1. ಅಗ್ರಿಪಿಡಿಯಾ

ಕಾಳುಮೆಣಸಿನಲ್ಲಿ ಬರುವ ರೋಗಗಳು ಮತ್ತು ಸಮಗ್ರ ನಿರ್ವಹಣೆ

ಪ್ರಕೃತಿ ಮಾನವ ಕುಲಕ್ಕೆ ಅನೇಕ ಮಸಾಲೆ ಪದಾರ್ಥಗಳನ್ನು ಬಳುವಳಿಯಾಗಿ ನೀಡಿದೆ, ಅದರಲ್ಲಿ ಮನುಷ್ಯನು ಕೆಲವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದಾನೆ. ಇಂತವುಗಳಲ್ಲಿ ಕರಿಮೆಣಸು ಕೂಡ ಒಂದು. ಕರಿಮೆಣಸು ಅಥವಾ ಕಾಳುಮೆಣಸು (ಪೈಪರ್ ನೀಗ್ರಮ್) ಬಹುವಾರ್ಷಿಕ ಹಬ್ಬುವ ಬಳ್ಳಿ. ಈ ಬೆಳೆಯನ್ನು ಇದರ ಕಾಳುಗಳಿಗೋಸ್ಕರ ಕೃಷಿಮಾಡುತ್ತಿದ್ದು, ಇದು ಅನೇಕ ಪ್ರಯೋಜನಕಾರಿ ಉಪಯೋಗಗಳನ್ನು ಹೊಂದಿದೆ. ಇದರ ಬಾಳಿಕೆ ಮತ್ತು ಮೌಲ್ಯದಿಂದಾಗಿ ಇದನ್ನು‘ಕಪ್ಪುಚಿನ್ನ' ಎಂದು ಸಹ ಕರೆಯಲಾಗುತ್ತದೆ. ಹದಮಾಡಿದ ಮೆಣಸಿನ ಕಾಳುಗಳನ್ನು ಪ್ರಮುಖವಾಗಿ ಸಾಂಬಾರು ಪದಾರ್ಥವಾಗಿ ಬಳಸುವುದಲ್ಲದೆ, ಔಷಧಿಗಳ ತಯಾರಿಕೆಯಲ್ಲೂ ಹೆಚ್ಚಿನ ಮಹತ್ವವನ್ನು ಪಡೆದಿದೆ. ಕಾಳುಮೆಣಸನ್ನು ಸಾಂಬಾರು ಪದಾರ್ಥಗಳ ರಾಜ ಎಂದು ಪರಿಗಣಿಸಲಾಗುತ್ತದೆ, ಇದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆಯುತ್ತಿರುವ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಮಸಾಲೆ ಪದಾರ್ಥ. ಈ ಬೆಳೆಯಲ್ಲಿ ಭಾರತವು ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸಲು ಅಂತರ್ಗತ ಶಕ್ತಿಯನ್ನು ಹೊಂದಿದೆ.

ಭಾರತ ಕರಿಮೆಣಸು ಉತ್ಪಾದನೆ, ಬಳಕೆ ಹಾಗೂ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಕರಿಮೆಣಸು ಉತ್ಪಾದನೆಯಲ್ಲಿ ಕೇರಳ ಮತ್ತುಕರ್ನಾಟಕ ಶೇಕಡ 92ರಷ್ಟು ಪಾಲನ್ನು ಹೊಂದಿ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ. ಇದರೊಂದಿಗೆ ಕಾಳು ಮೆಣಸಿನ ಉತ್ಪಾದನೆಯಲ್ಲಿ ಸಾಕಷ್ಟು ಅಡ್ದಿಗಳೂ ಸಹ ಇವೆ. ಅವುಗಳಲ್ಲಿ ರೋಗಗಳ ಬಾಧೆ ಕೂಡ ಒಂದು ಪ್ರಮುಖಅಡೆಚಣೆಯಾಗಿದೆ. ಕಾಳುಮೆಣಸಿನಲ್ಲಿ ಬಾಧಿಸುವ ಪ್ರಮುಖ ರೋಗಗಳು, ಅವುಗಳ ಲಕ್ಷಣಗಳು ಮತ್ತು ಹತೋಟಿ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಕೆಳಗೆ ವಿವರಿಸಲಾಗಿದೆ.

