1. ಅಗ್ರಿಪಿಡಿಯಾ

ವಿಶ್ವ ದ್ವಿದಳ ಧಾನ್ಯಗಳ ದಿನ, ಏನಿದರ ವಿಶೇಷತೆಗಳು ?

Hitesh
Hitesh
World Pulses Day, what are the specialities?

ದ್ವಿದಳ ಧಾನ್ಯದ ಬೆಳೆ ಮತ್ತು ಅವುಗಳ ಪ್ರಾಮುಖ್ಯದ ಕುರಿತು ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಮಾಗಡಿ, ರಾಮನಗರ ಜಿಲ್ಲೆಯ ಡಾ. ದಿನೇಶ, ಎಂ.ಎಸ್, ಡಾ. ಲತಾ ಆರ್.ಕುಲಕರ್ಣಿ, ಪ್ರೀತು, ಡಿ.ಸಿ. ಮತ್ತು ಡಾ. ಸೌಜನ್ಯ, ಎಸ್. ಅವರು ವಿವರಿಸಿದ್ದಾರೆ.

Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ 

ದ್ವಿದಳ ಧಾನ್ಯದ ಬೆಳೆಗಳು ಬಹಳ ಪ್ರಾಚೀನ ಕಾಲದಿಂದ ಮಾನವನ ಆಹಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ.

ಇವುಗಳ ಆಹಾರ ಮತ್ತು ಪೋಷಕಾಂಶದ ಪ್ರಾಮುಖ್ಯತೆಯನ್ನು ಪ್ರಪಂಚದ ಎಲ್ಲಾ ದೇಶಗಳಿಗೆ ಮತ್ತು ಪ್ರತಿಯೊಬ್ಬ ನಾಗರೀಕರಿಗೆ ತಿಳಿಸಿ ಹೇಳಲು 68ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ 2016ನ್ನು “ಅಂತರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ”ವನ್ನಾಗಿ ಆಚರಿಸಲಾಯಿತು.

RBI Repo Rate Hiked: ಆರ್‌ಬಿಐ ರೆಪೋ ದರದಲ್ಲಿ ಮತ್ತೆ ಏರಿಕೆ!  

ನಂತರ ಈ ವರ್ಷಚಾರಣೆಯಿಂದ ಪಡೆದುಕೊಂಡ ಪ್ರೇರಣೆ ಮತ್ತು ಯಶಸ್ಸನ್ನು ಮುಂದುವರಿಸಲು ಆಫ್ರೀಕಾ ಖಂಡದ ಬುರ್ಕಿನೋ ಫಾಸ್ ದೇಶದ ಬೇಡಿಕೆಯನ್ನು ಮನ್ನಿಸಿದ ವಿಶ್ವ ಸಂಸ್ಥೆಯು ಪ್ರತಿ ವರ್ಷ ಫೆಬ್ರವರಿ 10ನ್ನು ಅಂತರರಾಷ್ಟ್ರೀಯ ದ್ವಿದಳ ಧಾನ್ಯಗಳ ದಿನವಾಗಿ ಆಚರಿಸಲಾಗುವುದು.

ಈ ಕುರಿತು 2018ರ ಡಿಸೆಂಬರ್ 10ರಂದು ನೆಡೆದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.

ವಿಶ್ವಸಂಸ್ಥೆಯ ಸಹ ಸಂಸ್ಥೆಯಾದ ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ ಈ ವರ್ಷಾಚರಣೆಯ ಮುಂದಾಳತ್ವ ವಹಿಸಿದೆ.

2019ರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ದ್ವಿದಳ ಧಾನ್ಯಗಳ ದಿನವು ಮುಖ್ಯವಾಗಿ ಕಡಲೆ, ಒಣ ಬೀನ್ಸ್, ಲೆಂಟಿಲ್ಸ್, ಒಣ ಬಟಾಣಿ, ಲುಪಿನ್ಸ್, ಅಲಸಂದೆ, ತೊಗರಿ ಮತ್ತು ಇತರೆ ದ್ವಿದಳ ಧಾನ್ಯಗಳು

ವಿಶ್ವದ ಆಹಾರ ಮತ್ತು ಪೋಷಕಾಂಶ ಭದ್ರತೆಯಲ್ಲಿ ವಹಿಸುತ್ತಿರುವ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಗುರುತಿಸಿ ಇವುಗಳ ಕುರಿತು ಅರಿವು ಮೂಡಿಸಲು ಹಾಗೂ ಸುಸ್ಥಿರ ಕೃಷಿ ಯಲ್ಲಿ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ಅರಿತು ಇನ್ನು ಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿದೆ.

