1. ಅಗ್ರಿಪಿಡಿಯಾ

ಅಕ್ರಮ ಬಿತ್ತನೆ ಬೀಜಗಳ ಹಾವಳಿ ತಡೆಯುವಂತೆ ಸರ್ಕಾರಕ್ಕ ಮನವಿ ಮಾಡಿದ ಬೀಜೋತ್ಪಾದನೆ ಕಂಪನಿಗಳು

ದೇಶದಲ್ಲಿ ಹರ್ಬಿಸೈಡ್ ಟಾಲರೆಂಟ್ ಬಿಟಿ (ಎಚ್‌ಟಿ-ಬಿಟಿ) ಹತ್ತಿ ಬೀಜಗಳನ್ನು ಅಕ್ರಮವಾಗಿ ಬಿತ್ತಿ ಹತ್ತಿ ಬೆಳೆ ಬೆಳೆಯುವ ಪ್ರದೇಶ ಪ್ರಸಕ್ತ ವರ್ಷ ಹೆಚ್ಚಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ಬೀಜ ಉತ್ಪಾದನಾ ಉದ್ಯಮಗಳ ಒಕ್ಕೂಟ (ಎಫ್‌ಎಸ್‌ಐಐ) ಮತ್ತು ಭಾರತೀಯ ರಾಷ್ಟಿçÃಯ ಬೀಜ ಸಂಘಟನೆ (ಎನ್‌ಎಸ್‌ಎಐ), ಈ ಅಕ್ರಮ ಹತ್ತಿ ಬೆಳೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿವೆ.

ಈ ಕುರಿತಂತೆ ಕೇಂದ್ರ ಕೃಷಿ ಸಚಿವಾಲಯ, ಪರಿಸರ ಸಚಿವಾಲಯ ಹಾಗೂ ಬೀಜ ನಿಗಮಕ್ಕೆ ಮನವಿ ಸಲ್ಲಿಸಿರುವ ಎರಡೂ ಸಂಘಟನೆಗಳು, ಒಂದೊಮ್ಮೆ ಈ ಅನಧಿಕೃತ ಎಚ್‌ಟಿ-ಬಿಟಿ ಹತ್ತಿ ಬೀಜಗಳ ಹಾವಳಿಯನ್ನು ತಡೆಯದಿದ್ದರೆ ಇದರಿಂದ ದೇಶದ ಬೀಜ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಜೊತೆಗೆ, ಇದರಿಂದ ರೈತರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿವೆ.

ಹತ್ತಿಯನ್ನು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿನ ಬಹುತೇಕ ಕೃಷಿಕರು ತಮಗೆ ಅರಿವಿಲ್ಲದಂತೆ ಅಕ್ರಮ ಎಚ್‌ಟಿ ಬಿಟಿ ಹತ್ತಿ ಬೀಜಗಳನ್ನು ಖರೀದಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದ ಅಕ್ರಮ ಬೀಜಗಳು ಮಾರಾಟವಾಗುತ್ತಿರುವ ಕಾರಣ ಸಕ್ರಮ ಅಥವಾ ಸರ್ಕಾರದಿಂದ ಕಾನೂನು ರೀತಿ ಅನುಮತಿ ಪಡೆದು ಬೀಜ ಉತ್ಪಾದಿಸುತ್ತಿರುವ ಕಂಪನಿಗಳ ಬಿಜೋತ್ಪನ್ನಗಳು ಮಾರಾಟವಾಗುತ್ತಿಲ್ಲ. ಪ್ರಸಕ್ತ ವರ್ಷವಂತೂ ಸಂಘಟನೆಯಲ್ಲಿ ನೋಂದಣಿ ಮಾಡಿಕೊಂಡ ಸಂಸ್ಥೆಗಳ ಅರ್ಧದಷ್ಟು ಹತ್ತಿ ಬೀಜಗಳು ಮಾರಾಟವಾಗದೇ ಉಳಿದಿವೆ. ಅಕ್ರಮ ಎಚ್‌ಟಿ-ಬಿಟಿ ಹತ್ತಿ ಬೆಳೆಯುವ ಪ್ರದೇಶದಲ್ಲಿ ಹೆಚ್ಚಳ ಆಗಿರುವುದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿದೆ. ಅಲ್ಲದೆ, ಕೃಷಿಕರು ಹಾಗೂ ನ್ಯಾಯಯುತವಾಗಿ ವ್ಯವಹಾರ ನಡೆಸುತ್ತಿರುವ ಬೀಜ ಕಂಪನಿಗಳಿಗೆ ಇದರಿಂದ ಭಾರೀ ಅನ್ಯಾಯವಾಗುತ್ತಿದೆ ಎಂದು ಹೇಳುವ ಮೂಲಕ ಸಂಘಟನೆಗಳು ಸರ್ಕಾರದ ಗಮನ ಸೆಳೆದಿವೆ.

