1. ಅಗ್ರಿಪಿಡಿಯಾ

ಹಾರುವ ಹೂಗಳೆಂದು ಕರೆಯಲ್ಪಡುವ ಚಿಟ್ಟೆಗಳ ಮಹಿಮೆ ನಿಮಗೆಷ್ಟು ಗೊತ್ತು... ಇಲ್ಲಿದೆ ಸಂಪೂರ್ಣ ಮಾಹಿತಿ

butter fly

ಚಿಟ್ಟೆಗಳು, ಹಾರುವ ಹೂಗಳಿದ್ದಂತೆ.  ಇವುಗಳು ನೈಸರ್ಗಿಕವಾಗಿ ಸೃಷ್ಠಿಯಾಗಿರುವ ಅದ್ಭುತ ಸುಂದರ ಗುಣಗಳನ್ನು ಹೊಂದಿದ್ದು, ಇದನ್ನು ಮಕ್ಕಳಿಂದ ವಯಸ್ಕರಿಗೂ ಸಹ  ಇಷ್ಟವಾಗುವಂತಹದು.  ಚಿಟ್ಟೆ ಉದ್ಯಾವನ ಎಲ್ಲರನ್ನೂ ಆಕರ್ಷಿಸುವ ಮತ್ತು ಪ್ರೀತಿಸುವಂತಹ ವನ.  ಚಿಟ್ಟೆ ತನ್ನ ಜೀವನ ಚಕ್ರವು ನಾಲ್ಕು ಹಂತದಲ್ಲಿ ಮುಗಿಸುತ್ತದೆ.  ಅವುಗಳೆಂದರೆ ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಚಿಟ್ಟೆ. ಒಂದೊಂದು ಹಂತವು ಒಂದೊಂದು ರೂಪವನ್ನು ಹೊಂದಿರುತ್ತದೆ.  ಮರಿಹುಳುಗಳು ಅತಿ ಹೆಚ್ಚು ತಿನ್ನುತ್ತವೆ ಮತ್ತು ವಯಸ್ಕ ಚಿಟ್ಟೆ ಸಂತಾನೋತ್ಪತ್ತಿ ಮಾಡುತ್ತವೆ.  ವಿಭಿನ್ನ ತಳಿಯ ಚಿಟ್ಟೆಗಳು ತಮ್ಮ ಜೀವನ ಚಕ್ರಗಳನ್ನು ಒಂದು ತಿಂಗಳಿಂದ ಒಂದು ವರ್ಷದ ತನಕ ಬದಲಾಗುತ್ತಿರುತ್ತವೆ.

ಚಿಟ್ಟೆ ತೋಟದ ವನ ರೂಪಿಸುವುದು

ತೆರೆದ ಚಿಟ್ಟೆ ಉದ್ಯಾನವನವನ್ನು ಸ್ಥಾಪಿಸಲು ಉತ್ತಮವಾದ ಯೋಜನೆ ಅಗತ್ಯ.  ಅಸ್ತಿತ್ವದಲ್ಲಿರುವ ಮರಗಳನ್ನು ಹಾಗೆಯೇ ಉಳಿಸಿಕೊಂಡು ಉದ್ಯಾನವನವನ್ನು ಸೂರ್ಯನ ಬೆಳಕಿನ ಅಗತ್ಯಕ್ಕನುಗುಣವಾಗಿ ಹೂ ಬಿಡುವ ಮರವನ್ನು ಯೋಜಿಸಿ ನೆಡಬೇಕು.  ಕ್ಯಾಟರ್‌ಪಿಲ್ಲರ್‌ಗಳ ಆಹಾರಕ್ಕಾಗಿ ಪೂರೈಸಲು ವಾರ್ಷಿಕ ಸಸ್ಯಗಳನ್ನು ಪದೇ ಪದೇ ನೆಡಬೇಕು.