Medical Negligence | ವೈದ್ಯಕೀಯ ನಿರ್ಲಕ್ಷ್ಯ ಎಸಗಿದ ಪ್ರಸೂತಿ ತಜ್ಞೆಗೆ 11 ಲಕ್ಷ ದಂಡ!

ವಿಶ್ವ ದ್ವಿದಳ ಧಾನ್ಯ ದಿನಾಚರಣೆಯ ಧ್ಯೇಯೋದ್ದೇಶಗಳು:

ಪ್ರಪಂಚದ ಎಲ್ಲಾ ದೇಶಗಳ ನಾಗರೀಕರಿಗೆ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿಸುವುದು, ದ್ವಿದಳ ಧಾನ್ಯಗಳಲ್ಲಿನ ಪೌಷ್ಠಿಕಾಂಶಗಳ ಉಪಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಜನರು ದಿನನಿತ್ಯ ಬಳಸುವ ಆಹಾರದಲ್ಲಿ ದ್ವಿದಳ ಧಾನ್ಯಗಳ ಬಳಕೆ ಹೆಚ್ಚಿಸುವುದು.

ದ್ವಿದಳ ಧಾನ್ಯಗಳ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುವುದು ಮತ್ತು ವಿಶ್ವದಾದ್ಯಂತ ದ್ವಿದಳ ಧಾನ್ಯ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವುದು ಹಾಗೂ ಬೆಳೆ ಪರಿವರ್ತನೆಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದು.

ದ್ವಿದಳ ಧಾನ್ಯಗಳ ಮಾರಾಟ ಪ್ರಕ್ರಿಯೆಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.

ಭಾರತದಲ್ಲಿ ದ್ವಿದಳ ಧಾನ್ಯಗಳ ಪಾತ್ರ ಮತ್ತು ಪ್ರಸ್ತುತ ಉತ್ಪಾದನೆ:

ನಮ್ಮ ದೇಶವು ಪ್ರಪಂಚಲ್ಲಿಯೇ ಅತ್ಯಂತ ಹೆಚ್ಚು ದ್ವಿದಳ ಧಾನ್ಯಗಳನ್ನು ಉತ್ಪಾದಿಸುವ ದೇಶವಾಗಿದ್ದು, ಪ್ರಪಂಚದ ಒಟ್ಟಾರೆ ದ್ವಿದಳ ಧಾನ್ಯಗಳ ಉತ್ಪಾದನೆಗೆ ಶೇಕಡಾ 25ರಷ್ಟು ಕೊಡುಗೆ ನೀಡುತ್ತಿದೆ.

ಭಾರತ ದೇಶದಲ್ಲಿ ದ್ವಿದಳ ಧಾನ್ಯ ಬೆಳೆಗಳನ್ನು 28.8 ದಶ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ವಾರ್ಷಿಕ 23 ದಶ ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಉತ್ಪಾದಿಸುತ್ತಿದೆ ಮತ್ತು ಸರಾಸರಿ ಹೆಕ್ಟೇರುವಾರು ಇಳುವರಿ 798 ಕೆ.ಜಿ. ಇದೆ.

ಕರ್ನಾಟಕದಲ್ಲಿ ಈ ಬೆಳೆಗಳನ್ನು 24.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು 16.38 ಲಕ್ಷ ಟನ್ ಧಾನ್ಯಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಸರಾಸರಿ ಹೆಕ್ಟೇರು ಪ್ರದೇಶದಲ್ಲಿ 578 ಕೆಜಿ ಇಳುವರಿಯಿರುತ್ತದೆ.

ಪ್ರಪಂಚದ ಇಳುವರಿಗೆ ಹೋಲಿಸಿದಲ್ಲಿ ನಮ್ಮ ದೇಶದ ಹಾಗೂ ರಾಜ್ಯದ ದ್ವಿದಳ ಧಾನ್ಯದ ಇಳುವರಿಯು ಕಡಿಮೆಯಿದ್ದು, ಇದನ್ನು ಹೆಚ್ಚಿಸಲು ಹಲವಾರು ಅವಕಾಶಗಳಿವೆ.

