಡ್ಡ ಗಾತ್ರದ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಕೆಲವರು ತಮ್ಮ ಕೆಲಸಕ್ಕಾಗಿ ಬಹುಮಾನ ಮತ್ತು ಮನ್ನಣೆಯನ್ನು ಸಹ ಗೆದ್ದಿದ್ದಾರೆ. Guinness world record ಪ್ರಕಾರ , ಇತ್ತೀಚೆಗೆ, ಇಸ್ರೇಲ್ ದೇ0ಶದ ರೈತರೊಬ್ಬರು ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಬೆಳೆದಿದ್ದಾರೆ.

ಇದನ್ನೂ ಓದಿ:kisan samman: ರೈತರ ಖಾತೆಗೆ ಈ ದಿನಾಂಕದಂದು 11ನೇ ಕಂತಿನ ಹಣ ಬರೋದು ಫಿಕ್ಸ್

ಅಸಲಿಗೆ ಇದು ಏನು..?
ಕಾಲಿನ್ ಕ್ರೇಗ್-ಬ್ರೌನ್ 62 ವರ್ಷ ವಯಸ್ಸಿನ ತೋಟಗಾರಿಕಾ ವಿಜ್ಞಾನಿ. ದಂಪತಿಗಳು ಹಿಂದೆಂದೂ ಆಲೂಗಡ್ಡೆಯನ್ನು ಬೆಳೆದಿರಲಿಲ್ಲವಾದ್ದರಿಂದ ಡೌಗ್ ಸ್ವಯಂ-ಬೀಜವನ್ನು ಹೊಂದಿರಬೇಕಾಗಿತ್ತು. ಇದು 17.4 ಪೌಂಡ್‌ಗಳ ತೂಕವನ್ನು ಹೊಂದಿತ್ತು, ಇದು ಪ್ರಪಂಚದ ಅತ್ಯಂತ ಭಾರವಾದ ಆಲೂಗಡ್ಡೆಗಿಂತ ಗಮನಾರ್ಹವಾಗಿ ಹೆಚ್ಚು ಎಂದೇ ಹೇಳಲಾಗಿತ್ತು.

ಇದನ್ನೂ ಓದಿ:Recruitment, ಕರ್ನಾಟಕದಲ್ಲೇ 2,52,902 ಸರ್ಕಾರಿ ಹುದ್ದೆ ಖಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸ್ಪಷ್ಟನೆ ̤

ದಂಪತಿ ಈ ತರಕಾರಿಯನ್ನು ಪರೀಕ್ಷೆಗಾಗಿ ಅದರ ಒಂದು ತುಂಡನ್ನು ಸಂಶೋಧನಾ ಕೇಂದ್ರಕ್ಕೆ ಸಲ್ಲಿಸಿದ್ದರು . ಈ ವೇಳೆ ಅದು ಆಲೂಗಡ್ಡೆಯ ಯಾವ ಲಕ್ಷಣಗಳನ್ನು ಹೊಂದಿಲ್ಲ ಎಂಬುದು ಡಿಎನ್‌ಎ ಟೆಸ್ಟ್‌ನಿಂದ ತಿಳಿದು ಬಂದಿದೆ. ಅಲ್ಲದೆ ಗಿನ್ನೆಸ್‌ ಅಧಿಕಾರಿಯೊಬ್ಬರು ಕೂಡ ಈ ಕುರಿತು ಅಧಿಕೃತವಾಗಿ ತಿಳಿಸಿದ್ದಾರೆ. ಈ ಮಾದರಿಯು ಇದು ಒಂದು ರೀತಿಯ ಸೋರೆಕಾಯಿ ಎಂದು ಸೂಚಿಸುತ್ತದೆ ಎಂದು ವರದಿ ಬಂದಿದೆ.. ತಮ್ಮ ತೋಟದಲ್ಲಿ ಸೋರೆಕಾಯಿ ಹೇಗೆ ಬೆಳೆದಿದೆ ಎಂದು ತಿಳಿದಿಲ್ಲದ ದಂಪತಿಗಳು ಗೊಂದಲಕ್ಕೊಳಗಾದರು. ಸೋರೆಕಾಯಿ ತಳಿ ರೋಗಕ್ಕೆ ತುತ್ತಾಗಿ ಅದರ ಬೆಸ ಬೆಳವಣಿಗೆ ಮತ್ತು ತೂಕಕ್ಕೆ ಕಾರಣವಾಗಬಹುದು ಅಥವಾ ಪ್ರಕೃತಿಯ ಸಂಪೂರ್ಣ ಹವಾಮಾನದ ಏರಿಳಿತದಿಂದ ರೂಪುಗೊಂಡಿರಬಹುದು ಎಂದು ಅಧಿಕಾರಿಯು  ವಿವರಿಸಿದ್ದಾರೆ.

ಇದನ್ನೂ ಓದಿ:ಪದ್ಮಶ್ರೀ ಪ್ರಶಸ್ತಿ ಸ್ವೀಕಾರಕ್ಕೂ ಮೊದಲು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗ ಗುರು

Published On: 23 March 2022, 10:16 AM English Summary: World's Largest Potato Is Not A Potato!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.