1. ಅಗ್ರಿಪಿಡಿಯಾ

ಹೆಸರಿನಲ್ಲಿ ರಸ ಹೀರುವ ಕೀಟಗಳ ನಿರ್ವಹಣೆ

ಹೆಸರು  ಮುಂಗಾರು ಬೆಳೆಯಾಗಿದ್ದು , ಇದು 70 ದಿನಗಳಲ್ಲಿ ಕೊಯ್ಲಿಗೆ ಬರುವ ಒಂದು ಬೆಳೆಯಾಗಿದೆ, ಹಾಗಾಗಿ ಮುಂಗಾರಿಯಲ್ಲಿ ಬೆಳೆಯಲು ಸೂಕ್ತವಾದ ಬೆಳೆ, ಇದನ್ನು ಮುಂಗಾರು ಹಾಗೂ ಬೇಸಿಗೆಯಲ್ಲಿ ಬೆಳೆಯಲಾಗುತ್ತದೆ, ಇದರಲ್ಲಿ ಮುಖ್ಯವಾಗಿ ಬರುವಂತಹ ಕೀಟಗಳ ಬಾಧೆ ಎಂದರೆ ರಸಹೀರುವ ಕೀಟಗಳು ಬಾದೆ.

 ರಸ ಹೀರುವ ಕೀಟಗಳು ಅದರಲ್ಲಿಯು ಆಫಿಡ್ ಹೇನು ಬೆಳೆಯ ಮೃದು ಭಾಗಗಳಲ್ಲಿ ಹೆಚ್ಚು ಕಾಣುತ್ತೇವೆ.ಅಪ್ಸರೆ ಕೀಟಗಳು ಹಾಗೂ ಪ್ರೌಢ ಕೀಟಗಳು ಎರಡು ಸೇರಿನ ರಸ ಹೀರುತ್ತವೆ, ಹಾಗೂ ಹೆಚ್ಚ್ಚಿನ ರಸವನ್ನು ಕೆಳಗಿನ ಎಲೆಯ ಮೇಲೆ ಕೆಡುವುತ್ತವೆ.

ಆಗುವ ಹಾನಿ :

-ಎಲೆಗಳ ಮೇಲೆ ರಸ ಬಿದ್ದು ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಪಡಿಸುತ್ತದೆ, ಇದರಿಂದ ಇಳುವವರಿಗೆ ಕುಂಠಿತವಾಗುತ್ತದೆ.

-ರಸ ಹೀರುವ ಕೀಟಗಳು ರಸವನ್ನೆಲ್ಲ ಹೀರಿದ ಕಾರಣ ಹೂವು ಹಾಗೂ ಕಾಯಿ ಉದುರುವುದನ್ನು ಕಾಣುತ್ತೇವೆ.

-ಇವು ಹಲವಾರು ರೋಗಗಳು ಗಿಡದಿಂದ ಗಿಡಕ್ಕೆ ಹಬ್ಬಲು ಸಹಾಯ ಮಾಡುತ್ತವೆ ಇದರಿಂದ ರೋಗವು ಹಬ್ಬಲು ಇವು ಸಹಕಾರಿಯಾಗುತ್ತವೆ 

ನಿಯಂತ್ರಣ :

ಬೇವಿನ ಬೀಜದ ಕಷಾಯ 5%  ಎಣ್ಣೆಯನ್ನು 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಅಥವಾ ಡೈಮಿಥೋಯೇಟ್ 1.7 ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಅಥವಾ ಮೊನೋಕ್ರೋಟೋಫೋಸ್ 1.5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಅಥವಾ ಇಮಿಡಾಕ್ಲಓಪ್ರಿಡ್ 17.8 sl ಪ್ರತಿ ಲೀಟರ್ ನೀರಿಗೆ 3 ಮಿಲಿ ಬೆರಸಿ ಸಿಂಪರಣೆ ಮಾಡಬೇಕು. ಅಥವಾ ನಾವು ರಾಸಾಯನಿಕವನ್ನು ಬಿಟ್ಟು ಸಾವಯುವ ದತ್ತ ನೋಡಿದರೆ ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ಗಳನ್ನು ಬಳಸಬಹುದು.

ರಸ ಹೀರುವ ಕೀಟಗಳಿಗಾಗಿ ನಾವು ಹಳದಿ ಅಂಟಿನ ಬಲೆಗಳನ್ನು ಬಳಸಬಹುದು ಇದರ ಮೂಲಕ ರಸ ಹೀರುವ ಕೀಟಗಳು ಹಳದಿ ಅಂಟಿನ ಬಲೆಗಳಿಗೆ ಅಂಟಿಕೊಳ್ಳುತ್ತವೆ ಇದರ ಮೂಲಕ ಕೂಡ ನಾವು ಕೀಟಗಳ ನಿರ್ವಹಣೆ ಮಾಡಬಹುದು.

ಸೂಚನೆ -ಔಷಧಿ ಸಿಪಂಡಣೆ ಮಾಡುವುದಕ್ಕಿಂತ ಮುನ್ನ ನಿಮ್ಮಹತ್ತಿರದ ರೈತ ಸಂಪರ್ಕ ಕೇಂದ್ರ,  ಸಂಬಂಧ ಪಟ್ಟ ಕೃಷಿ ಅಧಿಕಾರಿಗಳು ಅಥವಾ ಕೃಷಿ ತಜ್ಞರನ್ನು  ವಿಚಾರಿಸಿ ಬಳಸಬೇಕು, ಯಾಕೆಂದರೆ ನಾವು ಹೇಳಿದಂತ ಕ್ರಮಗಳು ಯಾವ ಹಂತದಲ್ಲಿ ಬಳಸಬೇಕು, ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂದು ಸಂಪೂರ್ಣ ಮಾಹಿತಿಯನ್ನು ಪಡೆದ ನಂತರವಷ್ಟೇ ಉಪಯೋಗಿಸಬೇಕೆಂದು ವಿನಂತಿ ಮಾಡುತ್ತೇವೆ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Published On: 23 November 2020, 08:21 PM English Summary: pest management in green gram

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.