1. ಅಗ್ರಿಪಿಡಿಯಾ

ಜೈವಿಕ ಕೀಟ ನಿಯಂತ್ರಣದಲ್ಲಿ ಗುಲಗಂಜಿ ಹುಳು

ಇತ್ತೀಚಿನ ದಿನಗಳ ಸಸ್ಯಸಂರಕ್ಷಣೆಯಲ್ಲಿ ಅನೇಕ ತರಹದ ಕೀಟನಾಶಕಗಳ ಬಳಕೆಯಾಗುತ್ತಿದ್ದು , ಇದರಿಂದ ಅನೇಕ ಹಾನಿಕಾರಕ ರಾಸಾಯನಿಕ ಪದಾರ್ಥಗಳು ಮಣ್ಣು, ಮನುಷ್ಯ, ಪರಿಸರಕ್ಕೆಅನೇಕ ತರದ ತೊಂದರೆಕ್ಕಿಡುಮಾಡುತ್ತಿವೆ. ಹಾಗೂ ಅಧಿಕ ವೆಚ್ಚದ ಕೀಟನಾಶಕಗಳ ಬಳಕಯಿಂದರೈತರ ಉತ್ಪಾದನಾ ವೆಚ್ಚಸಹ ಏರುತ್ತಿದ್ದು, ನೀರಿಕ್ಷಿತ ಮಟ್ಟದ ಆದಾಯ ಸಿಗುತ್ತಿಲ್ಲ. ಹಾಗಾಗಿ ಎಲ್ಲದ್ದಕ್ಕೂ ಈಗಿನ ಪರಿಹಾರವೆಂದರೆ ಜೈವಿಕ ಕೀಟ ನಿಯಂತ್ರಣ (biological control of insects).

*ಗುಲಗಂಜಿ ಹುಳು ( Lady bird beetle) :

ಗುಲಗಂಜಿ ಹುಳುವು ಕೊಲಿಯೋಪ್ಟೆರ ಗುಂಪಿನ ಕಾಕ್ಸಿನೆಲ್ಲಿಡೆ ಕುಟುಂಬಕ್ಕೆ ಸೇರಿದೆ. ಈಕೀಟವು ಜೈವಿಕ ಕೀಟ ನಿಯಂತ್ರಣದ ಒಂದು ಅಂಗವಾಗಿದೆ.

*ಜೀವನಚಕ್ರ:

ಹೆಣ್ಣು ಗುಲಗಂಜಿ ಹುಳು 10-15 ಹಳದಿ ಬಣ್ಣದಮೊಟ್ಟೆಗಳನ್ನು ಸಸ್ಯದ ಎಲೆಗಳ ಮೇಲೆ ಇಡುತ್ತದೆ.

ಈ ಮೊಟ್ಟೆಗಳನ್ನು ತುಂಬಾ ಸುರಕ್ಷಿತ ಹಾಗೂ ಹುಟ್ಟುವ ಲಾರ್ವಾಗಳಿಗೆ ಆಹಾರ ಇರುವ ಜಾಗದಲ್ಲಿ ಇಡುತ್ತದೆ.

ಮೊಟ್ಟೆಗಳಿಂದ ಹೊರಬಂದ ಲಾರ್ವಾಗಳು ಗಿಡದಲ್ಲಿರುವ ಸಸ್ಯ ಹೇನು ( aphid),ಬಿಳಿನೊಣ(white fly), ಮುಂತಾದ ರಸ ಹೀರುವ ಕೀಟಗಳನ್ನು ಹುಡುಕಿ ತಿನ್ನುತ್ತವೆ.

ರೂಪಾಂತರ ಹೊಂದಿದ ( first instar) ಲಾರ್ವದಿನಕ್ಕೆ 300-400 ಸಸ್ಯಹೇನುಗಳನ್ನು ತಿನ್ನುವ ಸಾಮರ್ಥ್ಯಹೊಂದಿವೆ.