ಕಣ್ಣು ತಪ್ಪಿಸುವ ಖದೀಮರು

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿನ ಅಂಗಡಡಿಗಳು, ಬೀಜ ಮಾರಾಟ ಮಳಿಗೆಗಳು, ರಸಗೊಬ್ಬರ ವರ್ತಕರ ಅಂಗಡಿಗಳ ಮೇಲೆ ದಾಳಿ ಮಾಡಿ ತನಿಖೆ ಕಾರ್ಯ ನಡೆಸುತ್ತಾರೆ. ಆದರೆ, ಈ ಅಕ್ರಮ ಎಚ್‌ಟಿ-ಬಿಟಿ ಹತ್ತಿ ಬೀಜ ಉತ್ಪಾದಕರು ಕಾಳದಂಧೆಕೋರರ ಮೂಲಕ ಬಿತ್ತನೆ ಬೀಜಗಳನ್ನು ರೈತರಲ್ಲಿ ಪಸರಿಸುತ್ತಾರೆ. ಹೆಚ್ಚಾಗಿ ರಾತ್ರಿ ವೇಳೆಯೇ ಕಾರ್ಯಾಚರಣೆ ನಡೆಸುವ ಈ ಖದೀಮರೊಂದಿಗೆ ಕೆಲ ಬೀಜ ವರ್ತಕರು, ವಿತರಣೆ ಏಜೆನ್ಸಿ, ಏಜೆಂಟರುಗಳು ಶಾಮೀಲಾಗಿರುವ ಅನುಮಾನವಿದೆ. ಹೀಗಾಗಿ, ಸರ್ಕಾರದ ಕಣ್ಣು ತಪ್ಪಿಸಿ ಅಕ್ರಮ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಇಂತಹ ದಂಧೆಕೋರರ ವಿರುದ್ಧ ಸಂಬAಧಿಸಿದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

2017ರಲ್ಲಿ ಸಮಿತಿ ರಚನೆ

ಅಕ್ರಮ ಎಚ್‌ಟಿ-ಬಿಟಿ ಹತ್ತಿ ಬೀಜಗಳ ಬಿತ್ತನೆಗೆ ಸಂಬAಧಿಸಿದAತೆ 2017ರಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆದಿತ್ತು. ಆ ನಂತರ, ಪ್ರಧಾನ ಮಂತ್ರಿಗಳು ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕ್ಷೇತ್ರ ಪರಿಶೀಲನೆ ಮತ್ತು ವೈಜ್ಞಾನಿಕ ಮೌಲ್ಯಮಾಪನ ಸಮಿತಿ (ಎಫ್‌ಐಎಸ್‌ಇಸಿ) ರಚಿಸಿ ಆದೇಶ ಹೊರಡಿಸಿದ್ದರು. ದೇಶದ ವಿವಿಧ ರಾಜ್ಯಗಳಲ್ಲಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಮಿತಿಯು ಬಹುತೇಕ ಪ್ರದೇಶದಲ್ಲಿ ಅಕ್ರಮವಾಗಿ ಎಚ್‌ಟಿ ಬಿಟಿ ಹತ್ತಿ ಬೆಳೆಯುತ್ತಿರುವುದನ್ನು ಖಚಿತಪಡಿಸಿತ್ತು. ಜೊತೆಗೆ, ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗುಜರಾತ್ ಭಾಗಗಳಲ್ಲಿನ ಶೇ.15ರಷ್ಟು ಹತ್ತಿ ಪ್ರದೇಶದಲ್ಲಿ ಅಕ್ರಮ ಬೀಜಗಳ ಬಿತ್ತನೆ ಆಗಿರುವುದಾಗಿ ಸರ್ಕಾರಕ್ಕೆ ವರದಿ ನಿಡಿತ್ತು ಎಂದು ಭಾರತೀಯ ಬೀಜ ಉತ್ಪಾದನಾ ಉದ್ಯಮಗಳ ಒಕ್ಕೂಟ ಮತ್ತು ಭಾರತೀಯ ರಾಷ್ಟಿಯ ಬೀಜ ಸಂಘಟನೆ ಸರ್ಕಾರಕ್ಕೆ ಮಾಹಿತಿ ನೀಡಿವೆ.