ಉದ್ಯಾನದಲ್ಲಿ ಕಿರಿದಾದ ಪಾದಚಾರಿ ರಸ್ತೆ ಇರಬೇಕು.  ಕಿರಿದಾದ ದಾರಿಯಲ್ಲಿನ ಹೂಗಿಡಗಳು ಚಿಟ್ಟೆಯನ್ನು ಆಕರ್ಷಿಸುತ್ತದೆ ಅದನ್ನು ಪ್ರವಾಸಿಗರು ಛಾಯಾಚಿತ್ರ ತೆಗೆದುಕೊಳ್ಳುತ್ತಾರೆ.  ಚಿಟ್ಟೆಗಳ ಜೀವನದಲ್ಲಿ ಸೂರ್ಯನ ಬೆಳಕು ಬಹಳ ಮುಖ್ಯ.  ಏಕೆಂದರೆ ಅವು ಶೀತಲ ರಕ್ತದ ಪ್ರಾಣಿಗಳು ಮತ್ತು ಬೆಳಗ್ಗೆ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಸೂರ್ಯನ ಬೆಳಕಿನ ಅಗತ್ಯತೆ ಹೆಚ್ಚು.  ದೊಡ್ಡ ಮರಗಳನ್ನು ನೆಡುವುದರಿಂದ ಅದು ನೆರಳನ್ನು ಸೃಷ್ಠಿ ಮಾಡುತ್ತದೆ.  ಆದ್ದರಿಂದ ಚಿಟ್ಟೆಗಳ ಸಂಖ್ಯೆ ಕಡಿಮೆ ಆಗುತ್ತದೆ.  ಆದರೆ ಪ್ರವಾಸಿಗರಿಗೆ ಸಣ್ಣ ನೆರಳಿನ ಪ್ರದೇಶವನ್ನು ಮರಗಳಿಂದ ಸೃಷ್ಠಿ ಮಾಡಬೇಕು.

ಚಿಟ್ಟೆ ಉದ್ಯಾನವನದ ವಿನ್ಯಾಸ ಮತ್ತು ವೈಶಿಷ್ಟ್ಯಗಳು:

 1. ಸ್ಥಳದ ಆಯ್ಕೆ:

ಚಿಟ್ಟ ಉದ್ಯಾವನವನ್ನು ಮಾಡುವ ಸ್ಥಳ ಸಾಕಷ್ಟು ಸೂರ್ಯರಶ್ಮಿ ಮತ್ತು ಗಾಳಿಯಿಂದ ಕೂಡಿರಬೇಕು.  ಹಾಗೂ ಗಾಳಿತಡೆಗಳನ್ನು ನಿರ್ಮಿಸಬೇಕು.  ಆದರೆ ಸೂರ್ಯನ ಬೆಳಕನ್ನು ಕಡಿಮೆ ಮಾಡಬಾರದು.  ಉದ್ಯಾನವನದ ವಿನ್ಯಾಸದಲ್ಲಿ ಎತ್ತರವಾಗಿ ನೀಡುವ ಸಸ್ಯವನ್ನು ಮತ್ತು ಮಕರಂದ ಸಸ್ಯಗಳನ್ನು ನೆಡಬೇಕು.  ಆದ್ದರಿಂದ ಹೆಚ್ಚು ಚಿಟ್ಟೆಗಳು ಆಕರ್ಷಿಸುತ್ತದೆ.

 1. ಮಕರಂದ ಸಿಗುವ ಸಸಿಗಳು:

ಚಿಟ್ಟೆ ಮಕರಂದವನ್ನು ಬೇರೆ ಬೇರೆ ಗಿಡಗಳಿಂದ ಸಂಗ್ರಹಿಸುತ್ತವೆ. ಅವುಗಳಲ್ಲಿ ಮುಖ್ಯ ಗಿಡಗಳೆಂದರೆ ಚಿಟ್ಟೆ ಕಳೆ(Asclepias tuberose), ಚಿಟ್ಟೆ ಪೊದೆ, ಚೆಂಡು ಹೂ, ಲ್ಯಾಂಟೆನಾ, ಆಸ್ಟರ್, ಡೇ ಲಿಲ್ಲಿ, ಜೀನಿಯಾ, ಗ್ಲೋಬ್ ಅಮರಾಂತ್ರಸ್.

ವಿವಿಧ ರೀತಿಯ ಚಿಟ್ಟೆಗಳು ಬೇರೆ ಬೇರೆ ಬಣ್ಣಗಳಿಗೆ ಆಕರ್ಷಿತವಾಗುತ್ತವೆ.  ಉದಾಹರಣೆಗೆ ಬಣ್ಣಗಳು: ಕೆಂಪು, ನೀಲಿ,ಪಿಂಕ್, ಬಿಳಿ ಮತ್ತು ಪರ್ಪಲೊ ಹೈಗಳಿಂದ ನಿರ್ಮಿಸಿದ ಉದ್ಯಾನವನದಲ್ಲಿ  ಮಕರಂದ ವರ್ಷಪೂರ್ತಿ ಸಿಗುವಂತೆ ಇರಬೇಕು.

 1. ಆತಿಥೇಯ ಸಸ್ಯ:

ಈ ಗಿಡಗಳ ಮೇಲೆ ಹೆಣ್ಣು ಚಿಟ್ಟೆ ಮೊಟ್ಟೆಯನ್ನು ಇಡುತ್ತವೆ ಮತ್ತು ಕ್ಯಾಟರ್‌ಪಿಲ್ಲರ್‌ಗಳಿಗೆ ಆಹಾರದ ಮೂಲ ಆತಿಥೇಯ ಸಸ್ಯದ ಮೇಲೆ ಅವಲಂಬಿಸಿರುತ್ತದೆ.