ಶೀಘ್ರ ಸೊರಗುರೋಗ:

ರೋಗ ಲಕ್ಷಣಗಳು:

 • ಈ ರೋಗವು ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಬಳ್ಳಿಗಳ ಎಲ್ಲಾ ಭಾಗಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು ಅಂತಹ ಎಲೆಗಳಲ್ಲಿ ನಾರಿನಂಥ ಬಾಚು ಭಾಗಕಾಣುತ್ತವೆ. ಈ ಚುಕ್ಕೆಗಳು ದೊಡ್ಡವಾಗುತ್ತ ಎಲೆಗಳನ್ನು ವ್ಯಾಪಿಸಿ ಕೊನೆಗೆ ಎಲೆಗಳು ಉದುರುತ್ತವೆ.
 • ಮಣ್ಣಿನ ಮೇಲ್ಭಾಗದ ಹರಿಗಳು, ಮೃದುಕಾಂಡ, ಕುಡಿ ಎಲೆಗಳು ರೋಗದಿಂದಾಗಿ ಕಪ್ಪು ವರ್ಣಕ್ಕೆತಿರುಗುತ್ತವೆ. ಬಳ್ಳಿಗಳಲ್ಲಿ ರೋಗವು ಪೂರ್ತಿ ವ್ಯಾಪಿಸಿ ಪೂರ್ತಿ ಬಳ್ಳಿ ನಾಶವಾಗುತ್ತದೆ. ಮುಖ್ಯಕಾಂಡದ ನೆಲಮಟ್ಟ ಅಥವಾ ಕುತ್ತಿಗೆ ಭಾಗದಲ್ಲಿ ರೋಗ ಬಾಧಿಸಿದಲ್ಲಿ ಪೂರ್ತಿ ಬಳ್ಳಿ ಸೊರಗಿಒಣಗುತ್ತದೆ.
 • ಎಲೆಗಳು, ಕಾಳುಗೊನೆಗಳು ಉದುರಿ ಹೋಗುತ್ತವೆ. ರೆಂಬೆಗಳು ಗೆಣ್ಣು ಭಾಗದಲ್ಲಿ ಮುರಿಯುತ್ತವೆ ಮತ್ತು ಪೂರ್ತಿ ಬಳ್ಳಿ ಒಂದು ತಿಂಗಳಲ್ಲಿ ಕುಸಿಯುತ್ತದೆ.
 • ಪೋಷಕಾಂಶಗಳನ್ನು ಹೀರಿಕೊಳ್ಳುವ ಬೇರಿನ ಭಾಗಗಳಿಗೆ ರೋಗ ತಗುಲಿದಲ್ಲಿ ಬಾಧೆ ಲಕ್ಷಣಗಳು ನಿಧಾನ ಪ್ರಕಟಗೊಂಡು ಮಳೆಯ ಆರಂಭದೊಂದಿಗೆ ಬಳ್ಳಿಗಳ ಎಲೆಗಳು ಹಳದಿ ವರ್ಣಕ್ಕೆ ತಿರುಗಿ, ಬಾಡಿಉದುರಿ ಹೋಗುತ್ತವೆ. ಅಕ್ಟೋಬರ್-ನವೆಂಬರ್ ತಿಂಗಳಿನ ನಂತರ ಸಾಯುತ್ತವೆ.
 • ಬಳ್ಳಿಯ ಬುಡದ ಎಲೆಗಳ ಮೇಲೆ ವೃತ್ತಾಕಾರದ ನೀರಿನಿಂದ ತೋಯ್ದಂತಹ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಹಳದಿ ಬಣ್ಣಕ್ಕೆತಿರುಗಿ ಕೊಳೆತು ಉದುರಿ ಬೀಳುತ್ತವೆ.
 • ಬುಡದಿಂದ ಸುಮಾರು 30 ರಿಂದ 40 ಸೆಂ. ಮೀ. ವರೆಗೆಕಾಂಡದ ಮೇಲೆ ನೀರಿನಿಂದ ತೋಯ್ದಂತಹಕಪ್ಪು ಮಚ್ಚೆಗಳು ಕಾಣಿಸಿಕೊಂಡು ದೊಡ್ಡದಾಗುತ್ತವೆ.
 • ಈ ರೋಗವು ತೀವ್ರವಾದಾಗ ಕಾಂಡವು ಕೊಳೆತು ಆ ಭಾಗದತೊಗಟೆ ಸುಲಿದು ಬಿದ್ದು ಬಳ್ಳಿ ಸಂಪೂರ್ಣವಾಗಿ ಹಾಳಾಗುವುದು.
 • ಸಾಮಾನ್ಯವಾಗಿ ನೆಲದಲ್ಲಿ ಹರಡಿ ಬೆಳೆಯುವ ಕವಲು ಬಳ್ಳಿಗಳು ಮೊದಲು ಈ ರೋಗಕ್ಕೆತುತ್ತಾಗುತ್ತವೆ.
 • ಈ ಮೇಲೆ ತಿಳಿಸಿದ ರೋಗ ಲಕ್ಷಣಗಳು ಕಂಡುಬಂದಲ್ಲಿ ಇಡೀ ಬಳ್ಳಿಯು 30 ದಿನಗಳಲ್ಲಿ ಸಾಯುತ್ತದೆ. ಆದ್ದರಿಂದ ಈ ರೋಗವನ್ನು "ಶೀಘ್ರ ಸೊರಗು ರೋಗ" ಎಂದು ಕರೆಯುತ್ತಾರೆ.