ಲಾರ್ವಗಳು ಒಟ್ಟು 4 ರೂಪಾಂತರ ಹೊಂದಿದನಂತರ ಕೋಶಾವಸ್ಥೆಯನ್ನು(pupal stage) ತಲುಪುತ್ತವೆ.ಹಾಗೂ ಹಳದಿ ಅಥವಾ ಕಿತ್ತಳೆ ಬಣ್ಣ ಜೊತೆ ಕಪ್ಪು ಪಟ್ಟಿ ಹೊಂದಿದ್ದು, ಎಲೆಗಳ ಮೇಲೆ ಯಾವುದೇ ಚಲನೆಯನ್ನುಹೊಂದಿರುವುದಿಲ್ಲ.

*ಈ ಕೀಟದ ಲಾರ್ವಾಗಳು ಮೊಟ್ಟೆಯಿಂದ ಹೊರ ಬಂದ ನಂತರ ತುಂಬಾ ಹಸಿದಿರುವುದರಿಂದ ಮೊಟ್ಟೆಇಡುವ ಸ ಮಯದಲ್ಲಿ ಹೆಣ್ಣು ಕೀಟವು ಹಲವು ಖಾಲಿಮೊಟ್ಟೆಗಳನ್ನುಇಟ್ಟು ತನ್ನ ಮರಿಗಳಿಗೆ ಆಹಾರ ಒದಗಿಸುತ್ತದೆ.

ಹೊಲ/ಗದ್ದೆಗಳಲ್ಲಿ  ಗುಲಗಂಜಿ ಹುಳುವಿನ ಆಕರ್ಷಣೆ ಮತ್ತು ಸಂರಕ್ಷಣೆ:

ಈ ಕೀಟವು ಹೂಗಳ ಪರಾಗ(pollen) ಹಾಗೂ ಮಕರಂದ ( nectar) ತಿನ್ನುತ್ತವೆ, ಹಾಗೂ ಇವು ಬಿಳಿ ಅಥವಾ ಹಳದಿ ಬಣ್ಣದ ಹೂವುಗಳಿಗೆ ಬೇಗ ಆಕರ್ಷಿತವಾಗುತ್ತವೆ.

ಇವುಗಳು ರಸಹೀರುವ ಕೀಟಗಳಿಂದ ವಿಸರ್ಜಿಸಲ್ಪಡುವ ದ್ರಾವಣ ( honey dew) ಸಹ ತಿಂದು ಜೀವಿಸುತ್ತವೆ.

ಹಲವಾರು ಸಸ್ಯಗಳಲ್ಲಿ ಉದಾಹರಣೆಗೆ ಹತ್ತಿ ಗಿಡದಲ್ಲಿ ಇರುವ ನೆಕ್ಟರೀಸ್ ಎಂಬ ಅಂಗದಿಂದ ಸ್ರವಿಸಲ್ಪಡುವ ದ್ರಾವಣವನ್ನು ಸಹ ತಿನ್ನುತ್ತವೆ.

ಎಲ್ಲಾ ಕೀಟಗಳಂತೆ ಇದಕ್ಕೂಸಹ ನೈಸರ್ಗಿಕ ಶತ್ರುಗಳಿದ್ದು, ಅವುಗಳಲ್ಲಿ ಕೆಲವು ಪರಾವಲಂಬಿಕಣಜ ( wasp), ಟೆಚೇನಿಡ್ ನೊಣ, ಇರುವೆಗಳು ಇವೆಲ್ಲವೂ ಈ ಕೀಟವನ್ನು ಭಾದಿಸದಂತೆ ನೋಡಿಕೊಳ್ಳಬೇಕು.

ಹಲವಾರು ಕೀಟನಾಶಕಗಳು ಇವಕ್ಕೆ ಹಾನಿಕಾರಕ ಆಗಿರುವುದರಿಂದ ಅವುಗಳನ್ನು ಬಳಸದೆ ಬೇರೆ ಬಳಸಬೇಕು.

ಲೇಖಕರು: ಆತ್ಮಾನಂದ ಹೈಗರ್

Published On: 30 December 2020, 09:30 AM English Summary: biological control of insects

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.