1. ಅಗ್ರಿಪಿಡಿಯಾ

ವಿಶ್ವದ ಮಣ್ಣಿನ ದಿನ 5 ಡಿಸೆಂಬರ್ 2021: “ಮಣ್ಣು ಸವಳಾಗುವುದನ್ನು ನಿಲ್ಲಿಸೋಣ, ಮಣ್ಣಿನ ಉತ್ಪಾದಕತೆ ಹೆಚ್ಚಿಸೋಣ”

KJ Staff
KJ Staff
Soil Day

ಮಣ್ಣು ಭೂಮಿಯ ಮೇಲಿನ ಪದರಾಗಿದ್ದು, ಅತ್ಯಂತ ಮಹತ್ವದ ಸಂಪನ್ಮೂಲವಾಗಿದೆ ಮತ್ತು  ಭೂಮಿಯ ಮೇಲಿನ ಜೀವನಕ್ಕೆ ಆಧಾರವನ್ನು ನೀಡುತ್ತದೆ. ಮಣ್ಣು ಖನಿಜಗಳು ಮತ್ತು ಸಾವಯವ ಪದಾರ್ಥಗಳನ್ನು ಬೆಂಬಲಿಸುವ ಮತ್ತು ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸುವ ಸಾಮಥ್ರ್ಯವನ್ನು ಹೊಂದಿದೆ. ಮಣ್ಣು ಅತ್ಯಗತ್ಯ ಸಂಪನ್ಮೂಲ ಮತ್ತು ನೈಸರ್ಗಿಕ ಪರಿಸರದ ಪ್ರಮುಖ ಭಾಗವಾಗಿದ್ದು, ಇದರಿಂದ ಜಾಗತಿಕ ಆಹಾರವನ್ನು ಉತ್ಪಾದಿಸಲಾಗುತ್ತದೆ. ಆದರೆ ಜನಸಂಖ್ಯೆಯ ಹೆಚ್ಚಳ, ಆಹಾರಕ್ಕಾಗಿ ಹೆಚ್ಚಿನ ಬೇಡಿಕೆಗಳು ಮತ್ತು ಸ್ಪರ್ಧಾತ್ಮಕ 'ಭೂ' ಬಳಕೆಯಿಂದ ಮಣ್ಣು ಒತ್ತಡದಲ್ಲಿದೆ. ನೈಸರ್ಗಿಕ ವ್ಯವಸ್ಥೆಯ ನಿರ್ಣಾಯಕ ಅಂಶವಾಗಿ ಮತ್ತು ಮಾನವರಿಗೆ ಮಹತ್ವದ ಕೊಡುಗೆಯಾಗಿ ಮಣ್ಣಿನ ಮಹತ್ವವನ್ನು ಆಚರಿಸಲು ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವೆಂದು ಪ್ರಸ್ತಾಪಿಸುವ ನಿರ್ಣಯವನ್ನು ಇಂಟನ್ರ್ಯಾಷನಲ್ ಯೂನಿಯನ್ ಆಫ್ ಮಣ್ಣಿನ  ವಿಜ್ಞಾನ (ಐಯುಎಸ್‍ಎಸ್) 2002 ರಲ್ಲಿ ಅಂಗೀಕರಿಸಿತು. ಥೈಲ್ಯಾಂಡ್ ಸಾಮ್ರಾಜ್ಯದ ನಾಯಕತ್ವದಲ್ಲಿ ಮತ್ತು "ಜಾಗತಿಕ ಮಣ್ಣಿನ ಸಹಭಾಗಿತ್ವ" ದ ಚೌಕಟ್ಟಿನೊಳಗೆ, ಜಾಗತಿಕ ಜಾಗೃತಿ ಮೂಡಿಸುವ ವೇದಿಕೆಯಾಗಿ ವಿಶ್ವ ಮಣ್ಣಿನ ದಿನವನ್ನು ಪಚಾರಿಕವಾಗಿ ಸ್ಥಾಪಿಸಲು ಎಫ್‍ಎಒ (ಈಂಔ) ಬೆಂಬಲಿಸಿದೆ. ಎಫ್‍ಎಒ ಸಮ್ಮೇಳನ, ಜೂನ್ 2013 ರಲ್ಲಿ, ವಿಶ್ವ ಮಣ್ಣಿನ ದಿನವನ್ನು ಗುರುತಿಸಿತು ಮತ್ತು 68ನೇ ಯುಎನ್ ಸಾಮಾನ್ಯ ಸಭೆಯಲ್ಲಿಅಧಿಕೃತ  ದತ್ತು  ನೀಡುವಂತೆ ಒತ್ತಾಯಿಸಿ ಡಿಸೆಂಬರ್ 5 ಅನ್ನು ವಿಶ್ವ ಮಣ್ಣಿನ ದಿನವೆಂದು ಘೋಷಿಸಿತು.