ರೋಗಾಣು ಮತ್ತುರೋಗದ ಪ್ರಸರಣೆ:

 • ಫೈಟೋಪ್ತರ ಕ್ಯಾಪ್ಸಿಸಿ ಎಂಬ ಶಿಲೀಂಧ್ರ ರೋಗಾಣುವಿನಿಂದ ಹರಡುವ ಈ ರೋಗಕ್ಕೆಜೌಗು ಪ್ರದೇಶ ಹಾಗೂ ತೇವಾಂಶದಿಂದ ಕೂಡಿದ ವಾತಾವರಣ ಅನುಕೂಲಕರವಾಗಿರುತ್ತದೆ. ಪ್ರತೀ ದಿನ ಸುಮಾರು 22 ಮಿ. ಮೀ. ಗಿಂತ ಹೆಚ್ಚು ಮಳೆ ಸುರಿಯುವುದು, ಶೇ. 83 ರಿಂದ 99 ರಷ್ಟುಆರ್ದ್ರತೆ, 22 ರಿಂದ 29 ಡಿಗ್ರಿ ಸೆ. ಉಷ್ಣಾಂಶ ಮತ್ತು ದಿನಕ್ಕೆ 2 ರಿಂದ 3 ಗಂಟೆಗಳಿಗಿAತ ಕಡಿಮೆ ಸೂರ್ಯನ ಬೆಳಕು ಇದ್ದಾಗ ಬಳ್ಳಿಯು ರೋಗದ ಬಾಧೆಗೆ ತುತ್ತಾಗುತ್ತದೆ.
 • ಮಳೆಗಾಲದಲ್ಲಿ ಕಂಡು ಬರುವ ಈ ರೋಗವು ಹಿಂದಿನ ವರ್ಷಗಳ ರೋಗ ಪೀಡಿತ ಬಳ್ಳಿಯ ಉಳಿಕೆಯಲ್ಲಿ ರೋಗಾಣು ಬದುಕಿ ಉಳಿದು ವಂಶಾಭಿವೃದ್ಧಿಯನ್ನು ಮುಂದುವರೆಸುತ್ತದೆ. ಮುಂಗಾರು ಮಳೆಯ ತೇವಾಂಶದಲ್ಲಿ ರೋಗಾಣು ಅಲ್ಪ ಸಮಯದಲ್ಲಿ ವೃದ್ಧಿಸಿ ಬೀಜಕಣಗಳನ್ನು ಉತ್ಪತ್ತಿ ಮಾಡುತ್ತದೆ. ಈ ಬೀಜಕಣಗಳು ನೀರಿನ ಮೂಲಕ ಬೇರುಗಳನ್ನು ಸೇರಿ, ಬೇರು ಕೊಳೆಯುದಕ್ಕೆ ಕಾರಣವಾಗುತ್ತದೆ.