ನಮ್ಮ ರಾಷ್ಟ್ರದಲ್ಲಿ ದ್ವಿದಳ ಧಾನ್ಯ ಬೆಳೆಗಳ ಇಳುವರಿ ನೀರಿಕ್ಷಿತ ಮಟ್ಟದಲ್ಲಿ ಇರದೆ ಇರಲು ಹಲವಾರು ಪ್ರಮುಖ ಕಾರಣಗಳಿವೆ. ಅವುಗಳೆಂದರೆ,

ಈ ಬೆಳೆಗಳನ್ನು ಕಡಿಮೆ ಫಲವತ್ತಾದ ಮಣ್ಣಿನಲ್ಲಿ ಬೆಳೆಯುವುದು ಹಾಗೂ ಹೆಚ್ಚು ಗುಣಮಟ್ಟದ ಮಣ್ಣಿನಲ್ಲಿ ಅಧಿಕ ಇಳುವರಿ ನೀಡುವ ಏಕದಳ ಧಾನ್ಯದ ಬೆಳೆಗಳನ್ನು ಬೆಳೆಯುವುದು.

ಈ ಬೆಳೆಗಳಿಗೆ ನೀರಾವರಿ ಒದಗಿಸದೇ, ಒಣ ಬೇಸಾಯದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವುದು.

ಈ ಬೆಳೆಗಳಿಗೆ ಬಹುತೇಕ ಸಂದರ್ಭಗಳಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗೊಬ್ಬರಗಳನ್ನು ಒದಗಿಸದೆ ಇರುವುದು ಮತ್ತು ಹೆಚ್ಚಿನ ಸಂಧರ್ಭಗಳಲ್ಲಿ ಅಂತರ ಬೆಳೆಗಳಾಗಿ ಬೆಳೆಯುವುದು ಮತ್ತು ಇವುಗಳ ಬೇಸಾಯ ಕ್ರಮಗಳಿಗೆ ಹೆಚ್ಚಿನ ಆಸಕ್ತಿ ತೋರಿಸದೆ ಇರುವುದು.

ಈ ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ಭಾದೆ ಹೆಚ್ಚಾಗಿದ್ದು, ಸರಿಯಾದ ಸಮಯಕ್ಕೆ ಶಿಫಾರಸ್ಸು ಮಾಡಿದ ಸಸ್ಯ ಸಂರಕ್ಷಕ ಕ್ರಮಗಳನ್ನು ಸರಿಯಾದ ಪ್ರಮಾಣದಲ್ಲಿ ಅನುಸರಿಸದೆ ಇರುವುದು.

ಈ ಬೆಳಗಳಲ್ಲಿ ಕಳೆನಿಯಂತ್ರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡದೇ ಇರುವುದು ಹಾಗೂ ಏಕದಳ ಧಾನ್ಯದ ಬೆಳೆಗಳಿಗೆ ಹೋಲಿಸಿದಲ್ಲಿ ಬೇಸಾಯದಲ್ಲಿ ಯಾಂತ್ರೀಕರಣಕ್ಕೆ ಹೆಚ್ಚು ಒತ್ತು ಕೊಡದೆ ಇರುವುದು ಮತ್ತು ಸಂಸ್ಕರಣೆ ಹಾಗೂ ಕೋಯ್ಲಿನೋತ್ತರ ತಂತ್ರಜ್ಞಾನಗಳು, ಬೇಳೆ ಮಾಡುವಂತಹ ಯಂತ್ರಗಳು ರೈತರಿಗೆ ಸುಲಭವಾಗಿ ಲಭ್ಯತೆ ಇಲ್ಲದಿರುವುದು.

ದ್ವಿದಳ ಧಾನ್ಯ ಕೃಷಿ ಪ್ರದೇಶವನ್ನು ಹೆಚ್ಚು ವಿಸ್ತರಿಸಲು ಅಥವಾ ಉತ್ಪಾದನೆ ಹೆಚ್ಚಿಸಲು ಅನುಸರಿಸಬಹುದಾದ ಕೆಲವು ಮಾರ್ಗೋಪಾಯಗಳು:

ದ್ವಿದಳ ಧಾನ್ಯಗಳನ್ನು ಮುಖ್ಯ ಬೆಳೆಯಾಗಿ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿ ಬೆಳೆಯುವುದು.