ಕೆಳಗೆ ಪಟ್ಟಿ ಮಾಡಲಾದ 2013 ರಿಂದ 2021 ರವರೆಗಿನ ವಿಶ್ವ ಮಣ್ಣಿನ ದಿನಾಚರಣೆಯ ವಿಷಯ.

ಕ್ರ ಸ. ವರ್ಷ ವಿಷಯ

  1. 2013 “ವಿಶ್ವ ಮಣ್ಣಿನ ದಿನ”
  2. 2014 “ಎಲ್ಲಿ ಆಹಾರ ಪ್ರಾರಂಭವಾಗುತ್ತದೆ”
  3. 2015 “ಮಣ್ಣಿನ ಆಂತರಿಕ ವರ್ಷ: ಆರೋಗ್ಯಕರ

ಜೀವನಕ್ಕಾಗಿ ಆರೋಗ್ಯಕರ ಮಣ್ಣು”

  1. 2016 “ಮಣ್ಣು ಮತ್ತು ದ್ವಿದಳ ಧಾನ್ಯಗಳು, ಜೀವನಕ್ಕೆ ಸಹಜೀವನ”
  1. 2017 “ಗ್ರಹದ ಆರೈಕೆ ನೆಲದಿಂದ ಪ್ರಾರಂಭವಾಗುತ್ತದೆ”
  2. 2018 “ಮಣ್ಣಿನ ಮಾಲಿನ್ಯಕ್ಕೆ ಪರಿಹಾರವಾಗಿರಿ” 8. 2019 “ಮಣ್ಣಿನ ಸವೆತವನ್ನು ನಿಲ್ಲಿಸಿ, ನಮ್ಮ ಭವಿಷ್ಯವನ್ನು ಉಳಿಸಿ”

9 . 2020 “ಮಣ್ಣನ್ನು ಜೀವಂತವಾಗಿರಿಸಿ, ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಶಿ”

10  . 2021 “ಮಣ್ಣು ಸವಳಾಗುವುದನ್ನು ನಿಲ್ಲಿಸೋಣ, ಮಣ್ಣಿನಉತ್ಪಾದಕತೆ ಹೆಚ್ಚಿಸೋಣ”

ಡಿಸೆಂಬರ್ 5 ಏಕೆ?

“ವಿಶ್ವ ಮಣ್ಣಿನ ದಿನವೆಂದು ಡಿಸೆಂಬರ್ 5 ರ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಏಕೆಂದರೆ ಥಾಯ್ಲೆಂಡ್‍ನ ರಾಜ ದಿವಂಗತ ಎಚ್.ಎಂ.ಭೂಮಿಬೋಲ್ ಅದುಲ್ಯದೇಜ್‍ರವರ ಅಧಿಕೃತ ಜನ್ಮದಿನಕ್ಕೆ ಅನುರೂಪವಾಗಿದೆ”. ವಿಶ್ವದಲ್ಲಿ 810 ಮೀಲಿಯನ್ ಹೆಕ್ಟೇರ್‍ನಷ್ಟು ಮಣ್ಣು ಸವಳು ಮತ್ತು ಕ್ಷಾರಯುತ್ತ ಮಣ್ಣು ಆಗಿದೆ. ಭಾರತದಲ್ಲಿ 6.73  ಮಿಲಿಯನ್ ಹೆಕ್ಟೇರ್‍ನಷ್ಟು ಮಣ್ಣು ಸವಳು ಮತ್ತು ಕ್ಷಾರಯುತ್ತ ಮಣ್ಣು ಆಗಿದೆ. 2.96 ಮಿಲಿಯನ್ ಹೆಕ್ಟೇರ್‍ನಷ್ಟು ಮಣ್ಣು ಸವಳು, ಹಾಗೂ 3.77 ಮಿಲಿಯನ್ ಹೆಕ್ಟೇರ್‍ನಷ್ಟು ಮಣ್ಣು ಕ್ಷಾರಯುತ್ತ ಮಣ್ಣು ಆಗಿದೆ. 2050 ರಲ್ಲಿ 16.25 ಮೀಲಿನ್ ಹೆಕ್ಟೇ ರ್‍ನಷ್ಟು ಸವಳು ಮತ್ತು ಕ್ಷಾರಯುಕ್ತ ಮಣ್ಣು ಆಗಬಹುದು. ಈ ವರ್ಷದ ವಿಶ್ವ ಮಣ್ಣಿನ ದಿನ, ಡಿಸೆಂಬರ್ 5, 2019 ಅದರ ಅಭಿಯಾನ ಏನೆಂದರೆ “ಮಣ್ಣು ಸವಳಾಗುವುದನ್ನು ನಿಲ್ಲಿಸೋಣ, ಮಣ್ಣಿನ ಉತ್ಪಾದಕತೆ ಹೆಚ್ಚಿಸೋಣ” ಎಂಬ ಘೋಷವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ.