ರೋಗದ ಸಮಗ್ರ ಹತೋಟಿ ಕ್ರಮಗಳು :       

 • ರೋಗ ಬಾಧೆಯಿರುವ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು.
 • ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ನಿರ್ಮಿಸುವುದು ಸೂಕ್ತ.
 • ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು.
 • ರೋಗರಹಿತ ಬಳ್ಳಿ ಮತ್ತು ರೋಗಾಣು ಮುಕ್ತ ಮಣ್ಣನ್ನು ಸಸಿ ಮಾಡಲು ಉಪಯೋಗಿಸಬೇಕು.
 • ನೆಲದ ಮೇಲೆ ಹರಡಿರುವ ಮತ್ತು ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿನ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆಕಟ್ಟಿ ಬೆಳೆಯಲು ಬಿಡಬೇಕು.
 • ಗಿಡದ ಬುಡದಲ್ಲಿ ಹಸಿರೆಲೆಗೊಬ್ಬರ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಸುವುದರಿಂದ ರೋಗಾಣುವಿನ ಹರಡುವಿಕೆಕಡಿಮೆ ಮಾಡಬಹುದು.
 • ಕಾಳುಮೆಣಸು ಬೆಳೆಸುವ ತೋಟದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನಆದ್ಯತೆಕೊಡಬೇಕು.
 • ತೋಟದಲ್ಲಿ ಬಳ್ಳಿಗಳಿಗೆ ಎಲೆಗಳಿಂದ ಹೊದಿಕೆ ಮಾಡತ್ತಿರಬೇಕು ಮತ್ತು ಮಳೆಗಾಲದಲ್ಲಿ ಮಣ್ಣಿನ ಅಗೆತದ ಕೆಲಸ ಮಾಡಬಾರದು.
 • ಪ್ರತಿ ಬಳ್ಳಿಗೆ 50 ರಿಂದ 60 ಗ್ರಾಂ. ಟ್ರೆöÊಕೋಡರ್ಮಾ ವಿರಿಡೆಅಥವಾ ಟ್ರೈಕೋಡರ್ಮಾ ಹಾರ್ಜಿಯಾನಂ ಜೈವಿಕ ಶಿಲೀಂಧ್ರವನ್ನು 1 ಕಿ. ಗ್ರಾಂ. ಬೇವಿನ ಹಿಂಡಿಅಥವಾ 5 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರ ಮಾಡಿ ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ಬುಡಕ್ಕೆ ಹಾಕುವುದು ಒಳಿತು.
 • ಮುಂಗಾರಿನ ಮುಂಚೆ ನೆಲದಿಂದ 1 ಮೀ.ಎತ್ತರದವರೆಗೆ ಬಳ್ಳಿಯ ಕಾಂಡಕ್ಕೆ ಶೇ. 10 ರ ಬೋರ್ಡೋ ಪೇಸ್ಟನ್ನು ಲೇಪಿಸಬೇಕು.
 • ಹೊಸದಾಗಿ ನಾಟಿ ಮಾಡಿದ ಚಿಗುರು ಬೆಳೆಯುವ ಹಬ್ಬು ಬಳ್ಳಿಗಳನ್ನು ನೆಲದ ಮೇಲೆ ಹರಡಲು ಬಿಡದಂತೆ ಆಧಾರ ಗಿಡಕ್ಕೆ ಎತ್ತಿ ಕಟ್ಟುತ್ತಿರಬೇಕು.
 • ಆಧಾರಗಿಡದ ರೆಂಬೆಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಕತ್ತರಿಸುವುದರಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಉಂಟಾಗದಂತೆ ಹಾಗೂ ಸೂರ್ಯರಶ್ಮಿ ನೆಲಮಟ್ಟದವರೆಗೂ ತಲುಪುವಂತೆ ನೋಡಿಕೊಳ್ಳುವುದರಿಂದ ರೋಗದ ತೀವ್ರತೆ ಕಡಿಮೆಗೊಳಿಸಬಹುದು.
 • ಶೇ. 0.25ರ ಮೆಟಲಾಕ್ಸಿಲ್‌ಎಮ್ 8% + ಮ್ಯಾಂಕೊಝೆಬ್ 64% ಡಬ್ಲೂ.ಪಿ ಶಿಲೀಂಧ್ರನಾಶಕವನ್ನು ಪ್ರತಿ ಬಳ್ಳಿಗೆ 2 ರಿಂದ 3 ಲೀಟರ್‌ನಂತೆ ಸಿಂಪಡಿಸಬೇಕು.