“ಅಕ್ರಮ ಎಚ್‌ಟಿ ಬಿಟಿ ಹತ್ತಿ ಬೀಜಗಳ ಬಿತ್ತನೆಯ ಪ್ರಮಾಣವು ಕಳೆದ ಹಲವು ವರ್ಷಗಳಿಂದ ಹೆಚ್ಚಾಗುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಈ ಬೀಜಗಳನ್ನು ಬಿತ್ತನೆ ಮಾಡುವ ಪ್ರದೇಶ ವೃದ್ಧಿಸುತ್ತಲೇ ಇದ್ದು, ಈ ಬಾರಿ, ಹಿಂದೆಂದಿಗಿಂತಲೂ ಅತಿ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯಗಳಲ್ಲಿ ಕಳೆದ ವರ್ಷ ಸುಮಾರು 35 ಲಕ್ಷ ಅಕ್ರಮ ಎಚ್‌ಟಿ ಬಿಟಿ ಹತ್ತಿ ಬಿತ್ತನೆ ಬೀಜದ ಪ್ಯಾಕೇಟ್‌ಗಳು ಮಾರಾಟವಾಗಿದ್ದವು. ಆದರೆ, ಪ್ರಸಕ್ತ ಬಿತ್ತನೆ ಸಾಲಿನಲ್ಲಿ ಸುಮಮಾರು 70 ಲಕ್ಷದಷ್ಟು ಅಕ್ರಮ ಬಿತ್ತನೆ ಬೀಜದ ಪ್ಯಾಕೇಟ್‌ಗಳು ಮಾರಾಟವಾಗಿರುವುದು ನ್ಯಾಯಯುತ ಬಿತ್ತನೆ ಕಂಪನಿಗಳ ಆತಂಕ ಹೆಚ್ಚುವಂತೆ ಮಾಡಿದೆ,” ಎಂದು ಮಾಹಿತಿ ನೀಡಿರುವ ಎಫ್‌ಎಸ್‌ಐಐ ಅಧ್ಯಕ್ಷ ಎಂ.ರಾಮಸ್ವಾಮಿ ಅವರು, ಈ ಅಕ್ರಮ ಬೀಜ ಸರಬರಾಜು ಜಾಲದ ವಿರುದ್ಧ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೀಜ ಉತ್ಪಾದನೆ ಉದ್ಯಮ ಹಾಗೂ ಕೃಷಿ ಕ್ಷೇತ್ರ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜನಪ್ರಿಯ ಕಂಪನಿಗಳ ಹೆಸರು ಬಳಕೆ

‘ಅಕ್ರಮ ಎಚ್‌ಟಿ ಬಿಟಿ ಹತ್ತಿ ಬಿತ್ತನೆ ಬೀಜಗಳನ್ನು ಉತ್ಪಾದಿಸುತ್ತಿರುವ ದಂಧೆಕೋರರು ಅವುಗಳನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹಾಗೂ ರೈತ ಸಮುದಾಯದ ವಿಶ್ವಾಸ ಗಳಿಸಿರುವ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಬೀಜಗಳನ್ನು ಜನಪ್ರಿಯ ಬ್ರಾಂಡ್ ಹೆಸರಿರುವ ಪ್ಯಾಕೆಟ್‌ಗಳಲ್ಲಿ ತುಂಬಿ ಅಕ್ರಮವಾಗಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹತ್ತಿ ಬಿತ್ತನೆ ಬೀಜ ಉದ್ಯಮದಲ್ಲಿನ ಸಣ್ಣ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರವಲ್ಲದೆ, ಭಾರತದಲ್ಲಿರುವ ಕಾನೂನಾತ್ಮಕ ಹತ್ತಿ ಮಾರುಕಟ್ಟೆ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಎನ್‌ಎಸ್‌ಐಎ ಅಧ್ಯಕ್ಷರಾಗಿರುವ ಪ್ರಭಾಕರ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

Published On: 20 June 2021, 09:31 PM English Summary: rise of illegal ht-bt cotton seeds in market

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.