ಸವಳಿನ ಸಮಸ್ಯೆ ಉಂಟಾಗಲು ಮುಖ್ಯ ಕಾರಣಗಳು

  1. ಹವಾಮಾನ: ಶುಷ್ಕ ಮತ್ತು ಅರೆಶುಷ್ಕ ವಾತಾವರಣದ ಮಣ್ಣುಗಳಲ್ಲಿ ಬೀಳುವ ಮಳೆಗಿಂತ ಬಾಷ್ತೀಕಣವೇ ಅಧಿಕವಾಗಿರುತ್ತದೆ.
  2. ತಾಯಿ ಬಂಡೆ ಮತ್ತು ಅದರಲ್ಲಿನ ಖನಿಜ ಲವಣಗಳು: ಲವಣಗಳು ಮಣ್ಣಿನಲ್ಲಿ ಆಳಕ್ಕೆ ತೊಳೆದು ಹೊಗದೇ ಸ್ವಲ್ಪ ಆಳದಲ್ಲಿಯೇ ಸಂಗ್ರಹಗೊಳ್ಳುತ್ತದೆ.
  3. ¨ಭೂಮಿಯ ಅಂತರ್ಜಲ ಮಟ್ಟ.
  4. ಮಿತಿ ಇಲ್ಲದ ನೀರಾವರಿ: ಕರಗುವ ಲವಣಗಳು ತೀರದ ಮಣ್ಣುಗಳಿಗೆ ನುಸುಳಿ ಬರುವದರಿಂದ ಹಾಗೂ ಅಧಿಕ ಲವಣಾಂಶಗಳಿರುವ ಜಲವನ್ನು/ನೀರನ್ನು ನೀರಾವರಿಗೆ ಬಳಸುತ್ತಾರೆ.
  5. ಸಾಗುವಳಿಯಲ್ಲಿ ಅನುಸರಿಸುವ ಕೆಲವು ದೋಷಯುಕ್ತ ಬೇಸಾಯ ಕ್ರಮಗಳು.

ಸವಳು ಭೂಮಿ ಎಂದರೆ ಏನು?

> ಸವಳು ಜಮೀನುಗಳು ಸಾಮಾನ್ಯವಾಗಿ ಸಾಕಷ್ಟು ಪ್ರಮಾಣದಲಿ ನೀರಿನಲ್ಲಿ ಕರಗುವ ಲವಣಗಳಿಂದ ಕೂಡಿರುತ್ತವೆ (ಸಣ್ಣ,ಮೆಗ್ನೇಷಿಯಂ, ಸೋಡಿಯಂ, ಪೊಟ್ಯಾಷಿಯಂ ಮತ್ತು  ಅವುಗಳ ಕ್ಲೋರೈಡ್ಸ್, ಸಲ್ಫೇಟ್ಸ್, ಕಾರ್ಬೋನೇಟ್ಸ್ ಮತ್ತು ಬೈಕಾರ್ಬೊನೆಟ್ಸ್).

ಮಣ್ಣು ಭೌತಿಕ ಗುಣಗಳು

ಮಣ್ಣುಗಳು ರಸಸಾರ ಮಣ್ಣಿನ ವಿಧ್ಯುತ್ ವಾಹಕತ್ವ (ಡೆಸಿ ಸೈಮನಿ/ಮೀ) ಸೋಡಿಯಂನ ಪ್ರಮಣ (ಶೇ.)

