ಅಕ್ಟೋಬರ್ ಕೊನೆಯಲ್ಲಿ ಬಿತ್ತನೆ ಮಾಡಲಾದ ಒಂದೂವರೆ ತಿಂಗಳ ಜೋಳದ ಬೆಳೆಗೆ ಸೈನಿಕ ಹುಳುವಿನ ಬಾಧೆ ಹೆಚ್ಚಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಸೈನಿಕ ಹುಳು ಬಾಧೆ ಕಂಡು ಬಂದಲ್ಲಿ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಸಲಹೆಯನ್ನು ಪಡೆಯಬೇಕೆಂದು ಕಲಬುರಗಿ ಹಾಗೂ ಕಮಲಾಪುರ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ತಿಳಿಸಿದ್ದಾರೆ.
ರೈತರು ತಮ್ಮ ಜಮೀನುಗಳಲ್ಲಿನ ಜೋಳದ ಬೆಳೆ ಹಾಗೂ ಸುಳಿಯನ್ನು ಚೆನ್ನಾಗಿ ಗಮನಿಸಬೇಕು. ಈ ಸೈನಿಕ ಹುಳಗಳು ಎಲೆಗಳನ್ನು ತಿಂದು ಹಾಕಿರುವುದು ಕಂಡು ಬಂದಲ್ಲಿ ರೈತರು ಇದನ್ನು ನಿರ್ಲಕ್ಷಿಸಬಾರದು. ಇದನ್ನು ನಿರ್ಲಕ್ಷಿಸಿದ್ದಲ್ಲಿ ಇಡೀ ಬೆಳೆಯನ್ನು ತಿಂದು ಹಾಕುವಷ್ಟು ಶಕ್ತಿ ಈ ಸೈನಿಕ ಹುಳುವಿಗೆ ಇದೆ. ಈ ಸೈನಿಕ ಹುಳು ಜೋಳದ ಸುಳಿಯನ್ನು ತಿನ್ನುವುದರಿಂದ ಬೆಳೆ ಒಣಗಿ ಹೋಗುವ ಸಂಭವ ಹೆಚ್ಚಾಗಿ ಇರುತ್ತದೆ.
ಸೈನಿಕ ಹುಳು ಬಾಧೆ ಕಂಡುಬಂದರೆ ರೈತರು 0.40 ಗ್ರಾಂ. ಇಮಾಮೆಕ್ಟಿನ್ ಬೆಂಜೊಯಟ್ 5 ಎಸ್‍ಜಿ ಅಥವಾ 0.3 ಮೀ.ಲೀ ಕ್ಲೋರಾಂಟ್ರಿನಿಲ್ಟ್ರೋಲ್ 18.5 ಎಸ್‍ಜಿ ಅಥವಾ 0.5 ಮೀ.ಲೀ ಸ್ಪೈನೊಟರಂ 12.5 ಎಸ್‍ಟಿ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಜೋಳದ ಬೆಳೆಯ ಸುಳಿಗೆ ಬಿಳುವಂತೆ ಸಿಂಪಡಿಸಬೇಕೆಂದು ಅವರು ತಿಳಿಸಿದ್ದಾರೆ.
Share your comments