ಚಿಬ್ಬುರೋಗ/ಪೊಳ್ಳು ರೋಗ

 • ಈ ರೋಗವು ಮುಂಗಾರಿನ ಕೊನೆಯಲ್ಲಿ ಕಂಡುಬರುತ್ತದೆ.
 • ವಜ್ರಾಕಾರದ ಅಥವಾ ವೃತ್ತಾಕಾರದ ಬೂದು ಬಣ್ಣದ ಚುಕ್ಕೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ತುದಿ ಭಾಗದ ಕಾಂಡಕ್ಕೂ ಹರಡಿ ಕಾಂಡ ಒಣಗುತ್ತದೆ.
 • ಆರಂಭಿಕ ಹಂತದಲ್ಲಿ ಕಾಳುಗಳಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ, ಇದರಿಂದ ಕಾಳಿನ ಬೆಳವಣಿಗೆಗೆ ಅಡಚಣೆಯಾಗುತ್ತದೆ.
 • ನಂತರದ ಹಂತದಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಳಿನ ಮೇಲೆ ಹರಡಿಕೊಳ್ಳುದಲ್ಲದೆ, ಕಾಳುಗಳಲ್ಲಿ ಅಡ್ಡ ಸೀಳುಗಳು ಕಾಣಿಸಿಕೊಳ್ಳುತ್ತವೆ.
 • ಅಂತಿಮವಾಗಿ ಕಾಳುಗಳು ಕಪ್ಪು ವರ್ಣಕ್ಕೆತಿರುಗಿಒಣಗುತ್ತವೆ.

ರೋಗಾಣು ಮತ್ತುರೋಗದ ಪ್ರಸರಣೆ:

 • ಈ ರೋಗವು ಕೊಲೆಟೊ ಟ್ರೈಕಮ್‌ಗ್ಲೀಯೋ ಸ್ಪೋರಿಯೊಡ್ಸ್ ಶಿಲೀಂಧ್ರದಿಂದ ಉಂಟಾಗುತ್ತದೆ.
 • ಪ್ರಾಥಮಿಕವಾಗಿ ಈ ರೋಗವು ಸೋಂಕಿತ ಬಳ್ಳಿಗಳನ್ನು ನಾಟಿ ಮಾಡುವುದರಿಂದ ಉಂಟಾಗುತ್ತದೆ, ನಂತರ ಗಾಳಿಯ ಮುಖಾಂತರ ಸೋಂಕಿತ ಬಳ್ಳಿಯಿಂದ ಆರೋಗ್ಯಕರ ಬಳ್ಳಿಗೆ ರೋಗವು ಹರಡುತ್ತದೆ.

ನಿರ್ವಹಣಾ ಕ್ರಮಗಳು:

 • ತೋಟದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
 • ರೋಗ ಪೀಡಿತ ಬಳ್ಳಿಗಳನ್ನು ತೆಗೆದು ನಾಶಪಡಿಸಬೇಕು.
 • ಪ್ರತಿ ಲೀಟರ್ ನೀರಿಗೆ 1 ಗ್ರಾಂ. ಕಾರ್ಬಂಡಜಿಮ್ 50 ಡಬ್ಲೂ.ಪಿ. ಬೆರೆಸಿ ಸಿಂಪಡಿಸಿ ಅಥವಾ ಹೆಕ್ಸಾಕೋನಜೋಲ್ 5 ಇ.ಸಿ 1 ಮಿ.ಲೀ. ಬೆರೆಸಿ ಸಿಂಪಡಿಸಿ.