ಸವಳು <8.5 >4.0 <15.0

ಸವಳು-ಕ್ಷಾರಯುಕ್ತ <8.5 >4.0 <15.0

ಕ್ಷಾರಯುಕ್ತ >8.5 <4.0 >15.0

ಸವಳು ಮಣ್ಣಿನಿಂದ ಬೆಳೆಗಳ ಮೇಲೆ ಆಗುವ ದುಷ್ಟರಿಣಾಮಗಳು

  1. ಬೆಳೆಯ ಬೆಳವಣಿಗೆಗೆ ಬೇಕಾಗುವ ಘೋಷಕಾಂಶಗಳು ಸಾಮಥ್ರ್ಯವು ಕುಂಠಿತಗೊಳ್ಳುದು ಘೋಷಕಾಂಕ್ಷಗಳ ಕೊರತೆಯುಂಟಾಗಿ ಬೆಳೆಗಳ ಬೆಳೆವಣಿಗೆಯು ಕುಂಠಿತಗೊಳ್ಳುದು .
  1. ಬೆಳೆಗಳಲ್ಲಿ ನೀರಿನ ಅಂಶ ಕಡಿಮೆಯಾಗುವುದು.
  2. ಮಣ್ಣಿನಲ್ಲಿ ಅಧಿಕ ಉಪ್ಪು ಇರುವುದರಿಂದ ಬೆಳೆಗಳು ಸೊರಗಿದಂತಾಗಿ, ಎಲೆ ಉದರುವಿಕೆಯ ಲಕ್ಷಣಗಳು ಕಂಡುಬರುತ್ತವೆ.
  3. ಮಾಲಿಬ್ಡಿನ್‍ಂ ಒಂದನ್ನು ಬಿಟ್ಟು ಉಳಿದ ಎಲ್ಲಾ ಸಸ್ಯ ಘೋಷಕಾಂಕ್ಷಗಳ ಕೊರತೆ.
  4. ಉಪಕಾರಯುಕ್ತ ಸೂಕ್ಷ್ಮ ಜೀವಿಗಳ ಚಟುವಟಿಕೆ ಕುಂಠಿತಗೊಳ್ಳುತ್ತದೆ.

ಸವಳು ಮಣ್ಣಿನ ಸುಧಾರಣೆಗಳು.

  1. ಮಣ್ಣು ನಿರ್ವಹಣಾ ಕ್ರಮಗಳು:
  • ಮಣ್ಣು ಪರೀಕ್ಷೆ ಮಾಡಿಸಿ ಸಮಸ್ಯೆಯ ತೀವ್ರತೆಯನ್ನು ತಿಳಿಯುವುದು.
  • ಬಸಿಗಾಲುವೆಗಳನ್ನು ಹಾಕುವುದು. ಭೂಮಿಯಲ್ಲಿರುವ ಹೆಚ್ಚಿನ ನೀರನ್ನು ಬಸಿಗಾಲುವೆಗಳ ಮುಖಾಂತರ ಹೊರಗೆ

ಹಾಕುವುದರಿಂದ ಸವಳು ಭೂಮಿಯನ್ನು ಸುಧಾರಿಸಬಹುದು

  • ಜಮೀನನ್ನು ಸರಿಯಾದ ತೇವಾಂಶದಲ್ಲಿ ಉಳುಮೆ ಮಾಡುವುದು.
  • ಜಮೀನಿನಲ್ಲಿ ಬದುಗಳನ್ನು ಹಾಕಿ ಅವುಗಳನ್ನು ಅಡ್ಡಗಟ್ಟುವುದರಿಂದ ಮಳೆ ನೀರು ಜಮೀನಿನಲ್ಲೇ ಇಂಗಿ ಸವಳು ಬಸಿಯಲು ನೆರವಾಗುವುದು.
  • ಭಾರವಾದ ಕೃಷಿ ಯಂತ್ರೋಪಕರಣಗಳನ್ನು ಉಪಯೋಗಿಸದಿರುವುದು
  1. ಬೆಳೆ ನಿರ್ವಹಣಾ ಕ್ರಮಗಳು:

 ಸವಳು ಜಮೀನಿನ ಸುಧಾರಣೆಯ ಮೊದಲಿನ ವರ್ಷಗಳಲ್ಲಿ ಹಸಿರು ಎಲೆ ಗೊಬ್ಬರ ಬೆಳೆಗಳನ್ನು ಬೆಳೆಯಬೇಕು.