ಆತಿಥೇಯ ಸಸ್ಯಗಳ ಉದಾಹರಣೆ ಎಂದರೆ ಪಗೋಡ ಸಸ್ಯ, ಕುಫಿಯ, ಗ್ಲೋರಿಯೊಸ ಸೂಪರ್ಬ, ದಾಸವಾಳ, ಇಕ್ಸೋರ, ಮುಸಂದ್ರ ಮತ್ತು ಕರಿಬೇವಿನ ಮರ.

 1. ಆಶ್ರಯ:

ಚಿಟ್ಟೆಗಳಿಗೆ ಮಳೆ, ಗಾಳಿ, ವಿಪರೀತ ತಾಪಮಾನ ಮತ್ತು ಪರಭಕ್ಷಕಗಳಿಂದ ರಕ್ಷಣೆಬೇಕು.  ಈ ಉದ್ದೇಸಕ್ಕಾಗಿ ವ್ಯಾಪಕ ದಟ್ಟ ಪೊದೆಗಳು ಮತ್ತು ಮರಗಳನ್ನು ನೆಡುವುದು ಅವಶ್ಯಕ.

 1. ಖನಿಜ ಮತ್ತು ಪೋಷಣೆ:

ಚಿಟ್ಟೆಗಳಿಗೆ ಖನಿಜ ಮತ್ತು ನೀರು ಬೇಕಾಗುತ್ತದೆ.  ಅವು ನೀರಿನ ಸುತ್ತಳಿನ ತೇವಾಂಶವುಳ್ಳ  ಪ್ರದೇಶದಿಂದ ತೇವಾಂಶ ಮತ್ತು ಖನಿಜವನ್ನು ಹೀರಿಕೊಳ್ಳುತ್ತವೆ.  ಇದನ್ನು ಮಣ್ಣಿನ ಕೊಚ್ಚೆಗುಂಡಿಯೆAದು ಕರೆಯುತ್ತಾರೆ.  ಪಕ್ಷಿ ಸ್ನಾನ ಕೊಳವನ್ನು ಮಾಡುವ ರೀತಿ ಸಣ್ಣ ಪಾತ್ರೆಯನ್ನು ಮಣ್ಣಿನಲ್ಲಿ ಊಳಬೇಕು ಮತ್ತು ಒದ್ದೆಯಾದ ಮರಳಿನಿಂದ ಅದನ್ನು ತುಂಬಿಸಿ ಮರಳಿನ ಮೇಲೆ ಕೆಲವು ಕೊಂಬೆಗಳನ್ನು ಮತ್ತು ಬಂಡೆಯನ್ನು ಇರಿಸಬೇಕು.

 1. ಚಿಟ್ಟೆಗಳಿಗೆ ಸೂರ್ಯನ ಬಿಸಿಲು ಕಾಯುವ ಸ್ಥಳಗಳು:

ಚಿಟ್ಟೆಗಳಿಗೆ ರಕ್ತ ಮತ್ತು ಹಾರಾಟದ ಸ್ನಾಯುಗಳನ್ನು ಬೆಚ್ಚಗಾಗಲು ಸೂರ್ಯನ ಬೆಳಕು ಬೇಕು.  ಆದುದರಿಂದ ಸೂರ್ಯನ ಬೆಳಕನ್ನು ಹೆಚ್ಚು ಹೊಂದಿರುವ ಉದ್ಯಾನದ ವಿವಿಧ ಸ್ಥಳಗಳಲ್ಲಿ ವಿವಿಧ ಆಕಾರ ಮತ್ತು ಬಣ್ಣಗಳ ಕಲ್ಲುಗಳನ್ನು ಇರಿಸುವ ಮೂಲಕ ಅಲ್ಲಿ ಚಿಟ್ಟೆಗಳು ತಮ್ಮ ಬ್ಯಾಸ್ಕಿಂಗ್ ತಾಣವಾಗಿ ಆನಂದಿಸಬಹುದು.

 1. ಪೂರಕ ಆಹಾರ:

ಮಳೆಗಾಲದಲ್ಲಿ ಚಿಟ್ಟೆಗೆ ತೋಟದಲ್ಲಿ ಪೂರಕ ಆಹಾರ ಒದಗಿಸುವುದು ಬಹಳ ಮುಖ್ಯ.  ಎಲ್ಲ ಚಿಟ್ಟೆಗಳು ಹೂವಿನ ಮಕರಂದವನ್ನೇ ಮಾತ್ರ ತಿನ್ನುವುದಿಲ್ಲ,  ಕೆಲವು ಜೇನು ತುಪ್ಪ, ಮರದ ಸ್ಯಾಪ್, ಮಾಗಿದ ಅಥವಾ ಕೊಳೆತ ಹಣ್ಣುಗಳು, ಸಗಣಿ ಮತ್ತು ಮಣ್ಣನ್ನು ಸುಲಭವಾಗಿ ತಿನ್ನುತ್ತವೆ.  ಅಂತಹ ಚಿಟ್ಟೆಯ ಆಹಾರಗಳನ್ನು ಸ್ಥಳೀಯವಾಗಿ ಅಥವಾ ಮನೆಯಲ್ಲಿ ತಯಾರಿಸಬಹುದು.  ಉದಾಹರಣೆ: ಸಕ್ಕರೆಯ ಪಾಕ (1:2) ವನ್ನು ಚಿಟ್ಟೆಗಳಿಗೆ ಪೂರಕ ಆಹಾರವನ್ನು ಒದಗಿಸಬೇಕು.