ಹೆಚ್ಚು ನೀರು ಅವಶ್ಯಕತೆ ಇರುವ ನೀರಾವರಿ ಬೆಳೆಗಳಿಗೆ ಪರ್ಯಾಯವಾಗಿ ಬೆಳೆಯುವುದರಿಂದ ಲಭ್ಯವಿರುವ ನೀರಿನಲ್ಲಿ ಹೆಚ್ಚಿನ ಇಳುವರಿ ಮತ್ತು ಆದಾಯ ಪಡೆಯಲು ಸಾಧ್ಯ.

ಅಧಿಕ ಇಳುವರಿ ನೀಡುವ ತಳಿ, ಸಂಕರಣ ತಳಿ ಮತ್ತು ಜೈವಿಕ ಬಲವರ್ಧಕ ತಳಿಗಳನ್ನು ಅಭಿವೃದ್ಧಿ ಪಡಿಸುವುದು.

ರೈತರ ಜಮೀನಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ದೊಡ್ಡ ಪ್ರಮಾಣದ ಗುಚ್ಚ ಪ್ರಾತ್ಯಕ್ಷಿಕೆೆಗಳನ್ನು ಹಮ್ಮಿಕೊಂಡು ಈ ಬೆಳೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು.

ಆಕಾಶವಾಣಿ, ದೂರದರ್ಶನ, ಪತ್ರಿಕಾ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದ್ವಿದಳ ಧಾನ್ಯದ ಬೆಳೆಗಳ ಬೇಸಾಯದ ಬಗ್ಗೆ ಹೆಚ್ಚು ಪ್ರಚಾರ ಮಾಡುವುದು.

ದ್ವಿದಳ ಧಾನ್ಯ ಬೀಜೋತ್ಪಾದನೆ ಮಾಡುವ ರೈತರನ್ನು ಹುರಿದುಂಬಿಸಲು ಹೆಚ್ಚಿನ ಉತ್ತೇಜನ ನೀಡುವುದು.

ರೈತರಿಗೆ ತಗಲುತ್ತಿರುವ ಸರಾಸರಿ ವೆಚ್ಚವನ್ನು ಆಧರಿಸಿ, ಲಾಭದಾಯಕ ಕನಿಷ್ಢ ಬೆಂಬಲ ಬೆಲೆಯನ್ನು ಬಿತ್ತನೆ ಸಮಯದಲ್ಲೇ ಘೋಷಿಸುವುದು.

ದ್ವಿದಳ ಧಾನ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ, ಶಿತಲೀಕರಣ ಘಟಕಗಳು, ಸಂಸ್ಖರಣೆ ಘಟಕಗಳು ಮತ್ತು ಸಂರಕ್ಷಕ ಗೊದಾಮುಗಳು ಹಾಗೂ ಖರೀದಿ ಕೇಂದ್ರಗಳನ್ನು ತೆಗೆಯುವುದು.

ಹೆಚ್ಚಿನ ಸಂಖ್ಯೆಯಲ್ಲಿ ಬೇಳೆ ಮಾಡುವ ಯಂತ್ರಗಳನ್ನು ಸ್ಥಾಪಿಸುವುದರಿಂದ ಮತ್ತು ದ್ವಿದಳ ಧಾನ್ಯಗಳ ಮೌಲ್ಯ ವರ್ಧನೆಯನ್ನು ಹೆಚ್ಚಿಸುವುದರ ಮೂಲಕ ರೈತರಿಗೆ ಹೆಚ್ಚಿನ ಲಾಭ ಸಿಗುವಂತೆ ಮಾಡುವುದರಿಂದ ಈ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಬಹುದು.

ದ್ವಿದಳ ಧಾನ್ಯಗಳು ಮಾನವನ ಆಹಾರದಲ್ಲಿ ಪ್ರಮುಖಪಾತ್ರವನ್ನು ವಹಿಸುವುದಲ್ಲದೆ, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು, ಕೃಷಿಕರು ಹಾಗೂ ಸುತ್ತಲಿನ ಪರಿಸರಕ್ಕೂ ಸಹ ಬಹು ದೊಡ್ಡ ಕೊಡುಗೆಯನ್ನು ನೀಡುತ್ತವೆ.

ದ್ವಿದಳ ಧಾನ್ಯ ಬೆಳೆಗಳ ಕೃಷಿಯಿಂದ ಕೃಷಿಕರಿಗೆ, ಗ್ರಾಹಕರಿಗೆ ಮತ್ತು ಪರಿಸರಕ್ಕೆ ಸಾಕಷ್ಟು ಅನುಕೂಲಗಳಿವೆ.