ಸ್ಟಂಟ್‌ರೋಗ:

 • ವೈರಸ್‌ಗಳಿಂದ ಉಂಟಾಗುವ ಈ ರೋಗವು ಕೇರಳದ ಕಣ್ಣೂರು, ವೈನಾಡ್, ಕಾಸರಗೋಡು, ಕೋಝಿಕೋಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ, ಕರ್ನಾಟಕದ ಕೊಡಗು, ಹಾಸನ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಕಂಡುಬಂದಿದೆ.
 • ಈ ರೋಗಕ್ಕೆತುತ್ತಾದ ಬಳ್ಳಿಗಳಲ್ಲಿ ಗೆಣ್ಣುಗಳ ನಡುವಿನ ಅಂತರ ಕಡಿಮೆಯಾಗುತ್ತದೆ.
 • ಎಲೆಗಳ ಗಾತ್ರಕಡಿಮೆಯಾಗಿ, ಎಲೆಗಳಲ್ಲಿ ವಿವಿಧರೀತಿಯ ವಿರೂಪತೆಗಳು ಕಂಡು ಬರುತ್ತವೆ.
 • ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಮತ್ತು ಗೆರೆಗಳು ಸಹ ಕಂಡುಬರುತ್ತದೆ.

ರೋಗದ ಪ್ರಸರಣ:

 • ಈ ರೋಗ ಪ್ರಸರಣದ ಪ್ರಮುಖ ವಿಧಾನವೆಂದರೆ ನಾಟಿ ಸಮಯದಲ್ಲಿ ರೋಗಪೂರಿತ ಸಸಿಗಳ ಬಳಕೆ ಮಾಡುವುದು.
 • ಇದಲ್ಲದೆ ಸಸ್ಯ ಹೇನುಗಳು ಮತ್ತು ಹಿಟ್ಟುತಿಗಣೆಗಳು ಕೂಡ ಈ ರೋಗವನ್ನು ಒಂದು ಬಳ್ಳಿಯಿಂದ ಇನ್ನೊಂದು ಬಳ್ಳಿಗೆ ಹರಡಿಸಲು ಸಹಕಾರಿಯಾಗುತ್ತವೆ.

ನಿರ್ವಹಣಾ ಕ್ರಮಗಳು

 • ನಾಟಿ ಸಮಯದಲ್ಲಿ ರೋಗ ಮುಕ್ತ ಸಸಿಗಳ ಬಳಕೆ ಮಾಡುವುದು.
 • ನಿಯಮಿತವಾಗಿ ಬಳ್ಳಿಗಳ ಪರಿಶೀಲನೆ ಮಾಡುವುದು ಮತ್ತು ರೋಗಕಂಡು ಬಂದಲ್ಲಿ ಅಂತಹ ಬಳ್ಳಿಗಳನ್ನು ಕಿತ್ತುತೋಟದಿಂದ ಹೊರಗೊಯ್ದು ನಾಶಪಡಿಸುವುದು.
 • ಸಸ್ಯಹೇನುಗಳು ಮತ್ತು ಹಿಟ್ಟುತಿಗಣೆಗಳ ನಿರ್ವಹಣೆಗೆ ಶೇ. 0.3 ರಿಮಿಡಾಕ್ಲೋಪ್ರಿಡ್ ಪೀಡೆನಾಶಕವನ್ನು ಸಿಂಪರಣೆ ಮಾಡಬೇಕು.

ಲೇಖನ: ಮಹಂತೇಶ್ ಪಿ. ಎಸ್.ಮತ್ತು ಸ್ವಾತಿ ಶೆಟ್ಟಿ ವೈ ಸಂಶೋಧನಾ ಸಹಾಯಕರು, ನೈಸರ್ಗಿಕ ಕೃಷಿ (ZBNF) ಯೋಜನೆ ZAHRS, ಬ್ರಹ್ಮಾವರ, ಉಡುಪಿ

Published On: 12 September 2021, 04:22 PM English Summary: Diseases in black pepper and management

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.