ಚಿಟ್ಟೆ ಉದ್ಯಾನವನ್ನು ನಿರ್ಮಿಸಲು ಸಲಹೆಗಳು:

 • ಸಾಕಷ್ಟು ಸೂರ್ಯನ ಬೆಳಕು ಅಗತ್ಯವಿರುವ ಸ್ಥಳವನ್ನು ಆಯ್ಕೆಮಾಡುವುದು.
 • ಉದ್ಯಾನವನಕ್ಕೆ ಸೂಕ್ತವಾದ ಸಸಿಗಳನ್ನು ಆಯ್ಕೆಮಾಡುವುದು.
 • ಗಿಡಗಳ ಹೆಚ್ಚಿನ ಬೆಳವಣಿಗೆಗೆ ಮತ್ತು ಹೂವಿನ ಉತ್ಪಾದನೆಯನ್ನು ಹೆಚ್ಚಿಸಲು ಗಿಡಗಳಿಗೆ ನೀರು ಮತ್ತು ಹಸಿರು ಎಲೆ ಗೊಬ್ಬರವನ್ನು ಕೊಟ್ಟು ಪೋಷಿಸುವುದು.
 • ತೋಟದಲ್ಲಿ ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು.
 • ನಿಮ್ಮ ತೋಟದಲ್ಲಿ ಚಿಟ್ಟೆಯನ್ನು ಪೊದೆ ಆಕರ್ಷಿಸುವ ಜಾತಿಯ ಗಿಡಗಳನ್ನು ಗುರುತಿಸಿ ಮತ್ತು ಚಿಟ್ಟೆಯ ಹೆಚ್ಚಿನ ಆನಂದಕ್ಕಾಗಿ ಸ್ಥಳೀಯ ಜಾತಿಯ ಸಸ್ಯಗಳನ್ನು ನೆಡುವುದು.
 • ಮೈಕ್ರೊ ಕ್ಲೆಮ್ಯಾಟ್ ರಚಿಸಲು ಸಹಾಯ ಮಾಡುವ ವಿಭಿನ್ನ ಎತ್ತರ ಬೆಳೆಯುವ ಸಸ್ಯಗಳನ್ನು ಆರಿಸಿ ಮೈಕ್ರೊ ಕ್ಲೆಂಮ್ಯಾಟ್‌ನ್ನು ರಚಿಸಿ.  ಇದರಿಂದ ಹೆಚ್ಚು ವ್ಯೆವಿಧ್ಯತೆ ಸೃಷ್ಠಿಯಾಗಿ ಚಿಟ್ಟೆಗಳನ್ನು ಆಕರ್ಷಿಸುತ್ತದೆ.

ಭಾರತದ ಚಿಟ್ಟೆ ಉದ್ಯಾನವನಗಳು:

 1. ಚಿಟ್ಟೆ ಉದ್ಯಾನ, ಬೆಂಗಳೂರು
 2. ಚಿಟ್ಟೆ ಉದ್ಯಾನ, ಚಂಡೀಗಡ್
 3. ಗೋವಾದ ಬಟರ್‌ಪ್ಲೆ ಕನ್ಸರ್‌ವೇಟರಿ
 4. ಬಟರ್‌ಪ್ಲೆ ಪಾರ್ಕ್ ರಾಮೋಜಿ ಪಿಲ್ಮ್ ಸಿಟಿ, ಹೈದರಾಬಾದ್

ಲೇಖನ: ಪ್ರದೀಪ್ ಕುಮಾರ್, ಸಿ. ಎಂ., ಚಂದ್ರಶೇಖರ್, ಎಸ್. ವೈ., ಹರೀಶ್ ಕುಮಾರ್, ಕೆ. ಮತ್ತು ಭಾನುಪ್ರಕಾಶ್ ಜಿ. ಸಿ ತೋಟಗಾರಿಕಾ ಮಹಾವಿದ್ಯಾಲಯ, ಮೂಡಿಗೆರೆ

Published On: 16 July 2021, 09:13 PM English Summary: Butterfly garden

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.