PM Krishi Sinchai Yojana : ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನ!

ದ್ವಿದಳ ಧಾನ್ಯ ಬೆಳೆಗಳ ಕೃಷಿಯಿಂದ ಕೃಷಿಕರಿಗೆ ಹಾಗುವ ಉಪಯೋಗಗಳು:

ದ್ವಿದಳ ಧಾನ್ಯ ಬೆಳೆಗಳನ್ನೊಳಗೊಂಡ ಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ, ಇವು ನ್ಯೆಸರ್ಗಿಕವಾಗಿ ಸಾರಜನಕವನ್ನು ಸ್ಥಿರೀಕರಿಸುವುದರಿಂದ ಮತ್ತು ಇವುಗಳ ಉಳಿಕೆಗಳು ಮಣ್ಣಿನಲ್ಲಿ

ಸ್ಥಿರೀಕರಣಗೊಂಡ ರಂಜಕ ಕರಗಿಸಿ ಬೆಳೆಗೆ ಲಭ್ಯವಾಗುವಂತೆ ಮಾಡುವುದರಿಂದ ರಸಗೊಬ್ಬರದ ಪ್ರಮಾಣವನ್ನು ಕಡಿತಗೊಳಿಸಿ ಕೃಷಿಯ ವೆಚ್ಚ ತಗ್ಗಿಸಬಹುದು.

ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುವುದರಿಂದ ಕೃಷಿ ಪದ್ಧತಿಗಳನ್ನು ವೈವಿಧ್ಯಮಯ ಗೊಳಿಸಬಹುದು ಮತ್ತು ಪೀಡೆಗಳ ಜೀವನ ಚಕ್ರ ಕಡಿತಗೊಳ್ಳುವುದರಿಂದ ಕಳೆನಾಶಕಗಳು ಮತ್ತು ಪೀಡೆ ನಾಶಕಗಳನ್ನು ಬಳಕೆ ಕಡಿಮೆ ಮಾಡಬಹುದು.

ಕೃಷಿ ಕುಟುಂಬದ ಆಹಾರ ಮತ್ತು ಪೋಷಕಾಂಶದ ಭದ್ರತೆಯನ್ನು ಕಾಪಾಡಿಕೊಂಡು, ಕೃಷಿಯಲ್ಲಿ ಉತ್ಪಾದಕತೆ ಮತ್ತು ಆರ್ಥಿಕತೆಯ ಸುಸ್ಥಿರತೆಯನ್ನು ಉತ್ತಮಗೊಳಿಸಬಹುದು.

ಸಾಕು ಪ್ರಾಣಿಗಳು ಮತ್ತು ಹೈನುಗಾರಿಕೆಗೆ ಪ್ರೋಟಿನ್‌ಯುಕ್ತ ಮೇವು ಮತ್ತು ಸಾಂಧ್ರಿತ ಆಹಾರ ಒದಗಿಸಬಹುದು.

ದ್ವಿದಳ ಧಾನ್ಯ ಬೆಳೆಗಳು ಕಡಿಮೆ ನೀರನ್ನು ಬಳಸುವುದರಿಂದ ನೀರಿನ ಉತ್ಪಾದಕತೆ ಹೆಚ್ಚಿಸಬಹುದು ಮತ್ತು ಮಣ್ಣಿನ ಫಲವತ್ತತೆ ಕಾಪಡಿಕೊಳ್ಳಬಹುದು.

ದ್ವಿದಳ ಧಾನ್ಯ ಬೆಳೆಗಳನ್ನು ಹೆಚ್ಚು ಉತ್ಪಾದಿಸುವುದರಿಂದ ಕೃಷಿಯಲ್ಲಿ ಮಹಿಳೆಯ ಪ್ರಾಮುಖ್ಯತೆ ಮತ್ತು ಕೂಲಿಕಾರರ ಉತ್ಪಾದಕತೆಯನ್ನು ವೃದ್ಧಿಸಬಹುದು (ಫ್ರೊಸೆಸಿಂಗ್ ಮತ್ತು ಮೌಲ್ಯವರ್ದನೆಗೆ ಹೆಚ್ಚು ಅವಕಾಶ).