 ಸಾಲುಗಳ ಮಧ್ಯದ ಮತ್ತು ಮಧ್ಯದ ಗಿಡಗಳ ಅಂತರವನ್ನು ಸುಮಾರು ಶೇ.20ರಷ್ಟು ಕಡಿಮೆ ಮಾಡಬಹುದು.

 ಬಿತ್ತನೆ ಬೀಜದ ಪ್ರಮಾಣವನ್ನು ಶೇ. 25 ರಷ್ಟು ಹೆಚ್ಚಿಸಬೇಕು.

 ಮಣ್ಣಿನ ಸವಳಿನ ಪ್ರಮಾಣವನ್ನು ತಿಳಿದುಕೊಂಡು ಅದಕ್ಕೆ ಸೂಕ್ತವಾದ ಬೆಳೆ / ತಳಿಗಳನ್ನು ಬೆಳೆಯಬೇಕು.

 ಸವಳು ಮತ್ತು ಕ್ಷಾರ ಭೂಮಿಯಲ್ಲಿ ಬೆಳೆಯಬಹುದಾದ ಲವಣ ನೀರೋಧಕ ಬೆಳೆಗಳು

 ಅರಣ್ಯ ಗಿಡಗಳನ್ನು “ಅಗರ್ ಹೋಲ್” ವಿಧಾನದಿಂದ ಬೆಳೆಯುವುದರಿಂದ ಸವಳು ಜಮೀನಿನಲ್ಲೂ ಚೆನ್ನಾಗಿ ಬೆಳೆಯುತ್ತವೆ.

  1. ನೀರಾವರಿ ನಿರ್ವಹಣಾ ಕ್ರಮಗಳು:

 ಬಸಿಗಾಲುವೆ ವ್ಯವಸ್ಥೆ ಇದ್ದಾಗ ಬಿಟ್ಟುಬಿಟ್ಟು ನೀರು ಹಾಯಿಸುವುದರ ಬದಲಿಗೆ ಸತತವಾಗಿ ನೀರು ನಿಲ್ಲಿಸುವುದರಿಂದ ಸವಳು ಬಸಿಯುವ ಪ್ರಮಾಣ ಹೆಚ್ಚಾಗುವುದು.

 ಸವಳು ಜಮೀನುಗಳಲ್ಲಿ ಹನಿ ಮತ್ತು  ತುಂತುರು ನೀರಾವರಿ ವಿಧಾನಗಳನ್ನು ಅಳವಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.

 ಜಮೀನಿನಲ್ಲಿ ಬೋದುಗಳನ್ನು ಹಾಕಿ ಅವುಗಳನ್ನು ಅಡ್ಡಗಟ್ಟುವುದರಿಂದ ಮಳೆ ನೀರು ಜಮೀನಿನಲ್ಲೇ ಇಂಗಿ ಸವಳು ಬಸಿಯಲು ನೆರವಾಗುವುದು.

  1. ಷೋಷಕಾಂಶಗಳ ನಿರ್ವಹಣಾ ಕ್ರಮಗಳು:

 ಶಿಫಾರಸ್ಸಿಗಿಂತ ಶೇ. 25 ರಷ್ಟು ಹೆಚ್ಚಿನ ಸಾರಜನಕ ಮತ್ತು ರಂಜಕ ಗೊಬ್ಬರಗಳನ್ನು ಒದಗಿಸಬೇಕು.

 ಆಮ್ಲಕಾರಕ ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಸಲ್ಫೇಟ್, ಸಲ್ಫೇಟ್ ಆಫ್ ಪೋಟ್‍ಷ ಮತ್ತು ಕಬ್ಬಿಣದ ಸಲ್ಫೇಟ್ ಗೊಬ್ಬರ ಉಪಯೋಗಿಸುವುದು ಉತ್ತಮ.

 ಸತುವು ಮತ್ತು ಕಬ್ಬಿಣ ಅಗತ್ಯವಾಗಿ ಒದಗಿಸಬೇಕು.

