1. ಅಗ್ರಿಪಿಡಿಯಾ

ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್..! ಚುರುಕುಗೊಂಡ ಕೃಷಿ ಚಟುವಟಿಕೆ

Farmer The Journalist
Farmer The Journalist
ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್..! ಚುರುಕುಗೊಂಡ ಕೃಷಿ ಚಟುವಟಿಕೆ

ಧುನಿಕ ಸೌಕರ್ಯ ಬಳಕೆ ಮಾಡುವ ಮೂಲಕ ಬೆಳೆ ಕಾಪಾಡಲು ರೈತರು ಮುಂದಾಗಿದ್ದಾರೆ. ಡ್ರೋನ್​ ಮೂಲಕ ಔಷಧ ಸಿಂಪಡಿಸುತ್ತಿದ್ದಾರೆ. ಆಧುನಿಕ ಯಂತ್ರೋಪಕರಣ ಬಂದ ನಂತರ ರೈತರಿಗೆ ಕೃಷಿ ಚಟುವಟಿಕೆಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ ಎನ್ನುವಂತಾಗಿದೆ.

ಗಮನಿಸಿ: ವಿಡಿಯೋಗಾಗಿ ಕೆಳಗೆ ಅಟ್ಯಾಚ್‌ ಮಾಡಲಾದ ಲಿಂಕ್‌ ಕ್ಲಿಕ್‌ ಮಾಡಿ

ನವಲಗುಂದ ತಾಲೂಕಿನಲ್ಲಿ ಹತ್ತಿ ಬೆಳೆ ಎತ್ತರವಾಗಿ ಬೆಳೆದು, ಹೂ ಬಿಟ್ಟಿದ್ದು, ಇನ್ನೇನು ಕಾಯಿ ಕಟ್ಟುವ ಸಮಯ ಬಂದಿದೆ. ಬರೋಬ್ಬರಿ 4 ರಿಂದ 6 ಅಡಿ ಬೆಳೆದ ಗಿಡಗಳಿಗೆ ಕೀಟ ನಾಶಕ ಸಿಂಪಡಣೆ ಮಾಡುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಮಳೆಯಿಂದಾಗಲೇ ಹೆಸರು, ಶೇಂಗಾ,ಈರುಳ್ಳಿ ಬೆಳೆಗಳನ್ನು ಹಾಳು ಮಾಡಿಕೊಂಡಿರುವ ರೈತರು ಹತ್ತಿ ಬೆಳೆ ನಾಶವಾಗದಂತೆ ಮುನ್ನೆಚ್ಚರಿಕೆಗೆ ಮುಂದಾಗಿದ್ದಾರೆ. ಈ ಹಿನ್ನಲೆ ಕೆಲವು ರೈತರು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದು, ಡ್ರೋನ್​ ಮೂಲಕ ಈಗ ತಾಲೂಕಿನಲ್ಲಿ ರೈತರು ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.

ಈ ಮೂಲಕ ಆಧುನಿಕ ಸೌಕರ್ಯ ಬಳಕೆ ಮಾಡುವ ಮೂಲಕ ಬೆಳೆ ಕಾಪಾಡಲು ರೈತರು ಮುಂದಾಗಿದ್ದಾರೆ. ಡ್ರೋನ್​ ಮೂಲಕ ಔಷಧ ಸಿಂಪಡಿಸುತ್ತಿದ್ದಾರೆ. ರೈತರಿಗೆ ಆಧುನಿಕ ಯಂತ್ರೋಪಕರಣ ಬಳಿಕೆ ಮಾಡುವುದರಿಂದ ಕಾರ್ಮಿಕರ ಸಮಸ್ಯೆ, ಆರೋಗ್ಯಕರ ಸಮಸ್ಯೆ, ವೇಳೆಯ ಅಭಾವ ತಪ್ಪುತ್ತದೆ.

ಮುಂದಿನ ದಿನಗಳಲ್ಲಿ ರಸಗೊಬ್ಬರಗಳು ಸಹ ದ್ರವ ರೂಪದಲ್ಲಿ ಬರಲಿದ್ದು, ಡ್ರೋನ್ ತಂತ್ರಜ್ಜಾನ ಸಹಕಾರಿಯಾಗಲಿದೆ. ಎಂಬ ನಿರೀಕ್ಷೆಯಲ್ಲಿ ರೈತನಿದ್ದಾನೆ.