ದ್ವಿದಳ ಧಾನ್ಯ ಬೆಳೆಗಳ ಬಳಕೆಯಿಂದ ಗ್ರಾಹಕರಿಗೆ ಹಾಗುವ ಉಪಯೋಗಗಳು:

ನಮ್ಮ ದೇಶದಲ್ಲಿ ದ್ವಿದಳ ಧಾನ್ಯಗಳು ಸಸ್ಯಹಾರಿಗಳಿಗೆ ಸಮತೋಲಿತ ಆಹಾರದ ಬಹುಮುಖ್ಯ ಅಂಶಗಳಾಗಿವೆ, ರಾಷ್ಟ್ರೀಯ ಪೋಷಕಾಂಶ ಉಸ್ತುವಾರಿ ಕಾರ್ಯಾಲಯವು ದ್ವಿದಳ ಧಾನ್ಯಗಳ ಸೇವನೆಯನ್ನು 40 ಗ್ರಾಂ./ಕ್ಯಾಲೊರಿ ಯುನಿಟ್/ದಿವಸಕ್ಕೆ ಶಿಫಾರಸ್ಸು ಮಾಡಿದೆ.

ದ್ವಿದಳ ಧಾನ್ಯಗಳು ಅಧಿಕ ಪ್ರೋಟಿನ್ ಒದಗಿಸುತ್ತವೆ (20-25%) ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹುದುಗಬಹುದಾದ (Fermentable fibre)ನಾರಿನಂಶದಿAದ ಕೂಡಿದ್ದು, ಸ್ಥೂಲಕಾಯ, ಮಲಭದ್ಧತೆ ಮತ್ತು ಕರುಳಿನ ಕ್ಯಾನ್ಸರ್ ಹೋಗಲಾಡಿಸಲು ಸಹಕಾರಿಯಾಗಿವೆ.

ದ್ವಿದಳ ಧಾನ್ಯಗಳಿಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯವಿದೆ-ಇದರಲ್ಲಿರುವ ಕರಗುವ ನಾರಿನ ಅಂಶ-ರಕ್ತದ ಕೊಲೆಸ್ಟಾçಲ್ ಮತ್ತು ಸಕ್ಕರೆ ಅಂಶವನ್ನು ಕಡಿತಗೊಳಿಸುತ್ತದೆ ಮತ್ತು ಕರಗದ ನಾರಿನ ಅಂಶ-ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ.

ದ್ವಿದಳ ಧಾನ್ಯಗಳಲ್ಲಿ ಇತರೆ ಧಾನ್ಯದ ಬೆಳೆಗಳಾದ ಗೋಧಿ, ಓಟ್ಸ್, ಬಾರ್ಲಿ ಮತ್ತು ಅಕ್ಕಿಯಲ್ಲಿರುವುದಕ್ಕಿಂತ ಎರಡರಷ್ಟು ಅಧಿಕ ಪ್ರೋಟಿನ್ ಅಂಶ ಇದೆ ಮತ್ತು ಇವು ಅತ್ಯವಶ್ಯಕ ಅಮೈನೊ ಆಮ್ಲವಾದ ಲೈಸಿನ್‌ನ್ನು ಹೆಚ್ಚಾಗಿ ಹೊಂದಿವೆ.

ಇವು ಗಮನಾರ್ಹ ಪ್ರಮಾಣದಲ್ಲಿ ವಿಟಮಿನ್ಸ್ ಮತ್ತು ಮಿನರಲ್ಸ್ ಗಳನ್ನು ಅತ್ಯಂತ ಕಡಿಮೆ ಕ್ಯಾಲೋರಿಯೊಂದಿಗೆ ಒದಗಿಸುತ್ತವೆ. ಮುಖ್ಯವಾದ ಮಿನರಲ್ಸ್-ಕಬ್ಬಿಣ, ಪೋಟ್ಯಾಷಿಯಂ, ಮೆಗ್ನೆಷಿಯಂ ಮತ್ತು ಸತು. ವಿಟಮಿನ್ಸ್: ಅತಿ ಹೆಚ್ಚು ಬಿ ವಿಟಮಿನ್ಸ್, ಫೋಲೆಟ್, ಥೈಯಾಮಿನ್ ಮತ್ತು ನಿಯಾಸಿನ್‌ಗಳನ್ನೊಳಗೊಂಡಿದೆ.

