1. ಅಗ್ರಿಪಿಡಿಯಾ

ತೊಗರಿ, ಕಡಲೆ, ಜೋಳ, ಹತ್ತಿ ಬೆಳೆಗಳಿಗೆ ಬರುವ ಕೀಟ ಹಾಗೂ ರೋಗಗಳ ನಿರ್ವಹಣೆ

KJ Staff
KJ Staff

ಇತ್ತೀಚೆಗೆ ಸುರಿದ ತುಂತುರು ಮಳೆ, ಮೋಡ ಕವಿದ ವಾತಾವರಣಿದಿಂದಾಗಿ ತೊಗರಿ ಹಾಗೂ ಇತರ ಬೆಳೆಗಳಿಗೆ ಕೀಟ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ತೊಗರಿ ಬೆಳೆಯು ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿದೆ. ಅಲಲ್ಲಿ ನೀರು ನಿಂತು ಹೊದ ಭೂಮಿಯಲ್ಲಿ ಪೈಟೊಪತ್ತೊರ ಎಲೆ ಚುಕ್ಕೆ ರೋಗದ ಬಾದೆಯಿಂದ ನೆಟೆ ರೋಗ ಕಂಡುಬಂದಿದೆ. ಈ ರೋಗಗಳಿಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ  ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ಇಲಾಖೆ, ಕಲಬುರಗಿ ಕೃಷಿ ತಜ್ಞರು ರೈತರಿಗೆ ಸಲಹೆ ನೀಡಿದ್ದಾರೆ.

ಎಲೆ ಚುಕ್ಕೆರೋಗದ ನಿರ್ವಹಣೆ:

ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕರ ಕಂದು ಬಣ್ಣದ ಚುಕ್ಕೆ ಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹು ಉದುರುವುದು. ಉಷ್ಣಾಂಶ 25 ಸಿ. ಕ್ಕಿಂತ ಕಡಿಮೆ ಹಾಗೂ ಮೊಡಕವಿದ ವಾತವರಣ ಮತ್ತು ತುಂತುರು ಮಳೆ, ಮುಂಜಾನೆ 3-4 ತಾಸು ಮಂಜು ಇದ್ದಾಗ ರೋಗದ ಬಾದೆಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲು.ಪಿ ಬೆರೆಸಿ ಸಿಂಪಡಿಸಬೇಕು.

ಮರುಕಾ (ಜಾಡಮಿ/ಜೊಂಡಾಳಿ) ಬಾದೆಯ ಹತೊಟಿ ಇದರ ನಿರ್ವಹಣೆಗೆ :

 ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 60 ಮಿ.ಲೀ. ಪ್ರತಿ ಎಕರೆಗೆ ಬರುವಂತೆ  ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ)  ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ  ಸಿಂಪಡಿಸಬೇಕು.

ತೊಗರಿ ಹಸಿರು ಕೀಡೆ ನಿರ್ವಹಣೆಗೆ :

 ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 60 ಮಿ.ಲೀ. ಪ್ರತಿ ಎಕರೆಗೆ ಬರುವಂತೆ  ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ)  ಅಥವಾ ಫ್ಲುಬೆಂಡಿಅಮೈಡ್ 30ಮಿಲಿ ಪ್ರತಿ ಎಕರೆಗೆ ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ  ಅಥವಾ ಮೆಣಸಿನಕಾಯಿ (0.5%) ಮತ್ತು ಬೆಳ್ಳುಳ್ಳಿ (0.25%) ಕಷಾಯ ಸಿಂಪಡಿಸಬೇಕು.

ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು - ಪಲ್ಸ ಮ್ಯಾಜಿಕ್ 2ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು.  

ಹೆಚ್ಚಿನ ಮಾಹಿತಿಗಾಗಿ ರೈತರು ವಲಯ ಕೃಷಿ ಸಂಶೊಧನಾ ಕೇಂದ್ರ, ಕಲಬುರಗಿ (9880323707) ಗೆ ಸಂಪರ್ಕಿಸಬಹುದು.

ಕಡಲೆ ಕಾಯಿಕೊರಕ ನಿರ್ವಹಣೆಗೆ :

ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 40 ಮಿ.ಲೀ. ಪ್ರತಿ ಎಕರೆಗೆ ಬರುವಂತೆ  ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 60 ಗ್ರಾಂ)  ಅಥವಾ ಫ್ಲುಬೆಂಡಿಅಮೈಡ್ 20 ಮಿಲಿ ಪ್ರತಿ ಎಕರೆಗೆ ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ  ಅಥವಾ ಮೆಣಸಿನಕಾಯಿ (0.5%) ಮತ್ತು ಬೆಳ್ಳುಳ್ಳಿ (0.25%) ಕಷಾಯ ಸಿಂಪಡಿಸಬೇಕು.

ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳ ನಿರ್ವಹಣೆಗೆ : ಥ್ರಿಪ್ಸ ನುಶಿ ಹಾಗೂ ಹಸಿರು ಜಿಗಿಹುಳುಗಳ ಬಾದೆ ಕಂಡುಬಂದಲ್ಲಿ ಅಸಿಟಾಮಿಪ್ರಿಡ್ 20ಎಸ್.ಪಿ.0.15ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.3 ಮಿಲಿ ಅಥವಾ ಥಯೋಮಿಥಾಕ್ಸಾಂ 20 ಡಬ್ಲೂಜಿ 0.2 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಇವುಗಳನ್ನು ನಿರ್ವಹಣೆ ಮಾಡಬಹುದು.

ಜೋಳದಲ್ಲಿ ಫಾಲ್ ಸೈನಿಕ ಹುಳು ಹಾನಿಯ ಲಕ್ಷಣಗಳು ಮತ್ತು ಅದರ ನಿರ್ವಹಣೆಗೆ: ಈ ಕೀಟವು ಮುಖ್ಯವಾಗಿ ಸುಳಿಯಲ್ಲಿ ಅತಿ ಹೆಚ್ಚು ಹಾನಿ ಉಂಟುಮಾಡಿ ಮೊದಲೆರಡು ಹಂತದ ಮರಿಹುಳುಗಳಿಂದ ಹೊರಬರುವ ಎಲೆಗಳ ಮೇಲೆ ರಂಧ್ರಗಳನ್ನು ಕಾಣಬಹುದು. ಬೆಳೆದು ದೊಡ್ಡದಾದ ಹುಳುಗಳು ಎಲೆಗಳ ಅಂಚನ್ನು ತಿನ್ನುವುದರಿಂದ ಎಲೆಗಳು ಹರಿದಂತೆ ಕಾಣುತ್ತವೆ.

ಈ ಹುಳುವಿನ ಹತ್ತೋಟಿ ಕ್ರಮಗಳು:

ತತ್ತಿ ಗುಂಪಾಗಿ ಹಿಡುವದು ಮತ್ತು ಮೊದಲ ಹಂತದ ಮರಿಗಳು ಗುಂಪಾಗಿ ಇರುವದರಿಂದ ಕೈ ಯಿಂದ ಆರಿಸಿ ನಾಶಪಡಿಸಬೇಕು.

ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಅಳವಡಿಸಿ ಪತಂಗಗಳ್ಳನ್ನು ಆಕರ್ಷಿಸಿ ನಾಶÀಪಡಿಸಬೇಕು.

ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್. ಜಿ. @ 0.4 ಗ್ರಾಂ ಅಥವಾ ಸ್ಪೈನೋಸಾಡ್ 45 ಎಸ್.ಸಿ. @ 0.3 ಮಿ.ಲೀ ಅಥವಾ ಸ್ಪೈನೋಟೋರಂ 12.5 ಎಸ್. ಸಿ @ 0.5 ಮಿ. ಲೀ. ಅಥವಾ ಕ್ಲೋರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ @ 0.3 ಮಿ.ಲೀ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಸಿಂಪರಣಾ ದ್ರಾವಣವು ನೇರವಾಗಿ ಸುಳಿಯೊಳಗೆ ಬೀಳುವಂತೆ ಸಿಂಪಡಿಸಬೇಕು.

ರೈತರಿಗೆ ವಿಶೇಷ ಸೂಚನೆ:

  1. ಪೀಡೆ ನಾಶಕ ಕೊಂಡುಕೊಳ್ಳುವಾಗ ನಿಗದಿತ ರಶಿಧಿ ಪಡೆದು ಕಾಯಿದಿರಿಸಿಕೊಳ್ಳಿ.

  2. ಸಿಪಾರಸ್ಸು ಮಾಡಿದ ಪೀಡೆ ನಾಶಕವನ್ನೆ ಕರಿದಿಸಿ ಸಿಂಪಡಿಸಬೇಕು.

  3. ಪೀಡೆ ನಾಶಕ ಸಿಂಪರಣೆ ಮಾಡುವಾಗ ಎಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸಬೇಕು.

  4. ರೈತರು ಯಾವದೆ ವಿವರಣೆ/ಖಚಿತ ಮಾಯಿತಿಯಿಲ್ಲದ  ಹಾಗೂ ಸಿಪಾರಸ್ಸು ಮಾಡದಿರುವ ಹಾಗೂ ನೊಂದಾಯಿಸದ (ಬಯೊ ಯಂದು ಮಾರಾಟ ವಾಗುವ) ಕೀಟ ನಾಶಕ ಸಿಂಪಡಿಸಬಾರದು ಇದರಿಂದ ಸಮರ್ಪಕವಾಗಿ ಪೀಡೆ ನಿರ್ವಹಣೆಯಾಗದೆ ಮನುಷ್ಯ, ಪ್ರಾಣಿ ಮತ್ತು ಪರಿಸರಕ್ಕೆ ಧಕ್ಕೆಯಾಗುವ ಸಂದರ್ಭ ಇರುತ್ತದೆ.

Published On: 30 November 2020, 03:10 PM English Summary: Management of Pest and Disease of Tomato, Chickpea, Corn and Cotton

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.