 ಹಸಿರೆಲೆ ಗೊಬ್ಬರ ಅಥವಾ ಯಾವುದೇ ಸಾವಯವ ಗೊಬ್ಬರವನ್ನು ಹಾಕುವುದು ಸವಳು ಕಡಿಮೆಯಾಗುವುದು. :

ಹಸಿರು ಗೊಬ್ಬರಗಳು : ಸಸ್ಯಗಳ ಎಲೆ, ಎಳೆಯ ಕಾಂಡ ಮತ್ತು ಬೇರುಗಳಿಂದ ದೊರೆಯುವ ಸಾವಯವ ವಸ್ತುಗಳನ್ನು ಹಸಿರೆಲೆ ಗೊಬ್ಬರವೆಂದು ಕರೆಯಬಹುದು. ಹಸಿರು ಗೊಬ್ಬರಗಳಾದ ಸೆಣಬು, ಹೆಸರು, ಉದ್ದು, ಕುದುರೆ ಮೆಂತ್ಯೆ, ಡೈಯಿಂಚಾ, ಚೌವಳಿಕಾಯಿ, ಅಲಸಂದಿ ಇತ್ಯಾದಿ ಇವುಗಳನ್ನು ಹೊಲದಲ್ಲಿ ಬೆಳೆದು ಹೂ ಬಿಡುವ ಹಂತದಲ್ಲಿ (35-40 ದಿನಗಳು) ಕಟಾವು ಮಾಡಿ ಮಣ್ಣಿಗೆ ಸೇರಿಯುವದರಿಂದ ಬೆಳೆಗಳಿಗೆ ಪೋಷಕಾಂಶಗಳ  ಜೊತೆಗೆ ಮಣ್ಣಿನ  ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳು ವೃದ್ಧಿಸುವವು.

ಮಣ್ಣಿನಲ್ಲಿ ನೀರು, ಪೋಷಕಾಂಶಗಳು ಮತ್ತು ಸೂಕ್ಷ್ಮಜೀವಿಗಳು ತುಂಬಿರುತ್ತವೆ, ಅದು ನಮ್ಮ ಆಹಾರವನ್ನು ಬೆಳೆಯಲು ಪ್ರಮುಖವಾಗಿದೆ. ಆದಾಗ್ಯೂ, ಮಣ್ಣು ಒಂದು ಸೀಮಿತ ಸಂಪನ್ಮೂಲವಾಗಿದೆ - ಕೆಲವು ಸೆಂಟಿಮೀಟರ್ ಮಣ್ಣನ್ನು ಸಹ ಪುನಃಸ್ಥಾಪಿಸಲು 1000 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ನಮ್ಮ ಆಹಾರದ 95 ಪ್ರತಿಶತ ಮಣ್ಣಿನಿಂದ ಬರುತ್ತಿರುವುದರಿಂದ,

ಭವಿಷ್ಯದಲ್ಲಿ ನಾವು ಆಹಾರ ಸುರಕ್ಷತೆ ಮತ್ತು ಉತ್ತಮ-ಗುಣ ಮಟ್ಟದ ಪೌಷ್ಟಿಕಾಂಶವನ್ನು ಖಚಿತ ಪಡಿಸಿಕೊಳ್ಳಲು ಬಯಸುತ್ತೇವೆ, ನಾವು ಇಂದು ನಮ್ಮ ಮಣ್ಣಿನ ಬಗ್ಗೆ ನಾವೇ ಕಾಳಜಿ ವಹಿಸಬೇಕಾಗಿದೆ.

ಸವಿತಾ ಬಿ, ಎಸ್.ಎಸ್.ಅಂಜುಮ್, ಸಂತೋಷ ಶಿಂಧೆ, ಹೀನಾ ಎಮ್.ಎಸ್., ಮತ್ತು ಆರ್. ಬಿ. ನೆಗಳೂರ,

ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಇಂಡಿ -586 206.

ಇನ್ನಷ್ಟು ಓದಿರಿ:

ಕರ್ನಾಟಕ ಸರ್ಕಾರದಿಂದ ಇನ್ನು ಮುಂದೆ ರೈತರಿಗೆ ನೆರೆ ಪರಿಹಾರ ಧನ ರಿಲೀಸ್ ಆಗಲಿದೆ!

 ಸಿಲೆಂಡರ್ ಪ್ಪೋ ಸಿಲೆಂಡರ್! ಸಣ್ಣ ಸಣ್ಣ ಸಿಲೆಂಡರ್, ಪುಟ್ಟ ಪುಟ್ಟ ಗ್ಯಾಸ್ ಸಿಲೆಂಡರ್!

 

Published On: 11 December 2021, 11:29 AM English Summary: World Day Special ! Special Article

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.