ರೈತರ ಮಾತು

ಡ್ರೋನ್ ಮೂಲಕ ಬೆಳೆಗಳಿಗೆ ಔಷಧ ಸಿಂಪರಣೆ ಮಾಡುವುದರಿಂದ ಔಷಧ ಉಳಿತಾಯದ ಜತೆಗೆ ಸಮಯವೂ ಉಳಿತಾಯವಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ಕೆಲ ರೈತರು.

ಇದರಿಂದ ನಾನಾ ಕಡೆಯ ರೈತರು ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಣೆಯತ್ತ ಮುಖ ಮಾಡುತ್ತಿರುವುದು ಇಂದಿನ ದಿನಗಳಲ್ಲಿ ಯಾಂತ್ರೀಕೃತ ಕೃಷಿಗೆ ಹೆಚ್ಚು ಒತ್ತು ನೀಡಿರುವುದರಿಂದ ಸಮಯ ಉಳಿತಾಯವಾಗುತ್ತದೆ.

ಹಿಂದಿನ ಕಾಲದಲ್ಲಿ ಬಿತ್ತಿದ ಸಾಂಪ್ರದಾಯಿಕ ವಿಧಾನದಲ್ಲಿ ತೆನೆ, ಎತ್ತು, ಮನುಷ್ಯರು, ಗೂಳಿ, ಆಳುಗಳನ್ನು ಸಹ ನೀರಾವರಿಗೆ ಬಳಸುತ್ತಿದ್ದರು. ಇಂದಿಗೂ ಅನೇಕ ಹಳ್ಳಿಗಳಲ್ಲಿ ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಾರೆ.

ಕಾರ್ಮಿಕರ ಕೊರತೆ

ಜಿಲ್ಲೆಗಳಲ್ಲಿ ಕಟಾವು, ಒಕ್ಕಣೆಗೂ ಕಾರ್ಮಿಕರನ್ನು ಬಳಸಲಾಗುತ್ತಿತ್ತು, ಈಗ ಈ ಎಲ್ಲ ಕೆಲಸಗಳನ್ನು ಯಂತ್ರದ ಮೂಲಕ ಮಾಡುತ್ತಿರುವುದರಿಂದ ಕೂಲಿ ಕಡಿಮೆಯಾಗಿ ಸಮಯ, ಹಣ ಉಳಿತಾಯವಾಗುತ್ತಿದೆ.ಔಷಧ ಸಿಂಪಡಣೆಗೆ ಕೂಲಿಕಾರರ ಬದಲು ಡ್ರೋನ್ ಬಳಕೆ ಹೆಚ್ಚು.

ಅಕ್ಕ-ಪಕ್ಕದ ಜಿಲ್ಲೆಗಳ ರೈತರೂ ಹೆಚ್ಚಿನ ಸಂಖ್ಯೆಯಲ್ಲಿ ಡ್ರೋನ್ ಬಳಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೊಂದೆಡೆ ಡ್ರೋನ್‌ನಿಂದ ಬೆಳೆಗಳಿಗೆ ಸಿಂಪರಣೆ ಮಾಡುವುದರಿಂದ ಇತರರ ಹೊಲಗಳಲ್ಲಿ ಕೆಲಸ ಮಾಡುವ ಮೂಲಕ ಆ ಕೂಲಿಕಾರ್ಮಿಕರ ಕೆಲಸ ಅಪಾಯಕ್ಕೆ ಸಿಲುಕಿದೆ.

ಸುದ್ದಿ ಮತ್ತು ವಿಡಿಯೋ: ವಿನೋದ್‌ ಇ.

ರೈತ ಪತ್ರಕರ್ತ (FTJ), ಕೃಷಿ ಜಾಗರಣ

Published On: 12 December 2022, 11:50 AM English Summary: Drone came to spray pesticides..! Accelerated agricultural activity

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.