ಕಡಿಮೆ ಗ್ಲೆಸ್‌ಮಿಕ್ ಇಂಡಕ್ಸ್ ಹೊಂದಿವೆ: ಅಂದರೆ ದ್ವಿದಳ ಧಾನ್ಯಗಳನ್ನು ಸೇವಿಸಿದ ನಂತರ ರಕ್ತದಲ್ಲಿ ಸಕ್ಕರೆ ಅಂಶ ವೇಗವಾಗಿ ಹೆಚ್ಚಾಗುವುದಿಲ್ಲ. ಆದುದರಿಂದ ಇವು ಮಧುಮೇಹ ರೋಗಿಗಳ ಆಹಾರದಲ್ಲಿ ಮಹತ್ವದ ಪಾತ್ರ ಹೊಂದಿವೆ.

ದ್ವಿದಳ ಧಾನ್ಯ ಬೆಳೆಗಳ ಕೃಷಿಯಿಂದ ಪರಿಸರಕ್ಕೆ ಹಾಗುವ ಅನುಕೂಲಗಳು:

ವಾತವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವುದರಿಂದ, ಇವುಗಳಿಗೆ ಕಡಿಮೆ ರಸಗೊಬ್ಬರದ ಅವಶ್ಯಕತೆ ಇದ್ದು ಇತರೆ ಬೆಳೆಗಳಿಗೆ ಹೋಲಿಸಿದಲ್ಲಿ ಕೇವಲ ಅರ್ಧದಷ್ಟು ನವೀಕರಿಸಲಾಗದ ಇಂಧನದ ಪರಿಕರಗಳನ್ನು ಬಳಸುತ್ತವೆ.

ಆದ್ದರಿಂದ ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಬಹುದು.

ದ್ವಿದಳ ಧಾನ್ಯದ ಬೆಳೆಗಳು ಕಡಿಮೆ ಇಂಗಾಲದ ಹೆಜ್ಜೆ ಗುರುತಿನ ಆಹಾರ ಪದಾರ್ಥಗಳಾಗಿವೆ (low carbon foot print crops).

ದ್ವಿದಳ ಧಾನ್ಯದ ಬೆಳೆಗಳು ಕೃಷಿ ಪದ್ದತಿಗಳ ವೈವಿಧ್ಯತೆಯನ್ನು ವೃದ್ಧಿಸಿ ಉತ್ಪಾದನಾ ಸುಸ್ಥಿರತೆಯನ್ನು ಉತ್ತಮಗೊಳಿಸುತ್ತವೆ.

ದ್ವಿದಳ ಧಾನ್ಯದ ಬೆಳೆಗಳು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುವುದರಿಂದ ಅವುಗಳ ಜೈವಿಕ ಕ್ರಿಯೆಗಳು ವೃದ್ಧಿಗೊಂಡು ಮಣ್ಣಿನ ಜೈವಿಕ ಗುಣಲಕ್ಷಣದ ಮೇಲೆ ಗಮನಾರ್ಹ ಗುಣಾತ್ಮಕ ಬದಲಾವಣೆ ತರುತ್ತವೆ.

ದ್ವಿದಳ ಧಾನ್ಯದ ಬೆಳೆಗಳು ಬೇರಿನಿಂದ ವಿವಿಧ ಅಮೈನೊ ಆಮ್ಲಗಳ ಬಿಡುಗಡೆ ಮತ್ತು ಸಾವಯವ ಪದಾರ್ಥಗಳ ಉತ್ಪಾದನೆ ಮಾಡುವುದರಿಂದ

ಸೂಕ್ಷ್ಮ  ಜೀವಿಗಳಿಗಳ ವೈವಿಧ್ಯತೆ ಹೆಚ್ಚುವಂತೆ ಮಾಡಿ ಪೋಷಕಾಂಶಗಳ ಲಭ್ಯತೆ ಯನ್ನು ವೃದ್ಧಿಸುತ್ತವೆ ಮತ್ತು ಮಣ್ಣಿನಿಂದ ಹರಡುವ ರೋಗ, ಕೀಟ ಮತ್ತು ಕಳೆಗಳ ಜೀವನ ಚಕ್ರವನ್ನು ತಡೆಯಿಡಿಯುತ್ತವೆ. 

Poly house subsidy: ಪಾಲಿ ಹೌಸ್ ನಿರ್ಮಾಣಕ್ಕೆ ರೈತರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಫೆ.10 ಕೊನೆ ದಿನ! 

Published On: 11 February 2023, 02:51 PM English Summary: World Pulses Day, what are the specialities?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.