1. ಅಗ್ರಿಪಿಡಿಯಾ

ಮನೆಯಲ್ಲಿರುವ ಹುಳಿಮಜ್ಜಿಗೆಯಿಂದಲೇ ಬೆಳೆಗಳ ರೋಗ ನಿಯಂತ್ರಣ

ಮಜ್ಜಿಗೆ ಹುಳಿಯಾಗಿದೆ ಎಂದು ಎಸೆಯುವುದರ ಬದಲು ಅದರಿಂದಲೇ ಬೆಳೆಗಳಿಗೆ ತಗಲುವ ಹಲವಾರು ರೋಗ ಮತ್ತು ಕೀಟಬಾಧೆಗಳನ್ನು ತಡೆಯಬಹುದು ಎಂಬುದು ಬಹುತೇಕ ರೈತರಿಗೆ ಗೊತ್ತಿರಲಿಕ್ಕಿಲ್ಲ. ಹೌದು. ಹುಳಿ ಮಜ್ಜಿಗೆಯನ್ನು ಕೀಟನಾಶಕ, ರೋಗಗಳ ನಿಯಂತ್ರಣಕ್ಕೂ ಬಳಸಬಹುದು.

ಒಂದು ದೇಸಿ ಹಸುವಿನ ಉಳಿ ಮಜ್ಜಿಗೆ ಮತ್ತು ಗೋವಿನ ಗಂಜಲದಲ್ಲಿ ಹಲವಾರು ರೋಗಗಳ ನಿಯಂತ್ರಣ ಶಕ್ತಿ ಹೊಂದಿದೆ. ಸುಲಭವಾಗಿ ತಯಾರಿಸಿ ಮತ್ತು ಹೆಚ್ಚು ರೋಗಗಳನ್ನು ನಿಯಂತ್ರಿಸಬಹುದು. ನೀವು ಕೂಡ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.  ಬನ್ನಿ ಹುಳಿ ಮಜ್ಜಿಗೆ  ಹೇಗೆ ತಯಾರಿಸಬೇಕೆಂಬುದನ್ನು ನೋಡೋಣ.

ಇದನ್ನೂ ಓದಿ:ಮೀನು ಟಾನಿಕ್ ಉತ್ತಮ ಪೌಷ್ಠಿಕಾಂಶ ನೀಡುವ ಗೊಬ್ಬರ

ತಯಾರಿಕೆಗೆ ಬೇಕಾಗುವ ಪದಾರ್ಥಗಳು

 *1 ಲೀಟರ್ ಹುಳಿಮಜ್ಜಿಗೆ

* 1 ಲೀಟರ್ ಗೋವಿನ ಗಂಜಲ

* 8 ಲೀಟರ್ ನೀರು

ತಯಾರಿಸುವ ವಿಧಾನ

 ಮೊದಲಿಗೆ ಹುಳಿಮಜ್ಜಿಗೆ ಎಂದರೆ, ತಾಜಾ ಮಜ್ಜಿಗೆಯನ್ನು ಐದು ದಿನಗಳ ಕಾಲ ಒಂದು ತಣ್ಣನೆಯ ಪ್ರದೇಶದಲ್ಲಿ ಇಡಬೇಕಾಗುತ್ತದೆ.ನಂತರ ನಮಗೆ ಅದು ಹುಳಿಮಜ್ಜಿಗೆ ಆಗಿ ಸಿಗುತ್ತದೆ.ನಂತರ ಇಟ್ಟಿರುವ ಒಂದು ಲೀಟರ್ ಹುಳಿಮಜ್ಜಿಗೆ ಯನ್ನು ಒಂದು ಲೀಟರ್ ಗೋವಿನ ಗಂಜಲದ ದೊಂದಿಗೆ ಮಿಶ್ರಣ ಮಾಡಬೇಕು.ನಂತರ ಈ ಹುಳಿಮಜ್ಜಿಗೆ ಮತ್ತು ಗೋವಿನ ಗಂಜಲ ಮಿಶ್ರಣವನ್ನು ಎಂಟು ಲೀಟರ್ ನೀರಿಗೆ ಸೇರಿಸಿ,ನಂತರ ನಾವು ಇದನ್ನು ಸಿಂಪರಣೆ ಗಾಗಿ ಬಳಸಬಹುದು.

ಪ್ರಯೋಜನಗಳು

* ಹಲವಾರು ಬೆಳೆಗಳಲ್ಲಿ ಬೂದಿ ರೋಗ ನಿಯಂತ್ರಣ ಮಾಡುತ್ತದೆ.

* ಹಲವಾರು ಬೆಳೆಗಳಲ್ಲಿ ಎಲೆಚುಕ್ಕೆ ರೋಗಗಳ ನಿಯಂತ್ರಣ ಮಾಡುತ್ತದೆ.

* ಪ್ರಮುಖವಾಗಿ ಇದು ಗೋಧಿ ರಸ್ಟ್ ಅಥವಾ ಗೋಧಿಯಲ್ಲಿ ಬರುವ ಬೆಂಕಿ ರೋಗವನ್ನು ಹೋಗಲಾಡಿಸುವ ಗುಣ ಹೊಂದಿದೆ.

* ಸಿಡಬು ರೋಗ ಸಹ ನಿಯಂತ್ರಣ ಮಾಡುತ್ತದೆ.

* ಅಥವಾ 5 ಲೀಟರ್ ಹುಳಿ ಮಜ್ಜಿಗೆಯನ್ನು ಎರಡುನೂರು ಲೀಟರ್ ನೀರಿನಲ್ಲಿ ಹಾಕಿ ನಾವು ಬೆಳೆಗಳಿಗೆ ಸಿಂಪರಣೆ ಮಾಡಿದರೆ ಅದು ಒಂದು ಸಸ್ಯ ಪ್ರಚೋದಕವಾಗಿಯೂ ಸಹ ಕೆಲಸ ಮಾಡುತ್ತದೆ.

 ಲೇಖಕರು :  ಮುತ್ತಣ್ಣ ಬ್ಯಾಗೆಳ್ಳಿ

Published On: 19 December 2020, 09:19 AM English Summary: Benefits of Buttermilk spray on insecticides and pesticides

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.