1. ಅಗ್ರಿಪಿಡಿಯಾ

ಕೊಪ್ಪಳ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರಿಗೆ ಪ್ರಮುಖ ಮಾಹಿತಿ

Maltesh
Maltesh

ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯಲು ಈಗ ಸಕಾಲವಾಗಿದ್ದು, ರೈತರು ಈ ಋತುವಿನಲ್ಲಿ ಕಲ್ಲಂಗಡಿ ಬೆಳೆಯಬಹುದು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ ಅವರು ತಿಳಿಸಿದ್ದಾರೆ.

ಉಷ್ಣಾಂಶ ಪಡೆದುಕೊಳ್ಳುವ ಸಾಮರ್ಥ್ಯ ಇರುವ ಈ ಬೆಳೆಗೆ ಕೊಪ್ಪಳ ಜಿಲ್ಲೆ ತುಂಬಾ ಸೂಕ್ತ ಪ್ರದೇಶವಾಗಿದೆ. ಭೂಮಿಯ ಉಷ್ಣತೆ 20 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಿರುವ ಮತ್ತು ಹವಾಗುಣ 25-32 ಡಿಗ್ರಿ ಸೆಲ್ಸಿಯಸ್ ಇರುವ ಬಯಲು ಸೀಮೆ ಪ್ರದೇಶ, ನೀರು ಬಸಿದು ಹೋಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ  ಈ ಬೆಳೆಗೆ ಸೂಕ್ತÀವಾಗಿದೆ.

ನೇರ ಬೀಜ ಬಿತ್ತನೆ ಮಾಡಿದರೆ 400-500 ಗ್ರಾಂ. ಬೀಜ ಬೇಕು. 4 ರಿಂದ 6 ಅಡಿ ಸಾಲಿನಿಂದ ಸಾಲಿಗೆ ಹಾಗೂ 1.1/2-2 ಅಡಿ ಬೀಜ / ಸಸಿಗಳ ನಡುವಿನ ಅಂತರ ಸೂಕ್ತ. ಎಕರೆಗೆ 3700À ರಿಂದ 5500 ಸಸಿಗಳ ಸಂಖ್ಯೆ ಉತ್ತಮ.

ಬಿತ್ತನೆಗೆ ಮೊದಲು ಭೂಮಿ ಉಳುಮೆ ಮಾಡಿ 5 ಟನ್ ಕಾಂಪೋಸ್ಟ್ ಗೊಬ್ಬರ ಅಥವಾ 10-12 ಟನ್ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಜೊತೆಗೆ ಜೈವಿಕ ಗೊಬ್ಬರಗಳಾದ ಸೂಡೋಮೊನಾಸ, ಟ್ರೆಕೊರ‍್ಮಾ ಮತ್ತು ಬೇವಿನ ಹಿಂಡಿ 1 ಕ್ವಿಂಟಲ್ ಪ್ರತಿ ಎಕರೆಗೆ ಬೆರೆಸಿ ಮೂರು ವಾರಗಳ ನಂತರ 30 ರಿಂದ 40 ಸೆಂ. ಮೀ. ಎತ್ತರದ ಮಡಿಗಳನ್ನು 4 ರಿಂದ 6 ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಹನಿಕೆ (ಲ್ಯಾಟರಲ್) ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, 2 ಅಡಿಗೊಂದರAತೆ ನಾಟಿ ಮಾಡಬೇಕು.

ಪ್ರಮುಖ ತಳಿಗಳು : ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಆಕಾಶ, ಐಶ್ವರ್ಯ ಅಲ್ಲದೇ ನಾನಾ ಕಂಪನಿಗಳ ಹೈಬ್ರಿಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಮಾರುಕಟ್ಟೆ ನೋಡಿ ಸೂಕ್ತ ತಳಿ ಆಯ್ಕೆ ಮಾಡಬೇಕು. ಸಸಿಗಳು ನಾಟಿ ಮಾಡುವಾಗ ಸೂಕ್ಷಾಣು ಜೀವಿಗಳ ಮಿಶ್ರಣವಾದ ಅರ್ಕಾಕನ್ಸೋರ್ಶಿಯಂ 15-20 ಗ್ರಾಂ. ಹಾಕಿ ನಾಟಿ ಮಾಡಿ 15 ನಿಮಿಷಗಳ ಕಾಲ ಡ್ರಿಪ್ ಮೂಲಕ ನೀರು ಕೊಡುವುದು ಉತ್ತಮ ಪದ್ದತಿಯಾಗಿದೆ. ಮಲ್ಚಿಂಗ ಮಾಡಿದರೆ ರಸ ಹೀರುವ ಕೀಟಗಳ ಹತೋಟಿ ಸುಲಭ.

ನಂತರ ಪ್ರತಿ ದಿನ ತೇವಾಂಶ ನೋಡಿ 8-10 ದಿನಗಳವರೆಗೆ 15 ನಿಮಿಷದಿಂದ 30 ನಿಮಿಷಗಳವರೆಗೆ ನೀರೊದಗಿಸಬೇಕು. ಪ್ರತಿ ವಾರ ನೀರು ಕೊಡುವ ಪ್ರಮಾಣ ಹೆಚ್ಚಿಸಬೇಕು. ಹೂವು ಬಿಡುವ ಸಮಯ ಮತ್ತು ಕಾಯಿ ಕಟ್ಟುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ 3 ರಿಂದ 5 ವಾರಗಳ ನಂತರ ಹೂವು ಬಿಡಲು ಆರಂಭವಾಗುತ್ತದೆ. ಮೊದಲು ಗಂಡು ಹೂವು ಆರಂಭವಾಗಿ ನಂತರ ಹೆಣ್ಣು ಹೂವು ಬರುತ್ತದೆ. ಗಂಡು ಹೂವು ಕಿತ್ತು ಹಾಕಿ, ಹೆಣ್ಣು ಹೂವು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂವು ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು - ಮೂಲ: ವಾರ್ತಾ ಇಲಾಖೆ ಕೊಪ್ಪಳ

Published On: 25 November 2023, 05:38 PM English Summary: Important Information for Watermelon Growers of Koppal District

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.